ಭಾರತ ನೆಲದಲ್ಲಿ ನಡೆದ 2011ರ ವಿಶ್ವಕಪ್ ಯಾರು ಮರೆಯೋಕೆ ಸಾಧ್ಯ ಹೇಳಿ.. ಧೋನಿ ಹೊಡೆದ ಆ ಕೊನೆಯ ಸಿಕ್ಸ.. ಗೌತಮ್ ಗಂಭೀರ ಸೂಪರ್ ಬ್ಯಾಟಿಂಗ್... ಯುವರಾಜ್ ಸಿಂಗ್ ಕೆಚ್ಚೆದೆಯ ಆಲ್‌ರೌಂಡರ್ ಆಟ... ಸಚಿನ್‌ಗೆ ಸಿಕ್ಕ ಗೌರವ.. ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಈಗ ಅದೇ ಕ್ಷಣವನ್ನು ಮತ್ತೆ ನಿರ್ಮಿಸಲು ಟೀಂ ಇಂಡಿಯಾ ಪಣತೊಟ್ಟಿದ್ದು ಸತತ 6 ಗೆಲುವಿನೊಂದಿಗೆ ಮುನ್ನುಗ್ಗುತ್ತಿದೆ, ಅದರಲ್ಲೂ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿ ದಸರಾ ಸಂಭ್ರಮ ಹೆಚ್ಚುಮಾಡಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಅಫ್ಗಾನಿಸ್ತಾನ ತಂಡಕ್ಕೂ ನೀರು ಕುಡಿಸಿ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾಜನಂತೆ ಮೆರೆಯುತ್ತಿದೆ. ಕ್ರಿಕೆಟ್ ಪ್ರೇಮಿಗಳಂತೂ ರೋಹಿತ್ ಬಾಯ್ಸ್ ಆರ್ಭಟ ಕಂಡು ನಿಬ್ಬೆರಗಾಗಿದ್ದು ಶಹಬ್ಬಾಷ್ ಎನ್ನುತ್ತಿದ್ದಾರೆ. ಪ್ರತಿಯೊಂದು ಗೇಮ್‌ನಲ್ಲೂ ಮಿಂಚು ಹರಿಸುತ್ತಿರುವ ಭಾರತ 2023ರ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ವಿಶ್ವಕಪ್‌ನ ಟೂರ್ನಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೊಂಬಾಟ ಆಟ ಪ್ರದರ್ಶಿಸಿದ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ ಆಸೀಸ್ ಪಡೆ 199 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಸ್ಮಿತ್ ಹೊರತುಪಡಿಸಿದ ಯಾವೊಬ್ಬ ಆಟಗಾರನೂ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಜಡೇಜಾ 3 ಹಾಗೂ ಬೂಮ್ರಾ 2 ವಿಕೆಟ್ ಪಡೆದು ಮಿಂಚಿದ್ರು. ನಂತರ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು.ರೋಹಿತ್ ಹಾಗೂ ಕಿಶನ್, ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗಿ ಆತಂಕ ಮೂಡಿಸಿದ್ರು. ಆದ್ರೆ ಚೆನ್ನೈ ಅಂಗದಲ್ಲಿ ಕಣಕ್ಕೆ ಇಳಿದ ಕಿಂಗ್ ಕೊಹ್ಲಿ 85 ಹಾಗೂ ಹಾಗೂ ಕೆ.ಎಲ್ ರಾಹುಲ್ 97 ರನ್‌ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಇದನ್ನೂ ಓದಿ: ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ.. ರೈತರ ಹಿತ ಕಾಯುವುದು ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ
ಎರಡನೇ ಪಂದ್ಯ ಅರುಣ್ ಜೆಟ್ಲಿ ದೆಹಲಿ ಕ್ರೀಂಡಾಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 272ರನ್‌ಗಳ ಸ್ಫರ್ಧಾತ್ಮಕ ಟಾರ್ಗೆಟ್ ನೀಡಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ, ಭರ್ಜರಿ ಆರಂಭ ಪಡೆಯಿತು. ಕ್ಯಾಪ್ಟನ್ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಕೇವಲ 84 ಎಸೆತಗಳಲ್ಲಿ 131 ಚಚ್ಚಿದ್ರು. ಇವರಿಗೆ ಒಳ್ಳೆಯ ಸಾಥ್ ನೀಡಿದ್ದ ಕಿಶನ್ ಕೂಡ 47 ರನ್ ಗಳಿಸಿದ್ರು. ನಂತರ ಬಂದ ಕೊಹ್ಲಿ 56 ರನ್ ಗಳಿಸಿದ್ರೆ ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ರು.
