Virat Kohli: ಕೊಹ್ಲಿ ಎನರ್ಜಿಗೆ ಇದೇ ಕಾರಣ..! ಹೋಟೆಲ್ ಸಿಬ್ಬಂದಿ ಬಿಚ್ಚಿಟ್ಟ ವಿರಾಟ್ ವಿಶ್ವಕಪ್‌ ಡಯಟಿಂಗ್ ರಹಸ್ಯ

 Virat Kohli Diet secret: ಏಕದಿನ ವಿಶ್ವಕಪ್‌ನಲ್ಲಿ ಅಬ್ಬರ ಮುಂದುವರೆಸಿದ ವಿರಾಟ್ ಕೊಹ್ಲಿಯ ಆರೋಗ್ಯದ ಗುಟ್ಟು ಇತ್ತೀಚೆಗೆ ಬಯಲಾಗಿದೆ. ವಿಕೆಟ್‌ಗಳ ನಡುವೆ ಓಟ ಮತ್ತು ಫೀಲ್ಡಿಂಗ್ ಮಾಡುವ ಅದ್ಭುತ ಎನರ್ಜಿಯ ಹಿಂದಿನ ಅಸಲಿ ಕಥೆ ಹೊರಬಿದ್ದಿದೆ.

Written by - Savita M B | Last Updated : Oct 28, 2023, 11:13 AM IST
  • 2023ರ ಏಕದಿನ ವಿಶ್ವಕಪ್ ನಲ್ಲಿ ಕಿಂಗ್ ಕೊಹ್ಲಿ ಧೂಳೆಬ್ಬಿಸುತ್ತಿದ್ದಾರೆ.
  • ಐದು ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ
  • ಇದೇ ವೇಳೆ ವಿರಾಟ್ ಯಶಸ್ಸಿನ ಮಂತ್ರ ಬಯಲಾಗಿದೆ.
 Virat Kohli: ಕೊಹ್ಲಿ ಎನರ್ಜಿಗೆ ಇದೇ ಕಾರಣ..! ಹೋಟೆಲ್ ಸಿಬ್ಬಂದಿ ಬಿಚ್ಚಿಟ್ಟ ವಿರಾಟ್ ವಿಶ್ವಕಪ್‌ ಡಯಟಿಂಗ್ ರಹಸ್ಯ  title=

Virat Kohli: 2023ರ ಏಕದಿನ ವಿಶ್ವಕಪ್ ನಲ್ಲಿ ಕಿಂಗ್ ಕೊಹ್ಲಿ ಧೂಳೆಬ್ಬಿಸುತ್ತಿದ್ದಾರೆ. ಐದು ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟು 354 ರನ್ ಗಳಿಸಿರುವ ವಿರಾಟ್ ಈ ಬಾರಿಯ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಮುಂದುವರಿದಿದ್ದಾರೆ. ಐದೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಗುರಿ ಮುರಿದಿತ್ತು.. ಎಲ್ಲದರಲ್ಲೂ ವಿರಾಟ್ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆ ವಿರಾಟ್ ಯಶಸ್ಸಿನ ಮಂತ್ರ ಬಯಲಾಗಿದೆ.

ಫಿಟ್ನೆಸ್.. ವಿರಾಟ್ ಕೊಹ್ಲಿ.. ಈ ಎರಡು ಪದಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಟೀಂ ಇಂಡಿಯಾದಲ್ಲಿರುವ ಈಗಿನ ಕ್ರಿಕೆಟಿಗರಲ್ಲಿ ಯಾರು ಅತ್ಯುತ್ತಮ ಫಿಟ್ನೆಸ್ ಹೊಂದಿದ್ದಾರೆ ಎಂಬುದಕ್ಕೆ ಕಿಂಗ್ ಕೊಹ್ಲಿಯೇ ಉತ್ತರ. ಫೀಲ್ಡಿಂಗ್ ನಲ್ಲಿ ಅಗ್ರೆಸಿವ್ ನೆಸ್ , ವಿಕೆಟ್ ಗಳ ನಡುವೆ ಚಿರತೆಯಂತೆ ಓಡುವುದು ಎಲ್ಲವೂ ವಿರಾಟ್ ಅವರದ್ದೇ. 

