ಕೈಕೊಟ್ಟ ಜಗದೀಶ್ ಶೆಟ್ಟರ್ ಮಣಿಸಲು ಬಿಜೆಪಿ ರಣತಂತ್ರ. ಯಡಿಯೂರಪ್ಪ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ. ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ಮಣಿಸಲು ಕೇಸರಿ ಸ್ಕೆಚ್. ಲಿಂಗಾಯತ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು BSY ಪ್ಲ್ಯಾನ್. ಸಂಜೆ ಬೆಂಗಳೂರಿನಲ್ಲಿ BJP ಲಿಂಗಾಯತ ನಾಯಕರ ಸಭೆ ನಿಗದಿ.
Karnataka Election 2023 : ಯಡಿಯೂರಪ್ಪರ ರಾಜಕೀಯ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿತ್ತು ಸಿಕೆಆರ್ 454. ನಾಮಪತ್ರ ಸಲ್ಲಿಸುವಾಗಲೆಲ್ಲಾ ಈ ನಂಬರ್ ಶುಭಶಕುನವನ್ನೇ ನುಡಿಯುತ್ತಿತ್ತು. ತಂದೆಯ ಪಾಲಿಗೆ ಅದೃಷ್ಟ ತಂದಿದ್ದ ಈ ನಂಬರ್ ಮಗನಿಗೂ ಲಕ್ಕಿಯಾಗಿ ಸಾಬೀತಾಗಲಿದೆಯಾ ?
ಶಿವಮೊಗ್ಗ BSY ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.. ಇನ್ನೊಂದು ಕಡೆ ಬಂಧಿಸಿದವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ ಬಂಜಾರ ಸಮುದಾಯದಿಂದ ಪ್ರತಿಭಟನೆ ನಡೀತಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನಕ್ಕೆ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ನನ್ನ ಮನಸ್ಸಿಗೆ ತುಂಬಾ ನೋವಾಯ್ತು. ಬಹಳ ಒಳ್ಳೆಯ ಪ್ರಾಮಾಣಿಕ, ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ವ್ಯಕ್ತಿ. ನನ್ನ ಆತ್ಮೀಯ ಸ್ನೇಹಿತ ಕೂಡ ಹೌದು ಎಂದಿದ್ದಾರೆ.
ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುತ್ತೆ ಅಂತ ತಮ್ಮ ಹೇಳಿಕೆ ಬಗ್ಗೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಯಾವುದೇ ಕ್ಷೇತ್ರದಲ್ಲಿ ಇಂಥವರಿಗೆ ಸಿಗುತ್ತೆ, ಇಂಥವರಿಗೆ ಸಿಗಲ್ಲ ಅಂತ ನಾನು ಹೇಳಿಲ್ಲ. ಚುನಾವಣಾ ಸಮಿತಿ ಜೊತೆ ಕೂತುಕೊಂಡು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.