ಅಭಿಮಾನಿಗಳಿಗೆ ದಸರಾ ಉಡುಗೊರೆ ನೀಡಿದ ಬ್ಲೂ ಬಾಯ್ಸ್
ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾಯುತ್ತಿದ್ದ ಇಂಡಿಯಾ ಪಾಕಿಸ್ತಾನ ಮ್ಯಾಚ್ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಬೂಮ್ರಾ, ಸಿರಾಜ್, ಪಾಂಡ್ಯಾ, ಕುಲದೀಪ್, ಜಡೇಜಾ ಸಾಂಘಿಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿತ್ತು. ಕೇವಲ 191 ರನ್‌ಗೆ ಆಲೌಟ್ ಆಗಿದ್ದ ಪಾಕಿಸ್ತಾನ ಹೀನಾಯ ಸೋಲಿನ ಭಯದಲ್ಲಿತ್ತು. ಅದರಂತೆ ಬ್ಯಾಟಿಂಗ್‌ಗೆ ಇಳಿದ ರೋಹಿತ್ ಬಾಯ್ಸ್ ಪಾಕಿಸ್ತಾನ ಮೇಲೆ ಮುಗಿಬಿದ್ದು ಜಯ ಸಾಧಿಸಿದ್ದರು. ಮತ್ತೊಮ್ಮೆ ಆರ್ಭಟ ಮೆರೆದ ರೋಹಿತ್ ಕೇವಲ 63 ಎಸೆತಗಳಲ್ಲಿ 86 ರನ್ ಗಳಿಸಿದ್ರು. ಕೊನೆಯಲ್ಲಿ ಶ್ರೈಯಸ್ ಕೂಡ ಉತ್ತಮ ಬ್ಯಾಟಿಂಗಗ್ ಪ್ರದರ್ಶನ ಮಾಡಿ 53 ರನ್ ಗಳಿಸಿದ್ರು. 30.3 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿದ ಭಾರತ, ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಿತು
ಮುಂದಿನ ಪಂದ್ಯದಲ್ಲೂ ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ ಬಾಂಗ್ಲಾದೇಶ ತಂಡವನ್ನು 256 ರನ್‌ಗೆ ಕಟ್ಟಿಹಾಕಿತ್ತು. ಇಲ್ಲೂ ಬೂಮ್ರಾ ಸಿರಾಜ್ ಜಡೇಜಾ ಉತ್ತಮ ಬೌಲಿಂಗ್ ಮಾಡಿದ್ರು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್ 48 ಹಾಗೂ ಇಂಜುರಿಯಿಂದ ಕಂಬ್ಯಾಕ್ ಆಗಿದ್ದ ಗಿಲ್ 53 ರನ್ ಗಳಿಸಿದ್ರು. ಇವರ ವಿಕೆಟ್ ನಂತರ ಕ್ರಿಸ್‌ಗೆ ಇಳಿದ ಕಿಂಗ್ ಕೊಹ್ಲಿ 103 ರನ್‌ಗಳ ಭರ್ಜರಿ ಬ್ಯಾಟಿಂಗ್ ಮಾಡಿ ನೆರೆದ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ರು. ಕೊನೆಯಲ್ಲಿ ಕೇವಲ 41.3 ಓವರ್‌ಗಳಲ್ಲಿ ಭಾರತ ವಿಜಯ ಪತಾಕೆ ಹಾರಿಸಿತು.
ಕಿಂಗ್ ಕೊಹ್ಲಿ ಶತಕದ ದಾಖಲೆ ಜಸ್ಟ್ ಮಿಸ್..!
