ICC- ಈ ಆಟಗಾರನ ಮೇಲೆ ನಿಷೇಧ ಹೇರಿದ ಐಸಿಸಿ, ಯಾಕಿಷ್ಟು ದೊಡ್ಡ ಶಿಕ್ಷೆ ಎಂದು ತಿಳಿಯಿರಿ!

ಜಿಂಬಾಬ್ವೆಯ ಆಫ್ ಸ್ಪಿನ್ ಬೌಲರ್ ರಾಯ್ ಕೈಯಾಗೆ ಐಸಿಸಿ ನಿಷೇಧ ಹೇರಿದೆ. ವಾಸ್ತವವಾಗಿ, ಅವರ ಬೌಲಿಂಗ್ ಕ್ರಿಯೆಯಲ್ಲಿನ ಸಮಸ್ಯೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Written by - Yashaswini V | Last Updated : Aug 25, 2021, 07:05 AM IST
  • ಐಸಿಸಿ ಈ ಬೌಲರ್ ಅನ್ನು ನಿಷೇಧಿಸಿತು
  • ಬೌಲಿಂಗ್ ಕ್ರಿಯೆಯಲ್ಲಿ ಸಮಸ್ಯೆ ಇದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ
  • ಈ ಕ್ರಿಕೆಟಿಗ ಇನ್ನು ಮುಂದೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ
ICC- ಈ ಆಟಗಾರನ ಮೇಲೆ ನಿಷೇಧ ಹೇರಿದ ಐಸಿಸಿ, ಯಾಕಿಷ್ಟು ದೊಡ್ಡ ಶಿಕ್ಷೆ ಎಂದು ತಿಳಿಯಿರಿ! title=
Roy Kaia Banned

ನವದೆಹಲಿ: ಜುಲೈನಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಯ ಆಫ್ ಸ್ಪಿನ್ ಬೌಲರ್ ರಾಯ್ ಕೈಯಾ (Roy Kaia) ಅವರ ಬೌಲಿಂಗ್ ಕ್ರಮ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ 29 ವರ್ಷದ ಈ ಕ್ರಿಕೆಟಿಗನನ್ನು ಅಮಾನತುಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಈ ಮಾಹಿತಿ ನೀಡಿದೆ.

ರಾಯ್ ಕೈಯಾ (Roy Kaia) ಇದುವರೆಗೆ ಜಿಂಬಾಬ್ವೆ ಪರ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಸ್ವತಂತ್ರ ಮೌಲ್ಯಮಾಪನವು ಕೈಯಾ ಅವರ ಬೌಲಿಂಗ್ ಕ್ರಮವನ್ನು ಸಂಶಯಾಸ್ಪದವಾಗಿ ಕಂಡುಕೊಂಡಿದೆ. ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡುವುದನ್ನು ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ಮಂಗಳವಾರ ಹೇಳಿದೆ. ಆದಾಗ್ಯೂ, ಐಸಿಸಿಯ ಕಲಂ 11.5 ರ ಅಡಿಯಲ್ಲಿ, ಕೈಯಾ ಅವರಿಗೆ ಜಿಂಬಾಬ್ವೆ ಕ್ರಿಕೆಟ್ ಒಪ್ಪಿಗೆಯ ನಂತರ ದೇಶೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ- IND vs ENG: ಮೊಹಮ್ಮದ್ ಸಿರಾಜ್ ‘ಸಿಗ್ನೇಚರ್ ಸ್ಟೈಲ್’ ನ ಕಟೌಟ್ ನಿಲ್ಲಿಸಿದ ಅಭಿಮಾನಿಗಳು..!

ಬಾಂಗ್ಲಾದೇಶದ ವಿರುದ್ಧ ಶಂಕಿತನನ್ನು ಪತ್ತೆ ಮಾಡಲಾಗಿದೆ:
ಜುಲೈ 7 ರಿಂದ 11 ರವರೆಗೆ ಹರಾರೆಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಟೆಸ್ಟ್ ಪಂದ್ಯದಲ್ಲಿ (Test Match) ರಾಯ್ ಕೈಯಾ ಅವರ ಬೌಲಿಂಗ್ ಕ್ರಮ ಅನುಮಾನಾಸ್ಪದವಾಗಿ ಕಂಡು ಬಂದಿದೆ. ಕೈಯಾ ಅವರ ಬೌಲಿಂಗ್ ಕ್ರಿಯೆಯ ಫೋಟೋಗಳನ್ನು ಪರಿಣತ ಸಮಿತಿಯು ನೋಡಿದೆ, ಆದರೆ ಕೋವಿಡ್‌ನಿಂದಾಗಿ ವಿಧಿಸಲಾದ ನಿರ್ಬಂಧಗಳಿಂದಾಗಿ, ಅವರ ಕ್ರಮವನ್ನು ಐಸಿಸಿ ಕೇಂದ್ರದಲ್ಲಿ ತನಿಖೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ- ವಿರಾಟ್ ಕೊಹ್ಲಿ ‘ಬ್ಲ್ಯಾಕ್ ವಾಟರ್’ ಕುಡಿಯುತ್ತಾರಂತೆ! ಇದರ ಬೆಲೆ ಎಷ್ಟು ಗೊತ್ತಾ?

ಫೋಟೋಗಳನ್ನು ನೋಡಿದ ನಂತರ ಅದು ಸ್ಪಷ್ಟವಾಯಿತು:
ಫೋಟೋಗಳನ್ನು ನೋಡಿದ ನಂತರ, ಐಸಿಸಿ ಕೈಯಾ ಕ್ರಮವು 15 ಡಿಗ್ರಿಗಳಿಗಿಂತ ಹೆಚ್ಚು ತಿರುಗುತ್ತಿರುವುದನ್ನು ಕಂಡುಕೊಂಡಿದೆ, ಇದು ನಿಯಮಗಳ ಪ್ರಕಾರ ಸರಿಯಲ್ಲ. ಕೈಯಾ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿದ ನಂತರ, ಮತ್ತೊಮ್ಮೆ ತನಿಖೆ ನಡೆಯಲಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News