ಸತತ ಗೆಲುವುಗಳ ಮಧ್ಯೆ ಶ್ರೇಷ್ಠ ದಾಖಲೆ ಬರೆದ ರೋಹಿತ್! ವಿಶ್ವಕಪ್ ಇತಿಹಾಸದಲ್ಲಿ ಯಾವೊಬ್ಬ ನಾಯಕನೂ ಮಾಡಿರದ ಸಾಧನೆ ಇದು

Rohit Sharma Record, Cricket News in Kannada: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 160 ರನ್‌’ಗಳ ಭರ್ಜರಿ ಜಯ ದಾಖಲಿಸಿದೆ. 411 ರನ್‌’ಗಳ ಬೃಹತ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ, ನೆದರ್ಲೆಂಡ್ಸ್ ತಂಡವನ್ನು 250 ರನ್‌’ಗಳಿಗೆ ಕಟ್ಟಿಹಾಕಿದೆ.

Written by - Bhavishya Shetty | Last Updated : Nov 13, 2023, 07:43 PM IST
    • ರೋಹಿತ್ ಶರ್ಮಾ ವಿಶ್ವಕಪ್‌’ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ
    • ಕಳೆದ 40 ವರ್ಷಗಳಲ್ಲಿ ಯಾವೊಬ್ಬ ನಾಯಕ ಮಾಡದಂತಹ ವಿಶೇಷ ದಾಖಲೆ
    • ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ 160 ರನ್‌’ಗಳ ಭರ್ಜರಿ ಜಯ
ಸತತ ಗೆಲುವುಗಳ ಮಧ್ಯೆ ಶ್ರೇಷ್ಠ ದಾಖಲೆ ಬರೆದ ರೋಹಿತ್! ವಿಶ್ವಕಪ್ ಇತಿಹಾಸದಲ್ಲಿ ಯಾವೊಬ್ಬ ನಾಯಕನೂ ಮಾಡಿರದ ಸಾಧನೆ ಇದು  title=
Rohit Sharma

Rohit Sharma Record: ಪ್ರಸ್ತುತ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿಶ್ವಕಪ್‌’ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಾಯಕತ್ವ ಮತ್ತು ಆರಂಭಿಕ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಅಂದಹಾಗೆ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕಳೆದ 40 ವರ್ಷಗಳಲ್ಲಿ ಯಾವೊಬ್ಬ ನಾಯಕ ಮಾಡದಂತಹ ವಿಶೇಷ ದಾಖಲೆಯನ್ನು ರೋಹಿತ್ ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ! ಸೆಮೀಸ್’ಗೂ ಮುನ್ನ ಹೊಸ ತಂಡ ಪ್ರಕಟಿಸಿದ ಕ್ರಿಕೆಟ್ ಮಂಡಳಿ

ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 160 ರನ್‌’ಗಳ ಭರ್ಜರಿ ಜಯ ದಾಖಲಿಸಿದೆ. 411 ರನ್‌’ಗಳ ಬೃಹತ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ, ನೆದರ್ಲೆಂಡ್ಸ್ ತಂಡವನ್ನು 250 ರನ್‌’ಗಳಿಗೆ ಕಟ್ಟಿಹಾಕಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೋಹಿತ್ ಶರ್ಮಾ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. ಇದರ ಜೊತೆಗೆ ನೆದರ್ಲ್ಯಾಂಡ್ಸ್ ವಿರುದ್ಧ ಬೌಲಿಂಗ್ ಮಾಡಲು ಪ್ರಯತ್ನಿಸಿದರು. ಅದಾಗಲೆ 9 ವಿಕೆಟ್ ಕಳೆದುಕೊಂಡಿದ್ದ ನೆದರ್ಲೆಂಡ್ಸ್ ವಿರುದ್ಧ ಕೊನೆಯದಾಗಿ ಬೌಲಿಂಗ್ ಮಾಡಲು ಬಂದ ರೋಹಿತ್, ವಿಕೆಟ್ ಪಡೆದರು. ಈ ಮೂಲಕ ಕಳೆದ 40 ವರ್ಷಗಳಲ್ಲಿ ವಿಶ್ವಕಪ್ ಪಂದ್ಯವೊಂದರಲ್ಲಿ 50 + ರನ್ ಮತ್ತು 1 ವಿಕೆಟ್ ಪಡೆದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಸಿಕ್ಸರ್‌ ಬಾರಿಸುವುದಕ್ಕೂ ಹೆಸರುವಾಸಿಯಾಗಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ನಾಯಕ ಎಂಬ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ 2 ಸಿಕ್ಸರ್ ಬಾರಿಸಿದ್ದರು.

2023ರ ವಿಶ್ವಕಪ್‌’ನಲ್ಲಿ ರೋಹಿತ್ ಇದುವರೆಗೆ 24 ಸಿಕ್ಸರ್‌’ಗಳನ್ನು ಸಿಡಿಸಿದ್ದಾರೆ. ಈ ವಿಚಾರದಲ್ಲಿ ಇಂಗ್ಲೆಂಡ್‌’ನ ಮಾಜಿ ನಾಯಕ ಇಯಾನ್‌ ಮಾರ್ಗನ್‌ ಅವರನ್ನು ಹಿಂದಿಕ್ಕಿದ್ದಾರೆ. 2019ರ ವಿಶ್ವಕಪ್‌’ನಲ್ಲಿ ಮಾರ್ಗನ್ 22 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇದನ್ನೂ ಓದಿ: ಶ್ವೇತ ನಾಗರ ಎಂದಾದರೂ ಕಂಡಿದ್ದೀರಾ? ಕೋಟಿ ಕೋಟಿ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್:

ರೋಹಿತ್ ಶರ್ಮಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಕದಿನದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2023ರಲ್ಲಿ ಇದುವರೆಗೆ ಏಕದಿನ ಪಂದ್ಯಗಳಲ್ಲಿ 60 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ 2015ರಲ್ಲಿ ಎಬಿ ಡಿವಿಲಿಯರ್ಸ್ 58 ಸಿಕ್ಸರ್ ಬಾರಿಸಿದ್ದರು. ಕ್ರಿಸ್ ಗೇಲ್ 2019 ರಲ್ಲಿ 56 ಸಿಕ್ಸರ್ಗಳನ್ನು ಹೊಡೆದಿದ್ದರು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಲ್‌ ರೌಂಡರ್ ಶಾಹಿದ್ ಅಫ್ರಿದಿ 48 ಸಿಕ್ಸರ್‌ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News