Ramzan: ರಾಜ್ಯದಾದ್ಯಂತ ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ನಗರದ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
GO BACK ಭಾಸ್ಕರ್ ರಾವ್.. ಹೈಕಮಾಂಡ್ಗೆ ಪತ್ರ ರವಾನೆ ಚಾಮರಾಜಪೇಟೆ BJPಯಲ್ಲಿ ಅಲ್ಲೋಲ ಕಲ್ಲೋಲ..! - ಬಿಜೆಪಿ ಮಂಡಳ ಅಧ್ಯಕ್ಷ ಚನ್ನಕೇಶವ ಹೇಳಿಕೆ - ಭಾಸ್ಕರ್ರಾವ್ ಬೆಂಬಲಿಸಲ್ಲ.. ಇಡೀ ಮಂಡಳ ರಾಜೀನಾಮೆ ಕೊಡ್ತೀವಿ
ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಮೆಜೆಸ್ಟಿಕ್, ಕಾರ್ಪೊರೇಷನ್, ಶಾಂತಿನಗರ, ಚಾಮರಾಜಪೇಟೆ, ಟ್ರಿನಿಟಿ, MG ರೋಡ್, ಬಿಟಿಎಂ ಲೇಔಟ್, ಹೆಚ್ಎಸ್ಆರ್ ಲೇಔಟ್ ಸೇರಿದಂತೆ ಎಲ್ಲೆಡೆ ಭಾರೀ ಮಳೆಯಾಗಿದೆ..
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕಂದಾಯ ಇಲಾಖೆ ಅಧಿಕಾರಿಗಳ ಮಹತ್ವದ ಮೀಟಿಂಗ್ ನಡೆಯಲಿದೆ. ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದೆ. ಈದ್ಗಾ ಮೈದಾನದ ಬಳಕೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಸದ್ಯಕ್ಕಂತೂ ಬಗೆಹರಿಯೋ ಲಕ್ಷಣ ಕಾಣ್ತಿಲ್ಲ.. ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಸಚಿವ ಆರ್.ಅಶೋಕ್ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದ ವಿವಾದ ಯಾಕೋ ಮುಕ್ತಾಯವಾಗುವ ಲಕ್ಷಣ ಕಾಣುತ್ತಿಲ್ಲ. ಮತ್ತೆ ಮತ್ತೆ ಹೊಸ ಹೊಸ ವಿವಾದಗಳು ಕೇಳಿ ಬರುತ್ತಲೇ ಇವೆ. ಹೌದು, ಈಗ ಮತ್ತೊಂದು ವಿಚಾರವಾಗಿ ಹಿಂದೂಪರ ಸಂಘಟನೆಗಳು ಧ್ವನಿ ಎತ್ತಿವೆ.
ಕಳೆದೊಂದು ತಿಂಗಳಿನಿಂದ ಚಾಮರಾಜಪೇಟೆ ಈದ್ಗಾ ಮೈದಾನ ಭೂ ಮಾಲಿಕತ್ವ ವಿವಾದ ಚರ್ಚೆಯಲ್ಲಿದೆ. ಸದ್ಯ ಈ ಮೈದಾನ ಯಾರಿಗೆ ಸೇರಿದ್ದು ಎಂಬ ಕುರಿತು ಬಿಬಿಎಂಪಿ ವರ್ಸಸ್ ವಕ್ಫ್ ಬೋರ್ಡ್ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.
ಈದ್ಗಾ ಮೈದಾನ ವಿಚಾರ ಯಾಕೋ ತಣ್ಣಗಾಗುವ ಲಕ್ಷಣ ಕಾಣಿಸ್ತಿಲ್ಲ. ಬದಲಾಗಿ ಈದ್ಗಾ ವಿವಾದದ ಕಿಚ್ಚು ಮತ್ತಷ್ಟು ರಾಜಿಕೊಳ್ತಿದೆ.ಮೈದಾನದ ಜಟಾಪಟಿ ಬಂದ್ ವರೆಗೂ ಬಂದು ತಲುಪಿದೆ. ಇದೇ 12ಕ್ಕೆ ಚಾಮರಾಜಪೇಟೆಯನ್ನ ಸಂಪೂರ್ಣ ಬಂದ್ ಮಾಡಲು ಕ್ಷೇತ್ರದ ಜನ ನಿರ್ಧರಿಸಿದ್ದು, ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರವಾಗ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.