Film Theatres: ರಾಜ್ಯ ಸರ್ಕಾರದ ಕೋವಿಡ್ ನಡೆಗೆ ಬೇಸರ: ಮೈಸೂರಿನಲ್ಲಿ ಇಂದಿನಿಂದ ಚಿತ್ರಮಂದಿರ ಬಂದ್...!

ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಚಿತ್ರಮಂದಿರಗಳ ಮಾಲೀಕರು, ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದು, ಇಂದಿನಿಂದ ಮೈಸೂರಿನಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದಾರೆ. 

Edited by - Yashaswini V | Last Updated : Jan 21, 2022, 10:37 AM IST
  • ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಚಿತ್ರಮಂದಿರಗಳ ಮಾಲೀಕರು
  • ರಾಜ್ಯ ಸರ್ಕಾರದ ಕಠಿಣ ನಿಯಮಗಳ ಜೊತೆ ಉದ್ಯಮ ನಡೆಸಲು ಹಿಂದೇಟು ಹಾಕುತ್ತಿರುವ ಚಿತ್ರಮಂದಿರದ ಮಾಲೀಕರು
  • ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನು ತೆರೆಯದಿರಲು ಚಿತ್ರಮಂದಿರ ಮಾಲೀಕರ ಸಂಘದಿಂದ ನಿರ್ಧಾರ
Film Theatres: ರಾಜ್ಯ ಸರ್ಕಾರದ ಕೋವಿಡ್ ನಡೆಗೆ ಬೇಸರ: ಮೈಸೂರಿನಲ್ಲಿ ಇಂದಿನಿಂದ ಚಿತ್ರಮಂದಿರ ಬಂದ್...! title=
Cinema Halls Bandh in Mysuru

ಮೈಸೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 19  ಸೋಂಕು ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಹಾಗೂ ಪ್ರಮುಖ ಸ್ಥಳ, ಚಿತ್ರಮಂದಿರಗಳಲ್ಲಿ 50-50 ರ ನಿಯಮ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಚಿತ್ರಮಂದಿರಗಳ ಮಾಲೀಕರು  ಮೈಸೂರಿನಲ್ಲಿ  ಇಂದಿನಿಂದಲೇ ಚಲನಚಿತ್ರ ಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ.

ವಾಸ್ತವವಾಗಿ, ಕರೋನಾವೈರಸ್ (Coronavirus) ಸಾಂಕ್ರಾಮಿಕದಿಂದಾಗಿ ಇತ್ತೀಚೆಗಷ್ಟೇ ವ್ಯಾಪಾರ, ವ್ಯವಹಾರಗಳು ತಹಬದಿಗೆ ಬರುತ್ತಿತ್ತು. ಆದರೆ, ಇದೀಗ ಕರೋನಾ ಸೋಂಕು ಮತ್ತೆ ಉಲ್ಬಣಗೊಂಡಿದ್ದು ಸರ್ಕಾರ ಕರೋನಾ ನಿಯಂತ್ರಣಕ್ಕಾಗಿ ಮತ್ತೆ ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಇದನ್ನೂ ಓದಿ- ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಸಹಾಯಧನ ಶೇ.50 ಕ್ಕೆ ಏರಿಕೆ

ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ಚಿತ್ರಮಂದಿರಗಳ ಮಾಲೀಕರು, ವೀಕೆಂಡ್ ಕರ್ಫ್ಯೂ (Weekend Curfew) ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದು, ಇಂದಿನಿಂದ ಮೈಸೂರಿನಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದಾರೆ. 

ಇದನ್ನೂ ಓದಿ- Camel Viral Video: ತನಗೆ ತೊಂದರೆ ಕೊಡಲು ಬಂದವನಿಗೆ ತಕ್ಕ ಪಾಠ ಕಲಿಸಿದ ಒಂಟೆ ವಿಡಿಯೋ ವೈರಲ್

ಬಹುತೇಕ ವೀಕೆಂಡ್ ನಲ್ಲೇ ಶೇ.60ರಷ್ಟು ವ್ಯಾಪಾರ ವಹಿವಾಟು ನಡೆಯುತ್ತೆ. ಆದರೆ ವೀಕೆಂಡ್ ಕರ್ಫ್ಯೂ ನಿಂದಾಗಿ ಶನಿವಾರ, ಭಾನುವಾರ ಚಿತ್ರಮಂದಿರ ತೆಗೆಯುವಂತಿಲ್ಲ. ಅಲ್ಲದೆ ನೈಟ್ ಕರ್ಫ್ಯೂ ನಿಂದ ರಾತ್ರಿ ಪ್ರದರ್ಶನಕ್ಕೂ ಜನರಿಲ್ಲದ ಪರಿಸ್ಥಿತಿ ಇದೆ. 50-50ರ ನಿಯಮದಲ್ಲಿ ಚಿತ್ರಮಂದಿರ ನಡೆಸಲು ಆಗ್ತಿಲ್ಲ. ಹಾಗಾಗಿ ಕರ್ಫ್ಯೂ ತೆಗೆಯುವ ವರೆಗೂ ಚಿತ್ರಮಂದಿರ ಬಂದ್ ಗೆ ನಿರ್ಧಾರ ಮಾಡಲಾಗಿದೆ ಎಂದು  ಚಿತ್ರಮಂದಿರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಾರಾಂ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News