Corona Vaccine: ಕೊರೊನಾ ವೈರಸ್ ವಿರುದ್ಧ ತಯಾರಿಸಲಾದ ಕೋವಾಕ್ಸಿನ್ (COVAXIN) ಮತ್ತು ಕೋವಿಶೀಲ್ಡ್ (Covishield) ಶೀಘ್ರದಲ್ಲೇ ನಿಮ್ಮ ಸ್ಥಳೀಯ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾರಾಟವಾಗಲಿದೆ. ಕೇಂದ್ರ ಸರ್ಕಾರದ ಸಮಿತಿ ಎಸ್‌ಇಸಿ ಎರಡೂ ಲಸಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿ ನೀಡಿದೆ.
ಬುಧವಾರ ನಡೆದ ಎಸ್ಇಸಿಯ ಸಭೆಯಲ್ಲಿ ಮಹತ್ವದ ನಿರ್ಧಾರ:
ಮಾಹಿತಿಯ ಪ್ರಕಾರ, ಎಸ್ಇಸಿಯ ಮಹತ್ವದ ಸಭೆ ಬುಧವಾರ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ತಜ್ಞರು ಲಸಿಕೆ (Corona Vaccine) ಪ್ರಯೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೆ, ಕಳೆದ ಒಂದು ವರ್ಷದಲ್ಲಿ, ಎರಡೂ ಲಸಿಕೆಗಳ ಪರಿಣಾಮ ಮತ್ತು ಅಡ್ಡಪರಿಣಾಮಗಳ ಬಗ್ಗೆಯೂ ಇಲ್ಲಿ ಚರ್ಚಿಸಲಾಗಿದೆ.
ಇದನ್ನೂ ಓದಿ- ಋತುಚಕ್ರದ ಮೇಲೆ ಪರಿಣಾಮ ಬೀರುತ್ತಾ ಕೋವಿಡ್-19 ಲಸಿಕೆ? ಹೀಗೆನ್ನುತ್ತೆ ಅಧ್ಯಯನ
ಎರಡೂ ಕಂಪನಿಗಳು ವ್ಯವಸ್ಥೆಯನ್ನು ಸಿದ್ಧಪಡಿಸಬೇಕು:
ಸುದೀರ್ಘ ಚರ್ಚೆಯ ನಂತರ ಎರಡೂ ಲಸಿಕೆಗಳನ್ನು ತುರ್ತು ಬಳಕೆಯ ಸ್ಥಿತಿಯಿಂದ ಹೊರತೆಗೆದು ಮಾರುಕಟ್ಟೆಗೆ ಹಾಕುವ ನಿರ್ಧಾರಕ್ಕೆ ತಜ್ಞರು ಒಪ್ಪಿಗೆ ಸೂಚಿಸಿದರು. ಸಮಿತಿಯ ಈ ನಿರ್ಧಾರದ ನಂತರ, ಈಗ ಸೀರಮ್ ಇನ್‌ಸ್ಟಿಟ್ಯೂಟ್ (Serum Institute) ಮತ್ತು ಭಾರತ್ ಬಯೋಟೆಕ್ (Bharat Biotech) ಎರಡೂ ದೇಶಾದ್ಯಂತ ತಮ್ಮ ವಿತರಣಾ ವ್ಯವಸ್ಥೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಅದರ ನಂತರ ಅವರು ತಮ್ಮ ಲಸಿಕೆಯನ್ನು ಎಲ್ಲಾ ಆಸ್ಪತ್ರೆಗಳು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ತಲುಪಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- UAE: ಈ ದೇಶದಲ್ಲಿಲ್ಲ ಓಮಿಕ್ರಾನ್‌ನ ಟೆನ್ಷನ್!
ಲಸಿಕೆಗಳನ್ನು ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದು:
ಅಂದರೆ, ಈಗ ಕರೋನಾ ಲಸಿಕೆಯನ್ನು ಪಡೆಯದವರು ಸರ್ಕಾರದಿಂದ ನೀಡಲಾಗುವ ಕರೋನಾ ಸ್ಲಾಟ್ ಗಾಗಿ ಕಾಯುವ ಆಗತ್ಯವಿಲ್ಲ. ಇಲ್ಲವೇ, ಇದಕ್ಕಾಗಿ ಅವರು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಅವರು ತಮ್ಮ ಹತ್ತಿರದ ಮೆಡಿಕಲ್ ಸ್ಟೋರ್‌ನಿಂದ ಲಸಿಕೆಯನ್ನು ಖರೀದಿಸಿ ಯಾವುದೇ ವೈದ್ಯರಿಂದ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ದೇಶದಲ್ಲಿ ವ್ಯಾಕ್ಸಿನೇಷನ್‌ನ ವೇಗವೂ ಹೆಚ್ಚುತ್ತದೆ ಮತ್ತು ಸರ್ಕಾರದ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ. ಅದಾಗ್ಯೂ, ಮಾರುಕಟ್ಟೆಯಲ್ಲಿ ಈ ಲಸಿಕೆಗಳ ಬೆಲೆ ಎಷ್ಟು ಎಂದು ಇನ್ನೂ ಘೋಷಿಸಲಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.