*/
/*-->*/
CBSE Class 12 Exams 2021 - 12 ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರೊಂದಿಗೆ ನಡೆಯುತ್ತಿದ್ದ ಉನ್ನತ ಮಟ್ಟದ ಸಭೆ ಮುಕ್ತಾಯಗೊಂಡಿದೆ. ಸಭೆಯ ವೇಳೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಪರೀಕ್ಷೆಗಳನ್ನು ನಡೆಸುವುದರ ಸಂಬಂಧ ಎಲ್ಲ ರಾಜ್ಯಗಳಿಂದ ಲಿಖಿತ ರೂಪದಲ್ಲಿ ಉತ್ತರ ನೀಡಲು ಕೋರಿದ್ದಾರೆ. ಆದರೆ, ಎರಡು ದಿನಗಳೊಳಗೆ ಅಂದರೆ ಮೇ 25 ರೊಳಗೆ ರಾಜ್ಯಗಳ ಶಿಕ್ಷಣ ಸಚಿವರು ಉತ್ತರಿಸಬೇಕಾಗಿದ್ದು, ಎಲ್ಲ ರಾಜ್ಯಗಳಿಂದ ಉತ್ತರ ಪಡೆದ ಬಳಿಕ ಮೇ 30 ರಂದು ಪರೀಕ್ಷೆಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.
CBSE Board Exams 2021 ಪರೀಕ್ಷೆಯ ವೇಳಾಪಟ್ಟಿ ಘೋಷಣೆಯ ಕುರಿತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ತಿಳಿದುಕೊಳ್ಳಲು ಸಂಪೂರ್ಣ ವರದಿ ಓದಿ.
ಈ ಕುರಿತು ಹೇಳಿಕೆ ನೀಡಿರುವ CBSE ಮಂಡಳಿಯ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ, ನಿಗದಿತ ಕಾರ್ಯಕ್ರಮದಂತೆಯೇ 10ನೇ ಮತ್ತು 12ನೇ ತರಗತಿಗಾಗಿ ಪರೀಕ್ಷೆಗಳು ನಡೆಯಲಿದ್ದು, ಶೀಘ್ರದಲ್ಲಿಯೇ ವೇಳಾಪಟ್ಟಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.