Aadhaar Card Update: ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ

ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ನೀವು ಹೆಚ್ಚು ಶ್ರಮಿಸಬೇಕಿಲ್ಲ. ದೇಶಾದ್ಯಂತ ಯಾವ ಮೂಲೆಯಲ್ಲೇ ಆದರು ಸುಲಭವಾಗಿ ಮಾಡಬಹುದು. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಹಲವು ಮಾರ್ಗಗಳಿದ್ದರೂ, ನೀವು ಬಯಸಿದರೆ, ಈಗ ನೀವು ನಿಮ್ಮ ಪೋಸ್ಟ್‌ಮ್ಯಾನ್ (Postman) ಮೂಲಕವೂ ಈ ಕೆಲಸವನ್ನು ಮಾಡಬಹುದು. ಅಂಚೆ ಇಲಾಖೆಯು ನಾಗರಿಕರಿಗೆ ಹೆಚ್ಚಿನ ಅನುಕೂಲವನ್ನು ನೀಡಿದೆ.

Written by - Yashaswini V | Last Updated : Oct 19, 2021, 02:20 PM IST
  • ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ನೀವು ಹೆಚ್ಚು ಶ್ರಮಿಸಬೇಕಿಲ್ಲ
  • ದೇಶಾದ್ಯಂತ ಯಾವ ಮೂಲೆಯಲ್ಲೇ ಆದರು ಸುಲಭವಾಗಿ ಮಾಡಬಹುದು
  • ಈಗ ನೀವು ನಿಮ್ಮ ಪೋಸ್ಟ್‌ಮ್ಯಾನ್ ಮೂಲಕವೂ ಈ ಕೆಲಸವನ್ನು ಮಾಡಬಹುದು
Aadhaar Card Update: ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ title=
Aadhaar Card Update

Aadhaar Card Update: ನೀವು ಆಧಾರ್ ಕಾರ್ಡ್ ಹೊಂದಿದ್ದರೆ, ಅದರಲ್ಲಿರುವ ಎಲ್ಲಾ ಡೇಟಾವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆಯೇ ಎಂಬುದನ್ನು ಮೊದಲು ನೀವು ನೆನಪಿನಲ್ಲಿಡಬೇಕು. ಇದರಿಂದ ನಿಮ್ಮ ಆಧಾರ್‌ಗೆ ಸಂಬಂಧಿಸಿದ ಯಾವುದೇ ಕೆಲಸವು ಸಿಲುಕಿಕೊಳ್ಳುವುದಿಲ್ಲ. ಆಧಾರ್ ದತ್ತಾಂಶದಲ್ಲಿಯೇ ಬಹಳ ಮುಖ್ಯವಾದ ವಿಷಯವೆಂದರೆ ಮೊಬೈಲ್ ಸಂಖ್ಯೆ. ನಿಮ್ಮ ಆಧಾರ್ ಅನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿದ್ದರೆ, ಅದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಇನ್ನೂ ಕೂಡ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಲ್ಲದಿದ್ದರೆ ಕೂಡಲೇ ಆ ಕೆಲಸ ಮಾಡಿ.

ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ನೀವು ಹೆಚ್ಚು ಶ್ರಮಿಸಬೇಕಿಲ್ಲ. ದೇಶಾದ್ಯಂತ ಯಾವ ಮೂಲೆಯಲ್ಲೇ ಆದರು ಸುಲಭವಾಗಿ ಮಾಡಬಹುದು. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಹಲವು ಮಾರ್ಗಗಳಿದ್ದರೂ, ನೀವು ಬಯಸಿದರೆ, ಈಗ ನೀವು ನಿಮ್ಮ ಪೋಸ್ಟ್‌ಮ್ಯಾನ್ (Postman) ಮೂಲಕವೂ ಈ ಕೆಲಸವನ್ನು ಮಾಡಬಹುದು. ಅಂಚೆ ಇಲಾಖೆಯು ನಾಗರಿಕರಿಗೆ ಹೆಚ್ಚಿನ ಅನುಕೂಲವನ್ನು ನೀಡಿದೆ.

ಇದನ್ನೂ ಓದಿ- How To Transfer Whatsapp Data: ವಾಟ್ಸಾಪ್ ಡೇಟಾವನ್ನು ಹೊಸ ಸ್ಮಾರ್ಟ್‌ಫೋನ್‌ಗೆ ಕ್ಷಣಾರ್ಧದಲ್ಲಿ ವರ್ಗಾಯಿಸಲು ಇಲ್ಲಿದೆ ಸುಲಭ ಮಾರ್ಗ

ಹೌದು, ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ (How to update mobile number in Aadhaar) ಮಾಡಲು, ಜನರು ಇನ್ನು ಮುಂದೆ ಆಧಾರ್ ಕೇಂದ್ರಗಳಿಗೆ ಸುತ್ತ ಬೇಕಿಲ್ಲ ಅಥವಾ ದೀರ್ಘ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಕಾಯಬೇಕಾಗಿಲ್ಲ. ಈಗ ನೀವು ನಿಮ್ಮ ಮನೆಯ ಬಳಿ ಬರುವ ಪೋಸ್ಟ್‌ಮ್ಯಾನ್‌ ಸಹಾಯದಿಂದ ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬಹುದು.

ನಿಮ್ಮ ಪೋಸ್ಟ್‌ಮ್ಯಾನ್, ಹತ್ತಿರದ ಪೋಸ್ಟ್ ಆಫೀಸ್ (Post Office) ಅಥವಾ ಗ್ರಾಮೀಣ ಡಾಕ್ ಸೇವಕರನ್ನು ಸಂಪರ್ಕಿಸಿ ಮತ್ತು ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ (Aadhaar Update) ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನೆನಪಿನಲ್ಲಿಡಿ, ಈ ಅಪ್‌ಡೇಟ್‌ಗಾಗಿ ನೀವು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ- Aadhaar Card Big update! ಪ್ರತಿಯೊಬ್ಬರಿಗೂ ಅನ್ವಯವಾಗುವ ಈ ಅಪ್‌ಡೇಟ್ ನೀಡಿದೆ ಯುಐಡಿಎಐ

ಈ ಸೌಲಭ್ಯವನ್ನು ದೇಶದಾದ್ಯಂತ ಆರಂಭಿಸಲಾಗಿದೆ, ಈ ಹೊಸ ಸೇವೆಯು ಹಳ್ಳಿಯ ಜನರಿಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ಅಷ್ಟೇ ಅಲ್ಲ, ಮಕ್ಕಳ ದಾಖಲಾತಿ ಲೈಟ್ ಕ್ಲೈಂಟ್‌ಗಳು ಈಗ ಐಪಿಪಿಬಿ ಬ್ಯಾಂಕಿಂಗ್ ಸೇವಾ ಪೂರೈಕೆದಾರರ ಪೋಸ್ಟ್ ಆಫೀಸ್‌ಗಳಲ್ಲಿ ಸಿಇಎಲ್‌ಸಿ ಮೂಲಕ ಮತ್ತು ಗ್ರಾಹಕರ ಮನೆಬಾಗಿಲಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ನಿಂದ ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು CELC ಸೇವೆಯನ್ನು ಅಭಿವೃದ್ಧಿಪಡಿಸಿದೆ. ಈ ಸೇವೆಯು ನಾಗರಿಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನೊಂದಿಗೆ ನವೀಕರಿಸಲು ಅನುವು ಮಾಡಿಕೊಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News