ರನ್ ಕಲೆ ಹಾಕುವಲ್ಲಿ ಗಿಲ್ ವೈಫಲ್ಯ ! ಮುಂದಿನ ಪಂದ್ಯದಲ್ಲಿ ಒಪನರ್ ಆಗಿ ರೋಹಿತ್ ಗೆ ಸಾಥ್ ನೀಡುವುದು ಈ ಆಟಗಾರ

ಶುಭಮನ್ ಗಿಲ್ ಅವರ ಫಾರ್ಮ್ ಇದೀಗ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ  ರೋಹಿತ್ ಜೊತೆ ಓಪನರ್ ಆಗಿ ಗಿಲ್ ಬದಲು  ಬೇರೆ ಬ್ಯಾಟ್ಸ್ ಮ್ಯಾನ್ ಆಡಲಿದ್ದಾರೆ.    

Written by - Ranjitha R K | Last Updated : Oct 31, 2023, 11:08 AM IST
  • ರೋಹಿತ್ ಜೊತೆ ಓಪನರ್ ಆಗಿ ಗಿಲ್ ಬದಲು ಬೇರೆ ಬ್ಯಾಟ್ಸ್ ಮ್ಯಾನ್ ಆಡಲಿದ್ದಾರೆ.
  • ಎಲ್ಲಾ ಆರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
  • ಪ್ಲೇಯಿಂಗ್-11 ರಲ್ಲಿ ಈ ಸ್ಪೋಟಕ ಆಟಗಾರನಿಗೆ ಅವಕಾಶ
ರನ್ ಕಲೆ ಹಾಕುವಲ್ಲಿ ಗಿಲ್ ವೈಫಲ್ಯ ! ಮುಂದಿನ ಪಂದ್ಯದಲ್ಲಿ ಒಪನರ್ ಆಗಿ ರೋಹಿತ್ ಗೆ ಸಾಥ್ ನೀಡುವುದು ಈ ಆಟಗಾರ  title=

India vs Sri Lanka : ರೋಹಿತ್ ಜೊತೆ ಓಪನರ್ ಆಗಿ ಗಿಲ್ ಬದಲು  ಬೇರೆ ಬ್ಯಾಟ್ಸ್ ಮ್ಯಾನ್ ಆಡಲಿದ್ದಾರೆ. ಇಲ್ಲಿಯವರೆಗೆ ಆಡಿರುವ ಎಲ್ಲಾ ಆರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತಕ್ಕೆ ಸೆಮಿಫೈನಲ್ ಹಾದಿ ತುಂಬಾ ಸುಲಭ. ಉಳಿದ 3  ಪಂದ್ಯದಲ್ಲಿ ಒಂದರಲ್ಲಿ ಗೆದ್ದರೂ ಭಾರತ  ಟಾಪ್ 4ರಲ್ಲಿ ಸ್ಥಾನ ಪಡೆಯಲಿದೆ. ಆದರೆ ಶುಭಮನ್ ಗಿಲ್ ಅವರ ಫಾರ್ಮ್ ಇದೀಗ ಆತಂಕಕ್ಕೆ ಕಾರಣವಾಗಿದೆ. ಗಿಲ್ ಈ ಟೂರ್ನಿಯಲ್ಲಿ ಇದುವರೆಗೆ ದೊಡ್ಡ ಮಟ್ಟದ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.   ಹೀಗಿರುವಾಗ ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ  ಜೊತೆ ಗಿಲ್ ಮೈದಾನಕ್ಕೆ ಇಳಿಯುವುದಿಲ್ಲ ಎನ್ನಲಾಗಿದೆ. ರೋಹಿತ್ ಜೊತೆ ಓಪನರ್ ಆಗಿ ಗಿಲ್ ಬದಲು  ಬೇರೆ ಬ್ಯಾಟ್ಸ್ ಮ್ಯಾನ್ ಆಡಲಿದ್ದಾರೆ.  ಅಂದರೆ ಪ್ಲೇಯಿಂಗ್-11 ರಲ್ಲಿ ಈ ಸ್ಪೋಟಕ ಆಟಗಾರನಿಗೆ ಅವಕಾಶ ಸಿಗುವ ಎಲ್ಲಾ ಸಾಧ್ಯತೆಗಳಿವೆ. 

ಅಬ್ಬರಿಸುತ್ತಿಲ್ಲ ಶುಭಮನ್ ಗಿಲ್: 
ಡೆಂಗ್ಯೂ ಕಾರಣದಿಂದಾಗಿ 2023 ರ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಶುಭಮನ್ ಗಿಲ್, ಇದುವರೆಗೆ ತಮ್ಮ ಅತ್ಯುತ್ತಮ ಫಾರ್ಮ್ ಗೆ ಮರಳಲೇ ಇಲ್ಲ. ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಗಿಲ್ ಪ್ಲೇಯಿಂಗ್-11 ಗೆ ಮರಳಿದ್ದರು. ಆದರೆ ಇಲ್ಲಿಯವರೆಗೆ  ಹೇಳಿಕೊಳ್ಳುವಂಥ ಪ್ರದರ್ಶನ ತೋರಲಿಲ್ಲ. ಚೊಚ್ಚಲ ವಿಶ್ವಕಪ್ ಆಡುತ್ತಿರುವ ಗಿಲ್ 4 ಪಂದ್ಯಗಳಲ್ಲಿ 104 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಗಳಿಸಿದ 53 ರನ್ ಇಲ್ಲಿಯವರೆಗಿನ ಅವರ ಗರಿಷ್ಠ ಸ್ಕೋರ್ ಆಗಿದೆ. 

ಇದನ್ನೂ ಓದಿ : ಪತ್ನಿಯಿಂದ ವಿಚ್ಛೇದನ, ಸೂಸೈಡ್ ಪ್ಲ್ಯಾನ್! ಆದ್ರೆ ಇಂದು ವಿಶ್ವಕಪ್’ನಲ್ಲಿ ಈತನೇ ಟೀಂ ಇಂಡಿಯಾದ ಗೆಲುವಿನ ರೂವಾರಿ!

ಓಪನರ್ ಆಗಲಿದ್ದಾರೆ ಈ ಆಟಗಾರ: 
ಶುಭಮನ್ ಗಿಲ್ ಅವರ ಪ್ರದರ್ಶನವನ್ನು ಪರಿಗಣಿಸಿ, ಟೀಂ ಇಂಡಿಯಾ ನಾಕೌಟ್ ಪಂದ್ಯಗಳಿಗೆ ಮೊದಲು ಇಶಾನ್ ಕಿಶನ್‌ಗೆ ಅವಕಾಶ ನೀಡಬಹುದು. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಹಲವು ಪಂದ್ಯಗಳಲ್ಲಿಯೂ ಈ ಸಾಧನೆ ಮಾಡಿ ತೋರಿಸಿದ್ದಾರೆ. ಈ ಹಿಂದೆಯೂ ಅವರು ರೋಹಿತ್ ಶರ್ಮಾ ಅವರೊಂದಿಗೆ  ಒಪನಿಂಗ್ ಮಾಡಿದ್ದಾರೆ. ಇದರೊಂದಿಗೆ ವಿಕೆಟ್ ಕೀಪಿಂಗ್ ಕೂಡಾ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಶುಭಮನ್ ಗಿಲ್ ಕಿಶನ್ ಅವರನ್ನು ಕೈಬಿಟ್ಟು ಪ್ಲೇಯಿಂಗ್-11ರಲ್ಲಿ ಇಶಾನ್ ಕಿಶನ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಭಾರತದ ಅದ್ಭುತ ಪಯಣ :
2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಈವರೆಗಿನ ಪಯಣವನ್ನು ನೋಡಿದರೆ ಬ್ಯಾಟ್ಸ್‌ಮನ್ ಮತ್ತು ಬೌಲರ್ ಇಬ್ಬರೂ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಬಹುತೇಕ ಸೆಮಿಫೈನಲ್‌ಗೆ ತಲುಪಿಸಿದ್ದಾರೆ. ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಆಟಗಾರರ ಮನೋಬಲ ಗಗನಕ್ಕೇರಿದೆ. ತಂಡ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಟಾಪ್ -4ರಲ್ಲಿ ಸ್ಥಾನ ಪಡೆಯಲು ಭಾರತ ಇನ್ನುಳಿದ 3 ಪಂದ್ಯಗಳಲ್ಲಿ ಒಂದನ್ನು ಗೆಲ್ಲಲೇಬೇಕು. ಟೀಂ ಇಂಡಿಯಾದ ಪ್ರದರ್ಶನ ಇದೇ ರೀತಿ ಮುಂದುವರಿದರೆ ವಿಶ್ವಕಪ್ ಟ್ರೋಫಿಗೆ ಭಾರತ ಮುತ್ತಿಡುವುದರಲ್ಲಿ ಅಚ್ಚರಿಯಿಲ್ಲ. 

ಇದನ್ನೂ ಓದಿ :  “ಇದೇ ಕಾರಣಕ್ಕೆ ಟೀಂ ಇಂಡಿಯಾ ಅಂದ್ರೆ ಇಷ್ಟ..”-ಸತತ ಗೆಲುವು ಕಂಡ ಭಾರತದ ಬಗ್ಗೆ ಪಾಕ್ ಆಟಗಾರನ ಹೇಳಿಕೆ ವೈರಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News