Sri Lanka players wear black armbands: ಮುಂಬೈನ ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ODI ವಿಶ್ವಕಪ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಆಗಮಿಸಿದ್ದಾರೆ.
ಶ್ರೀಲಂಕಾ ತಂಡದ ಅಭಿಮಾನಿಯೊಬ್ಬರು ಇತ್ತೀಚೆಗೆಷ್ಟೇ ನಿಧನರಾಗಿದ್ದರು. ಇದೇ ಕಾರಣದಿಂದ ಭಾರತ ವಿರುದ್ಧದ ಪಂದ್ಯದ ವೇಳೆ ಸಂತಾಪ ಸೂಚಿಸುವ ಸಲುವಾಗಿ ಲಂಕಾ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಬಂದಿದ್ದರು.
ಇದನ್ನೂ ಓದಿ: ನನ್ನ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲ, ಈ ಚೇಸ್ ಮಾಸ್ಟರ್ ಎಂದ ಸುನೀಲ್ ಶೆಟ್ಟಿ
ದೀರ್ಘಕಾಲದ ಅನಾರೋಗ್ಯದಿಂದಾಗಿ ಪರ್ಸಿ ಅಬೆಸೆಕೆರಾ ಅವರು ಇತ್ತೀಚೆಗೆ ತಮ್ಮ 87 ನೇ ವಯಸ್ಸಿನಲ್ಲಿ ನಿಧನರಾದರು. 'ಅಂಕಲ್ ಪರ್ಸಿ' ಎಂದೇ ಪ್ರಸಿದ್ಧರಾಗಿದ್ದ ಇವರು, ಕ್ರಿಕೆಟ್ ಮೈದಾನಗಳಲ್ಲಿ ಶ್ರೀಲಂಕಾ ತಂಡವನ್ನು ಹುರಿದುಂಬಿಸುತ್ತಿದ್ದುದ್ದನ್ನು ಕಾಣಬಹುದಾಗಿತ್ತು. ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದಕ್ಕೇ ಹೆಸರುವಾಸಿಯಾದ ಪರ್ಸಿ, 1979ರ ವಿಶ್ವಕಪ್’ನಿಂದ ಶ್ರೀಲಂಕಾ ತಂಡವನ್ನು ಹುರಿದುಂಬಿಸಲೆಂದೇ ಪ್ರವಾಸವನ್ನು ಪ್ರಾರಂಭಿಸಿದರು. ಅಂದಿನಿಂದ ಅವರು ಬಹುತೇಕ ಎಲ್ಲಾ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅನಾರೋಗ್ಯದ ಕಾರಣ ಪ್ರಸಕ್ತ ವಿಶ್ವಕಪ್’ಗೆ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಶ್ರೀಲಂಕಾ ಕ್ರಿಕೆಟ್ ಹೊರಡಿಸಿದ ಹೇಳಿಕೆಯ ಪ್ರಕಾರ, 'ಶ್ರೇಷ್ಠ ಅಭಿಮಾನಿ, ದಿವಂಗತ ಪರ್ಸಿ ಅಬೆಸೆಕೆರಾ ಅವರಿಗೆ ಗೌರವ ಸಲ್ಲಿಸಲು, ಶ್ರೀಲಂಕಾದ ಆಟಗಾರರು ಭಾರತದ ವಿರುದ್ಧದ ಪಂದ್ಯದಲ್ಲಿ ಕಪ್ಪು ಪಟ್ಟಿಯೊಂದಿಗೆ ಆಡಲಿದ್ದಾರೆ. ಅಬೆಸೆಕೆರಾ ಶ್ರೀಲಂಕಾ ಕ್ರಿಕೆಟ್’ನ ಅವಿಭಾಜ್ಯ ಅಂಗವಾಗಿದ್ದರು. ಅವರು ಮೈದಾನದ ಹೊರಗೆ ಆಟಗಾರರನ್ನು ಬೆಂಬಲಿಸುವಲ್ಲಿ ಮತ್ತು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರಿಕೆಟ್ ಅಭಿಮಾನಿಗಳಲ್ಲಿ ಅವರ ಹೆಸರು ಸದಾ ಸ್ಮರಣೀಯ” ಎಂದು ಹೇಳಿದೆ.
ಶ್ರೀಲಂಕಾದ ಸ್ಟಾರ್ ಕ್ರಿಕೆಟಿಗರಾದ ಅರ್ಜುನ ರಣತುಂಗ, ಸನತ್ ಜಯಸೂರ್ಯ ಮತ್ತು ಕುಮಾರ ಸಂಗಕ್ಕಾರ ಅವರ ಸ್ನೇಹಿತರಾಗಿದ್ದಲ್ಲದೆ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಇತ್ತೀಚೆಗೆ ಏಷ್ಯಾಕಪ್ ವೇಳೆ ರೋಹಿತ್, ಕೊಲಂಬೊದಲ್ಲಿರುವ ಅವರ ಮನೆಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ, 2015ರಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಮಾತುಕತೆಗಾಗಿ ಭಾರತದ ಡ್ರೆಸ್ಸಿಂಗ್ ರೂಂಗೆ ಅವರನ್ನು ಕರೆಸಿಕೊಂಡಿದ್ದರು ವಿರಾಟ್.
ಇದನ್ನೂ ಓದಿ: ವಿಶ್ವಕಪ್ ಪಂದ್ಯದಲ್ಲಿ ಪಾಂಡ್ಯ ಆಡುತ್ತಾರೋ ಇಲ್ಲವೋ? ನಾಯಕ ರೋಹಿತ್ ಶರ್ಮಾ ಕೊಟ್ಟ ಅಪ್ಡೇಟ್ ಹೀಗಿದೆ
ಇನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅವರ ವೈದ್ಯಕೀಯ ವೆಚ್ಚಕ್ಕಾಗಿ 50 ಲಕ್ಷ ರೂ.ಗಳನ್ನು ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.