ಭಾರತ vs ಆಸ್ಟ್ರೇಲಿಯಾ.. ಟ್ರೋಫಿ ಗೆಲ್ಲುವ ತಂಡ ಇದು.. ವಿಶ್ವಕಪ್ ವಿಜೇತರ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!

India Vs Australia World Cup 2023 Final Prediction: ನವೆಂಬರ್ 19 ರಂದು ಭಾನುವಾರ ಕ್ರಿಕೆಟ್‌ ಅಭಿಮಾನಿಗಳಿಗೆ ಹಬ್ಬ. ವಿಶ್ವಕಪ್‌ ಫೈನಲ್‌ ಹಣಾಹಣಿ ನೋಡಲು ಜನರು ಕಾತುರರಾಗಿದ್ದಾರೆ.

Written by - Chetana Devarmani | Last Updated : Nov 18, 2023, 07:58 AM IST
  • ODI ವಿಶ್ವಕಪ್‌ 2023 ಫೈನಲ್‌ ಮ್ಯಾಚ್‌
  • ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ
  • ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯ
ಭಾರತ vs ಆಸ್ಟ್ರೇಲಿಯಾ.. ಟ್ರೋಫಿ ಗೆಲ್ಲುವ ತಂಡ ಇದು.. ವಿಶ್ವಕಪ್ ವಿಜೇತರ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..! title=

India Vs Australia Winner Prediction: ನವೆಂಬರ್ 19 ಭಾನುವಾರಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023 ರ ODI ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಟೀಂ ಇಂಡಿಯಾದ ಪಯಣ ಅದ್ಭುತವಾಗಿದೆ. ಭಾರತ ತಂಡ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ತಲುಪಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯದ ಪ್ರಯಾಣವು ಆರಂಭದಲ್ಲಿ ನಿರಾಶಾದಾಯಕವಾಗಿತ್ತು. ಆಸ್ಟ್ರೇಲಿಯ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋತಿತು, ಆದರೆ ನಂತರ ಗೆಲುವಿನ ನಗೆ ಬೀರುತ್ತ ಫೈನಲ್‌ಗೆ ಬಂದಿದೆ. ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ವಿಶ್ವಕಪ್ 2023 ಟ್ರೋಫಿ ಯಾರು ಗೆಲ್ಲುತ್ತಾರೆ?

ಪಂಡಿತ್ ಜಗನ್ನಾಥ್ ಗುರೂಜಿ ಪ್ರಕಾರ, ಎರಡೂ ಕಡೆಯ ಜಾತಕವನ್ನು ಹೋಲಿಕೆ ಮಾಡಿದರೆ ಆಸ್ಟ್ರೇಲಿಯಾ ವಿರುದ್ಧ ಭಾರತವು ಮೇಲುಗೈ ಸಾಧಿಸುತ್ತದೆ. ಭಾರತವು ಐಸಿಸಿ ವಿಶ್ವಕಪ್ 2023 ಟ್ರೋಫಿಯನ್ನು ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಭಾರತದ ಜಾತಕವು ಪ್ರಸ್ತುತ ಆಸ್ಟ್ರೇಲಿಯಾಕ್ಕಿಂತ ಉತ್ತಮ ಮತ್ತು ಬಲವಾಗಿದೆ. ಇದು ಪಂದ್ಯದ ದಿನದಂದು ತಮ್ಮ ಎದುರಾಳಿಗಳನ್ನು ಸೋಲಿಸಲು ಭಾರತೀಯ ಆಟಗಾರರಿಗೆ ಉತ್ಸಾಹ, ಶಕ್ತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ : ಫೈನಲ್ ಗೂ ಮುನ್ನ ಭಯ ