ಮೇಡ್ ಇನ್ ಇಂಡಿಯಾ, 'ಚಿಂಗಾರಿ' ಹೆಸರಿನ ಕಿರು ವಿಡಿಯೋ ತಯಾರಿಕಾ ಅಪ್ಲಿಕೇಶನ್ ತನ್ನ ಬಳಕೆದಾರರಿಗಾಗಿ ಮೊದಲ ಡಿಜಿಟಲ್ ಟ್ಯಾಲೆಂಟ್ ಹಂಟ್ ಶೋ ಅನ್ನು ಲಾಂಚ್ ಮಾಡಿದೆ. ಈ ಷೋಗೆ 'ಚಿಂಗರಿ ಸ್ಟಾರ್ಸ್: ಟ್ಯಾಲೆಂಟ್ ಕಾ ಮಹಾಸಂಗ್ರಾಮ್' (Chingari Stars: Talent Ka Mahasangram) ಎಂದು ಹೆಸರಿಸಲಾಗಿದೆ. ಈ ಷೋನಲ್ಲಿ ಗೆಲ್ಲುವ ಬೆಸ್ಟ್ ಕಂಟೆಂಟ್ ಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತಿದೆ.
ಚೀನಾ ಮೂಲದ ಉತ್ಪನ್ನಗಳನ್ನು ಆಯಾ ದೇಸಿ ಪರ್ಯಾಯಗಳೊಂದಿಗೆ ಬದಲಿಸಲು ಹೆಚ್ಚಿನ ಒತ್ತು ನೀಡುತ್ತಿರುವ ಸಂದರ್ಭದಲ್ಲಿ, ಈಗ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಜನಪ್ರಿಯ ವಿಡಿಯೋ-ಹಂಚಿಕೆ ಅಪ್ಲಿಕೇಶನ್ ಟಿಕ್ ಟಾಕ್ ( TikTok ) ಗೆ ಪರ್ಯಾಯವಾದ ಆಯ್ಕೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.