'ನಾನು ಹೇಳ್ತಾನೆ ಇದ್ದೆ...' ಕುಲದೀಪ್ ಯಾದವ್ ವಿಷಾದ! ರೋಹಿತ್‌ ಶರ್ಮಾ ಆಟಗಾರರ ಮಾತೇ ಕೇಳಿಲ್ವಾ?

Kuldeep Yadav On Rohit Sharma : 2023ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅದ್ಭುತ ಗೆಲುವು ದಾಖಲಿಸಿದೆ. ಸ್ಪಿನ್ ಮಾಸ್ಟರ್ ಕುಲದೀಪ್ ಯಾದವ್ ಕೂಡ ಕೊಡುಗೆ ನೀಡಿದ್ದಾರೆ. ಆದರೆ ಪಂದ್ಯ ಗೆದ್ದ ನಂತರ ಕುಲದೀಪ್ ರೋಹಿತ್ ಶರ್ಮಾ ಮಾಡಿದ ದೊಡ್ಡ ತಪ್ಪನ್ನು ತೆರೆದಿಟ್ಟರು.  

Written by - Chetana Devarmani | Last Updated : Oct 31, 2023, 09:45 AM IST
  • ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅದ್ಭುತ ಗೆಲುವು
  • ರೋಹಿತ್ ಶರ್ಮಾ ಮಾಡಿದ್ರಾ ಈ ದೊಡ್ಡ ತಪ್ಪು?
  • ಸ್ಪಿನ್ ಮಾಸ್ಟರ್ ಕುಲದೀಪ್ ಯಾದವ್ ವಿಷಾದ
'ನಾನು ಹೇಳ್ತಾನೆ ಇದ್ದೆ...' ಕುಲದೀಪ್ ಯಾದವ್ ವಿಷಾದ! ರೋಹಿತ್‌ ಶರ್ಮಾ ಆಟಗಾರರ ಮಾತೇ ಕೇಳಿಲ್ವಾ?  title=

Kuldeep Yadav : ಭಾರತ ವಿಶ್ವಕಪ್‌ನಲ್ಲಿ ಸತತ ಗೆಲುವು ದಾಖಲಿಸಿದೆ. ಇಂಗ್ಲೆಂಡ್ ವಿರುದ್ಧ (IND vs ENG) ಭಾರತ ಗೆಲುವು ದಾಖಿಲಿಸಿ ಜಯದ ಓಟ ಮುಂದುವರೆಸಿದೆ. ಟೀಂ ಇಂಡಿಯಾ ಬೌಲರ್ ಗಳ ಚಮತ್ಕಾರದಿಂದ ಇಂಗ್ಲೆಂಡ್‌ ತಂಡಕ್ಕೆ ಸೋಲಿನ ಕಹಿ ಉಣಿಸಿತು. ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ಗಳು ಶುಭಾರಂಭ ಮಾಡಿದರು. ಆದರೆ ಪಂದ್ಯದ ನಂತರ ಅವರು ರೋಹಿತ್ ಶರ್ಮಾ ಅವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

ವಿಶ್ವಕಪ್‌ನಲ್ಲಿ ಕುಲದೀಪ್ ಯಾದವ್ ಸಖತ್ ಫಾರ್ಮ್‌ನಲ್ಲಿದ್ದಾರೆ.‌ ಇವರ ಎಸೆತಗಳು ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆಯುತ್ತಿವೆ. ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ 10 ವಿಕೆಟ್  ಕಬಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಕುಲದೀಪ್ ಎರಡು ವಿಕೆಟ್ ತೆಗೆದರು. 