ಇದನ್ನೂ ಓದಿ-ಪಾಕ್-ದಕ್ಷಿಣ ಆಫ್ರಿಕಾ ಪಂದ್ಯದ ಮಧ್ಯೆ ನಡೆಯಿತು ಈ ಘಟನೆ! ಹೀಗಾಗಿದ್ದು ವಿಶ್ವಕಪ್’ನಲ್ಲಿಯೇ ಮೊದಲ ಬಾರಿ…

ಕಿಂಗ್ ಕೊಹ್ಲಿ ಸಮತೋಲಿತ ಆಹಾರ ಮತ್ತು ವರ್ಕ್ ಔಟ್ ಮೂಲಕ ಶ್ರೇಷ್ಠ ಕ್ರೀಡಾಪಟು ಎನಿಸಿಕೊಂಡರು. 34ರಲ್ಲೂ ಇಷ್ಟು ಫಿಟ್ ಆಗಿರುವ ಯಂಗ್‌ ಕ್ರಿಕೆಟರ್ ತಮ್ಮ ಆಹಾರ ಪದ್ಧತಿಯಿಂದಲೇ ಶುಭಮನ್ ಗಿಲ್ ರಂತಹ ಕ್ರಿಕೆಟಿಗರಿಗೆ ಪೈಪೋಟಿ ನೀಡುತ್ತಿದ್ದಾರೆ.

ಆದರೆ, ಈ ಬಾರಿಯ ವಿಶ್ವಕಪ್ ವೇಳೆ ವಿರಾಟ್ ಏನು ತಿನ್ನುತ್ತಿದ್ದಾರೆ ಎಂಬ ವಿವರವನ್ನು ಭಾರತ ತಂಡ ತಂಗಿದ್ದ ಹೋಟೆಲ್ ನ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ. ಲೀಲಾ ಪ್ಯಾಲೇಸ್ ಕಾರ್ಯನಿರ್ವಾಹಕ ಅನುಷ್ಮಾನ್ ಬಾಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ-ವಿರಾಟ್- ಅನುಷ್ಕಾ ವಿವಾಹವಾದ ಆ ರೊಮ್ಯಾಂಟಿಕ್ ತಾಣ ಯಾವುದು? ಅಲ್ಲಿ ಒಂದು ರಾತ್ರಿಯ ವೆಚ್ಚ ಎಷ್ಟು ಗೊತ್ತಾ?

"ವಿರಾಟ್ ಕೊಹ್ಲಿ ಸಸ್ಯಾಹಾರಿಯಾಗಿರುವುದರಿಂದ ಮಾಂಸಾಹಾರ ಸೇವಿಸುವುದಿಲ್ಲ. ಬೇಯಿಸಿದ ಆಹಾರವನ್ನು ಮಾತ್ರ ಸೇವಿಸುತ್ತಾರೆ. ತರಕಾರಿಗಳೊಂದಿಗೆ ಡಿಮ್ ಸಮ್ ಎಂಬ ಚೈನೀಸ್ ಆಹಾರ, ಸೋಯಾ, ಮಾಕ್ ಮೀಟ್ಸ್, ಟೋಫು ಮುಂತಾದ ಪ್ರೋಟೀನ್ ಭರಿತ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅವರು ಡೈರಿ ಉತ್ಪನ್ನಗಳನ್ನು ಕಡಿಮೆ ತಿನ್ನುತ್ತಾರೆ." ಎಂದು ಲೀಲಾ ಪ್ಯಾಲೇಸ್ ಸಿಬ್ಬಂದಿಯೊಬ್ಬರು ರಹಸ್ಯ ಬಿಚ್ಚಿಟ್ಟಿದ್ದಾರೆ. 

ಇನ್ನೊಂದೆಡೆ ಟೀಂ ಇಂಡಿಯಾ ಆಟಗಾರರಿಗೆ ರಾಗಿದೋಷೆ ಇಷ್ಟ ಎಂದು ಲೀಲಾ ಪ್ಯಾಲೇಸ್ ಕಾರ್ಯನಿರ್ವಾಹಕ ಹೇಳಿದ್ದಾರೆ. ಬೆಳಗಿನ ಉಪಹಾರವಾಗಿ ರಾಗಿ ದೋಸೆಯನ್ನು ತೆಗೆದುಕೊಳ್ಳಲು ಆಟಗಾರರು ಇಚ್ಚಿಸುತ್ತಾರೆ ಎಂದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News