ಉತ್ತರ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ಜೀ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. ಅಯೋಧ್ಯೆ ಮತ್ತು ಗೋರಖ್ಪುರದಲ್ಲಿ ಭಯೋತ್ಪಾದಕರು ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ. ಏಳು ಭಯೋತ್ಪಾದಕರು ಅಡಗಿರುವ ಶಂಕೆ ವ್ಯಕ್ತವಾಗಿದ್ದು ಈ ಗುಂಪಿನಲ್ಲಿ ಐವರು ಭಯೋತ್ಪಾದಕರನ್ನು ಗುರುತಿಸಲಾಗಿದೆ.
2018 ರ ಭಯೋತ್ಪಾದನೆ ಕುರಿತ ವಾರ್ಷಿಕ ವರದಿಯಲ್ಲಿ, 'ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಂಡಿಲ್ಲ' ಎಂದು ಅಮೆರಿಕ ಹೇಳಿದೆ.
ಟ್ರಕ್ ಚಾಲಕನನ್ನು ಹತ್ಯೆಗೈದ ಪ್ರದೇಶದಲ್ಲೇ ರಾತ್ರಿಯಿಡೀ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಇತರ ಇಬ್ಬರು ಭಯೋತ್ಪಾದಕರು ಕಾರ್ಯಾಚರಣೆಯ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕ ಸ್ಥಳೀಯನೇ ಎನ್ನಲಾಗಿದ್ದು, ಟ್ರಕ್ ಚಾಲಕ ಆತನನ್ನು ಗುರುತಿಸಿದ್ದಾನೆ.
ಟ್ರಕ್ ಚಾಲಕರಲ್ಲಿ ಇಬ್ಬರು ರಾಜಸ್ಥಾನದವರು ಮತ್ತು ಇನ್ನೊಬ್ಬರು ಹರಿಯಾಣ ಮೂಲದವರು ಎಂದು ಗುರುತಿಸಲಾಗಿದೆ. ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಲಿಯಾದವರಲ್ಲಿ ಒಬ್ಬನನ್ನು ಮೊಹಮ್ಮದ್ ಇಲಿಯಾಸ್ ಎಂದು ಗುರುತಿಸಲಾಗಿದ್ದು, ಇತರ ಇಬ್ಬರ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಲು ಯೋಜಿಸುತ್ತಿರುವ ಭಯೋತ್ಪಾದಕರ "ಇತ್ತೀಚಿನ ತಂತ್ರ" ದ ಬಗ್ಗೆ ಗುಪ್ತಚರ ಸಂಸ್ಥೆಗಳು ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸರಿಗೆ ಎಚ್ಚರಿಕೆ ನೀಡಿವೆ.
ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವ ಭಾರತದ ಬದ್ಧತೆಯನ್ನು ಡಿಜಿಪಿ ದಿಲ್ಬಾಗ್ ಸಿಂಗ್ ಪುನರುಚ್ಚರಿಸಿದ್ದಾರೆ.
ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳ ಕೆಲ ಸದಸ್ಯರು ರಾಷ್ಟ್ರ ರಾಜಧಾನಿಯೊಳಗೆ ನುಸುಳಿದ್ದು, ಹಬ್ಬದ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಕೇಂದ್ರ ಗುಪ್ತಚರ ಇಲಾಖೆ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯಿಂದ ಯಾವುದೇ ಹಿಂಸಾಚಾರ ಘಟನೆಗಳು ನಡೆದಿಲ್ಲವಾದ್ದರಿಂದ ಪಾಕಿಸ್ತಾನ ಭಯೋತ್ಪಾದಕರ ಸಹಾಯದಿಂದ ಹಿಂಸಾಚಾರ ಘಟನೆಗಳನ್ನು ನಡೆಸಲು ಯೋಜನೆಯನ್ನು ರೂಪಿಸಿದೆ.
ಗುಪ್ತಚರ ಮಾಹಿತಿಗಳನ್ನು ಅನುಸರಿಸಿ ದೆಹಲಿ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 963 ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದ್ದು, ಲೋಕಸಭೆಯಲ್ಲಿ ಮಂಗಳವಾರ ಲಿಖಿತ ಉತ್ತರದಲ್ಲಿ ಗೃಹ ಸಚಿವಾಲಯ ಈ ಡೇಟಾವನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.