ರೋಹಿತ್ ಶರ್ಮಾ ಅವರ ಬಳಿ ರಿವ್ಯೂ ಕೇಳಿದಾಗ ಅದನ್ನು ಪಡೆಯಲು ನಿರಾಕರಿಸಿದರು ಎಂದು ಕುಲದೀಪ್‌ ಯಾದವ್‌ ಹೇಳಿದ್ದಾರೆ. ಕುಲದೀಪ್ ಯಾದವ್ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್‌ ವಿಕೆಟ್‌ ಗೆ ಮನವಿ ಮಾಡಿದರಂತೆ. ಆದರೆ ಅಂಪೈರ್‌ ವಿಕೆಟ್‌ ನೀಡಲು ನಿರಾಕರಿಸಿದರು. ಆಗ ರೋಹಿತ್‌ ಶರ್ಮಾ ಅವರಿಗೆ ರಿವ್ಯೂ ತೆಗೆದುಕೊಳ್ಳಲು ಕೇಳಿದರೂ ಅವರು ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಲಿವಿಂಗ್‌ಸ್ಟನ್ ಔಟಾಗಲಿಲ್ಲ ಎಂದಿದ್ದಾರೆ. 

ಇದನ್ನೂ ಓದಿ: ಲೈವ್ ಟಿವಿಯಲ್ಲೇ ಪಾಕ್ ನಾಯಕ ಬಾಬರ್ ಅಜಂ ವಾಟ್ಸಪ್ ಚಾಟ್ ಲೀಕ್ ಮಾಡಿದ ಪಿಸಿಬಿ ಅಧ್ಯಕ್ಷ! ಏನಿತ್ತು ಅದರಲ್ಲಿ? 

ಪಂದ್ಯದ ನಂತರ ಮಾತನಾಡಿದ ಕುಲದೀಪ್‌ ಯಾದವ್,‌ ನಮ್ಮ ಒಂದು ರಿವ್ಯೂ ವ್ಯರ್ಥವಾಗಿದೆ. ರೋಹಿತ್ ಶರ್ಮಾ ಬಳಿ ಲಿವಿಂಗ್‌ಸ್ಟನ್ ಔಟ್ ಆಗಿದ್ದಾರೆ. ರಿವ್ಯೂ ತೆಗೆದುಕೊಳ್ಳಿ ಎಂದು ನಾನು ಹೇಳುತ್ತಲೇ ಇದ್ದೆ. ಆದರೆ ಅವರು ಅದನ್ನು ಒಪ್ಪಲಿಲ್ಲ ಎಂದು ವಿಷಾದಿಸಿದರು. 

ಟೀಂ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ. ಇವರು ಇಂಗ್ಲೆಂಡ್‌ ವಿರುದ್ಧ ಅತ್ಯಂತ ಅಪಾಯಕಾರಿ ಬೌಲಿಂಗ್ ಮಾಡಿದರು. ಎರಡು ಮ್ಯಾಚ್‌ಗಳಲ್ಲಿ ಅವರ ಬೌಲಿಂಗ್ ನೋಡಿದವರು, ಶಮಿ ಮೊದಲ ನಾಲ್ಕು ಪಂದ್ಯಗಳಲ್ಲಿದ್ದಿದ್ದರೆ ಈ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುತ್ತಿದ್ದರೇನೋ ಎಂದು ಹೇಳುತ್ತಿದ್ದಾರೆ. ಮೊಹಮ್ಮದ್ ಶಮಿ ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಮತ್ತು ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ ಪಡೆದರು. ಶಮಿ ಎರಡು ಪಂದ್ಯಗಳಲ್ಲಿ 9 ವಿಕೆಟ್ ತೆಗೆದಿದ್ದಾರೆ. 

ಭಾರತದ ಪರ ಇದುವರೆಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಬುಮ್ರಾ 6 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 3 ಪ್ರಮುಖ ವಿಕೆಟ್‌ಗಳನ್ನು ಪಡೆದರು.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಾಸಾದ್ರೆ ಹೊರಗುಳಿಯೋದು ಶಮಿ ಅಲ್ಲ… ಈ ಸ್ಟಾರ್ ಬ್ಯಾಟ್ಸ್’ಮನ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News