ʻಆ ದಿನಗಳʼ ಯಾವ ರೌಡಿಗಳು ನಮ್ಮ ಹತ್ರ ಇಲ್ಲ. ಬಿಜೆಪಿ ಕೊತ್ವಾಲ್ ಹಾಗೂ ಅವರ ಶಿಷ್ಯರನ್ನ ಸಾಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.. ಬೊಮ್ಮಾಯಿ ಅವರನ್ನ ರೌಡಿ ಅಂತ ಹೇಳಲು ಆಗಲ್ಲ ಎಂದಿದ್ದಾರೆ..
ನಾವು ಆರಂಭ ಮಾಡಿದ್ದ ಕಳಸಾ-ಬಂಡೂರಿ ಹೋರಾಟಕ್ಕೆ ನಮ್ಮಿಂದಲೇ ಮೋಕ್ಷ ಎಂದು ಗದಗ ಜಿಲ್ಲೆ ನರಗುಂದದಲ್ಲಿ ಸಚಿವ ಸಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ. ಬೊಮ್ಮಾಯಿಯವರು ಎಂಎಲ್ಸಿ ಇದ್ದಾಗ ರಕ್ತದಿಂದ ಪತ್ರ ಬರೆದಿದ್ರು. ಇದು ನಮ್ಮ ಸರ್ಕಾರದ ನಿಯತ್ತು.. ನಮ್ಮ ಸರ್ಕಾರದ ತಾಕ್ಕತು ಎಂದು ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪದ ದರ್ಗಾ ತೆರವು ಪ್ರದೇಶಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡೋ ಸಾಧ್ಯತೆ ಇದೆ. ಸಂಜೆ ಅಧಿವೇಶನದ ನಂತರ ಹುಬ್ಬಳ್ಳಿಯ ಹಜರತ್ ಸೈಯದ್ ಮೊಹ್ಮದ್ ಖಾದ್ರಿಶಾ ದರ್ಗಾ ಪ್ರದೇಶಕ್ಕೆ ಸಿಎಂ ಆಗಮಿಸೋ ಸಾಧ್ಯತೆ ಇದೆ..
ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆ ನನಗಿಲ್ಲ, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲ್ಲ- ಇಲ್ಲಿಗೆ ಬಂದರೆ ಪುಣ್ಯ ಸಂಪಾದನೆ ಆಗಲಿದೆ, ಪುಣ್ಯವಂತರಾಗುತ್ತಾರೆ, ಚಾಮರಾಜನಗರದಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿ ಮಾಡಲಿದ್ದು ಯುವಕರು, ಬಡವರಿಗೆ ಉದ್ಯೋಗ ಸಿಗಲಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಸಮಾಜವಾದಿ ರಾಜಕಾರಣಿ ಸಿದ್ದರಾಮಯ್ಯ ಅವರಿಂದ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿದರೂ ಸಹ ತದನಂತರ ಬಂದ ಬಿ.ಎಸ್.ಯಡಿಯೂರಪ್ಪ ಗಡಿಜಿಲ್ಲೆಗೆ ಕಾಲಿಡಲೇ ಇಲ್ಲ- ಆದರೆ ಬೊಮ್ಮಾಯಿ ಈಗ ಎರಡನೇ ಬಾರಿಗೆ ಗಡಿಜಿಲ್ಲೆಗೆ ಆಗಮಿಸುತ್ತಿದ್ದು ನೂರಾರು ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಿಎಂ ಬೊಮ್ಮಾಯಿ ಅವರು ನಂದಿನ ಹಾಲು ಹಾಗೂ ಮೊಸರಿನ ದರ ಹೆಚ್ಚಳವನ್ನು ತಡೆದಿದ್ದು, ಸಿಎಂ ಸೂಚನೆ ನಂತರ ದರ ಏರಿಕೆ ಆದೇಶವನ್ನು ಕೆಎಂಎಫ್ ಹಿಂಪಡೆದಿದೆ. ಕೆಎಂಎಫ್ ಇಂದಿನಿಂದಲೇ ಜಾರಿಗೆ ಬರುವಂತೆ ನಂದಿನ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಹಾಲಿನ ದರ ಏರಿಕೆ ಬಗ್ಗೆ ನವೆಂಬರ್ 20 ರಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಅಲ್ಲದೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.. ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.