ಬೆಂಗಳೂರು: ಈದ್ಗಾ ಮೈದಾನ ವಿಚಾರ ಯಾಕೋ ತಣ್ಣಗಾಗುವ ಲಕ್ಷಣ ಕಾಣಿಸ್ತಿಲ್ಲ. ಬದಲಾಗಿ ಈದ್ಗಾ ವಿವಾದದ ಕಿಚ್ಚು ಮತ್ತಷ್ಟು ರಾಜಿಕೊಳ್ತಿದೆ.ಮೈದಾನದ ಜಟಾಪಟಿ ಬಂದ್ ವರೆಗೂ ಬಂದು ತಲುಪಿದೆ. ಇದೇ 12ಕ್ಕೆ ಚಾಮರಾಜಪೇಟೆಯನ್ನ ಸಂಪೂರ್ಣ ಬಂದ್ ಮಾಡಲು ಕ್ಷೇತ್ರದ ಜನ ನಿರ್ಧರಿಸಿದ್ದು, ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರವಾಗ್ತಿದೆ.
ಚಾಮರಾಜಪೇಟೆ ಆಟದ ಮೈದಾನ ವಿವಾದ, ದಿನಕ್ಕೊಂದು ಟ್ವಿಸ್ಟ್ ಪಡೀತಿದೆ. ಮೈದಾನವನ್ನ ಯಾವ್ದೇ ಕಾರಣಕ್ಕೂ ಬಿಟ್ಟು ಕೊಡಲ್ಲ..ರಕ್ತಕೊಟ್ಟಾದ್ರೂ ಚಾಮರಾಜಪೇಟೆ ಆಟದ ಮೈದಾನವನ್ನು ಉಳಿಸಿಕೊಳ್ತೇವೆ ಅಂತ ಸ್ಥಳೀಯರು ಬಿಗಿ ಪಟ್ಟು ಹಿಡಿದಿದ್ದಾರೆ.ಅಲ್ಲದೆ ಹಿಂದೂಗಳನ್ನು ಕೆಣಕ್ಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಶಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ಬೃಹತ್ ಮೆರವಣಿಗೆ;
ಈದ್ಗಾ ಆಟದ ಮೈದಾನ ಉಳಿವಿಗಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಹಾಗೂ 25ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಬಂದ್ ಗೆ ಕರೆಯನ್ನ ನೀಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಬಂದ್ ಆಗಲಿದ್ದು, ಬಂದ್ ದಿನ ಬೆಳಗ್ಗೆ 10 ಗಂಟೆಯಿಂದ ಸಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ಬೃಹತ್ ರ್ಯಾಲಿ ಮಾಡಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ, ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಪತ್ರ ನೀಡಲಿದ್ದಾರೆ. ಇನ್ನೂ ಇವತ್ತು ಸಂಜೆಯಿಂದ ಮನೆ ಮನೆಗೆ ತೆರಳಿ ಬಿತ್ತಿಪತ್ರವನ್ನ ನೀಡಿ, ಬಂದ್ ನಲ್ಲಿ ಭಾಗಿಯಾಗುವಂತೆ ಕರೆ ನೀಡ್ತಿದ್ದಾರೆ.
ಚಾಮರಾಜಪೇಟೆಯ ಜಂಗಮ ಮಂಟಪದಲ್ಲಿ ನಡೆದ ಸಭೆಯಲ್ಲಿ, ಜಯಕರ್ನಾಟಕ ಸಂಘಟನೆ ಬಂದ್ ಗೆ ಕರೆ ನೀಡ್ತು. ಇದಕ್ಕೆ ಉಳಿದ ಸಂಘಟನೆಗಳು ಕೂಡ ಕೈಜೋಡಿಸಿದ್ವು. ಬಂದ್ ದಿನ ಜನ ಸ್ವಯಂ ಪ್ರೇರಿತವಾಗಿ ಆಗಮಿಸಲಿದ್ದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದಾರೆ.
ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ;
ಇನ್ನು ಸಭೆ ಆರಂಭವಾಗುತ್ತಿದ್ದಂತೆ ಗದ್ದಲ ಶುರುವಾಗಿತ್ತು.ಶಾಸಕ ಜಮೀರ್ ಗೆ ಆಹ್ವಾನ ನೀಡಿದ್ದರಿಂದ ಇತರೆ ಸದಸ್ಯರು ಕೆಂಡಾಮಂಡಲಾಗಿದ್ದರು. ಜಮೀರ್ ಬಂದ್ರೆ ನಾವು ಹೊರಟು ಹೋಗ್ತೀವಿ ಅಂತ ಗಲಾಟೆ ನಡೆಸಿದ್ರು. ಮುಖಂಡರು ಮಧ್ಯ ಪ್ರವೇಶಿಸಿ, ಪೊಲೀಸರಿಂದ ಶಾಸಕರಿಗೆ ಮಾಹಿತಿ ಹೋಗಿದ್ಯಷ್ಟೆ. ನಾವು ಅವ್ರನ್ನ ಆಹ್ವಾನಿಸಿಲ್ಲ ಅಂತ ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು. ಬಳಿಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕುತ್ತಾ, ಯಾವ್ದೆ ಕಾರಣಕ್ಕೂ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇದು ಸರ್ಕಾರ ಆಸ್ತಿ, ಆಟದ ಮೈದಾನವಾಗಿಯೇ ಇರಬೇಕು ಎಂದು ಒತ್ತಾಯಿಸಿದರು.
ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್ ನಡುವಿನ ಜಟಾಪಟಿಗೆ ಅಂತ್ಯ ಹಾಕಲು ಸ್ಥಳೀಯರೇ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೀಗಾಗಿ ಜುಲೈ 12 ರಂದು ನಡೆಯೋ ಬಂದ್ ಬಂದ್ ನ ಸ್ವರೂಪ ಹೇಗಿರುತ್ತೆ, ಈದ್ಗಾ ಮೈದಾನ ಯಾರ ಪಾಲಾಗುತ್ತೆ ಅನ್ನೋದ್ನ ಕಾದುನೋಡ್ಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