ಬೀದರ್ನ ಬಸವ ಕಲ್ಯಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಖಾಕಿ ಸರ್ಪಗಾವಲು ಹಾಕಲಾಗಿದೆ. ನಮ್ಮ ನಡೆ ಮೂಲ ಅನುಭವ ಮಂಟಪ ಕಡೆ ಮಠಾಧೀಶರ ರ್ಯಾಲಿ ಹಿನ್ನೆಲೆ ಸಿಪಿಐ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಬೀದರ್ ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಬೀದರ್ ಪ್ರವೇಶಕ್ಕೆ ಯತ್ನಿಸಿದ ಶ್ರೀರಾಮ ಸೇನೆ ಪ್ರಮೋದ್ ಮುತಾಲಿಕ್ ಅವರನ್ನು ಗಡಿಯಲ್ಲೇ ಪೊಲೀಸರು ತಡೆದಿದ್ದಾರೆ. ಬೀದರ್ ಜಿಲ್ಲೆ ಪ್ರವೇಶ ಯತ್ತಿಸಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ರಾಜ್ಯಾಧ್ಯಕ್ಷರಾದ ಸಿದ್ದಲಿಂಗಸ್ವಾಮಿ ಅವರನ್ನು ಪೊಲೀಸರು ಮಾರ್ಗ ಮಧ್ಯವೇ ತಡೆಹಿಡಿದಿದ್ದಾರೆ.
ಔರಾದ್ ತಾಲೂಕಿನ ಎಕಲಾರ ಗ್ರಾಮ ಪಂಚಾಯತ ವ್ಯಾಪ್ತಿಯ ತುಳಜಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ತಿಂಗಳುಗಳೆ ಕಳೆದಿವೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೋಬ್ಬರು ಕೂಡ ಸಮಸ್ಯೆ ಪರಿಹರಿಸಿಲ್ಲ.
ಬೀದರ್: ಗ್ರಾಮ ಪಂಚಾಯತ್ ಸದಸ್ಯನ ಮದುವೆ ಮೆರವಣಿಗೆಯಲ್ಲಿ ಬಹಿರಂಗವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿದ ಘಟನೆ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
Corona Vaccine Side Effect - ಕೊರೊನಾ ವ್ಯಾಕ್ಸಿನ್ ಪಡೆದು 12 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಇವರೆಲ್ಲರೂ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಜನತಾನಗರ ಬಡಾವಣೆಯ ವಸತಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ.
ಗಾಂಧಿ ಕುಟುಂಬ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸುವುದು ಹೊಸದೇನಲ್ಲ,ಏಕೆಂದರೆ ಈ ಹಿಂದೆ ಒಮ್ಮೆ ಇಂದಿರಾಗಾಂಧಿ ಚಿಕ್ಕಮಂಗಳೂರಿನಿಂದ ಸ್ಪರ್ಧಿಸಿ ರಾಜಕೀಯ ಪುನರ್ಜನ್ಮ ಪಡೆದಿದ್ದರೆ,ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿ ರಾಜಕೀಯಕ್ಕೆ ಪ್ರವೇಶಿಸಿದ್ದರು. ಈಗ ಎಲ್ಲವೂ ಅಂದುಕೊಂಡಂತೆ ಆದಲ್ಲಿ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಯುಪಿಎ ಸರ್ಕಾರ ಫ್ರಾನ್ಸ್ ನಿಂದ ಪ್ರತಿ ರಾಫೆಲ್ ಯುದ್ಧ ವಿಮಾನವನ್ನು ರೂ.565 ಕೋಟಿ ರೂ.ಗಳಿಗೆ ಕೊಳ್ಳುವ ಇಂಗಿತ ವ್ಯಕ್ತ ಪಡಿಸಿತ್ತು. ಆದರೆ, ಮೋದಿ ಸರ್ಕಾರ ಈಗ ರೂ. 1,600 ಕೋಟಿ ರೂ.ಗಳಿಗೆ ಕೊಳ್ಳಲು ಹೊರಟಿದೆ ಎಂದು ರಾಹುಲ್ ಆರೋಪಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.