ನಂತರ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದ ಭಾರತ 4 ವಿಕೆಟ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ಮಿಚಲ್ ಆರ್ಭಟದ ಹೊರತಾಗಿಯೂ 273 ರನ್ ಮಾತ್ರ ಗಳಿಸಲೂ ಸಾಧ್ಯವಾಗಿತ್ತು. ಸವಾಲಿನ ಮೊತ್ತ ಬೆನ್ನತ್ತಿದ್ದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಆದ್ರೆ ಗಿಲ್ 26 ರನ್ ಗಳಿಸಿ ಔಟ್ ಆದ್ರು. ಈ ಹಂತಕ್ಕೆ ಕ್ರಿಸ್‌ಗೆ ಬಂದ ಕೊಹ್ಲಿ ಮತ್ತೊಮ್ಮೆ ಉತ್ತಮ ಆಟವಾಡಿ 95 ರನ್ ಗಳಿಸಿ ತಂಡದ ಗಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಈ ಪಂದ್ಯದಲ್ಲಿ ಕೊಹ್ಲಿ ಶತಕ ಆಗಿದ್ರೆ ಸಚಿನ್ ದಾಖಲೆ ಸಮಕ್ಕೆ ಬರುತ್ತಿದ್ದರು. ಆದ್ರೆ ಕೊಹ್ಲಿ 95 ರನ್ ಆಗಿದ್ದಾಗಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು.
ಇದನ್ನೂ ಓದಿ: ಶಾಸಕ ಅಬ್ಬಯ್ಯಾ ಕಿಡಿ, ಕಾಂಗ್ರೆಸ್ ನಲ್ಲಿ ತಳಮಳ; ಕಾರ್ಪೊರೇಟರ್‌ಗಳ ಎದೆಯಲ್ಲಿ ಢವಢವ
ಇನ್ನೂ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ದುರ್ಬಲ ತಂಡ ಎನಿಸಿಕೊಂಡಿರುವ ಇಂಗ್ಲೆಂಡ್ ವಿರುದ್ಧ ಟಾಸ್ ಸೋತ ಇಂಡಿಯಾ ಮೊದಲು ಬ್ಯಾಟ್ ಮಾಡಬೇಕಾಯಿತು. ಲಕ್ನೋ ಪಿಚ್‌ನಲ್ಲಿ ಟೀಂ ಇಂಡಿಯಾ ಆಟಗಾರರು ತಡಕಾಡಿದ್ರು. ಕೇವಲ ರೋಹಿತ್, ಸೂರ್ಯಕುಮಾರ್, ಹಾಗೂ ರಾಹುಲ್ ಉತ್ತಮ ಬ್ಯಾಟಿಂಗ್ ಮಾಡಿ 229 ರನ್ ಮಾಡಿದ್ರು. ಕಡಿಮೆ ಸ್ಕೋರ್‌ನ್ನು ಸುಲಭವಾಗಿ ಇಂಗ್ಲೆಂಡ್ ಗೆಲ್ಲುತ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಎಲ್ಲರೂ ಇದ್ರ. ಆದ್ರೆ ಬೂಮ್ರಾ, ಶೆಮಿ ಆರ್ಭಟಕ್ಕೆ ನಲುಗಿದ ಇಂಗ್ಲೆಂಡ್ ಕೇವಲ 129 ರನ್‌ಗೆ ಆಲೌಟ್ ಆಗಿ ಭಾರತಕ್ಕೆ ಶರಣಾಯಿತು. ಜೊತೆಗೆ ವಿಶ್ವಕಪ್‌ನಿಂದ ಮೊದಲು ಹೊರಗೆ ಬಿದ್ದ ತಂಡ ಎನಿಸಿಕೊಂಡಿತು. ಜೊತೆಗೆ ಭಾರತ ಈ ಗೆಲುವಿನೊಂದಿಗೆ ಸಮೀಸ್ ದಾರಿ ಸುಲಭ ಮಾಡಿಕೊಂಡಿತು
ಅದೆನೆ ಇರಲಿ ಈಗ ಟೀಂ ಇಂಡಿಯಾ ಆರ್ಭಟ ಜೋರಾಗಿದೆ. ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಇನ್ನೂ ರೌಂಡ್ ರಾಬಿನ್ ಹಂತದಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ನೆದರ್‌ಲ್ಯಾಂಡ್ ಜೊತೆಗೆ ಭಾರತ ಮ್ಯಾಚ್ ಆಡಲಿದೆ. ಈಗಾಗಲೇ ಸಮೀಸ್ ಪ್ರವೇಶ್ ಮಾಡಿರುವ ಟೀಂ ಇಂಡಿಯಾ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಸುವ ಉತ್ಸಾಹದಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.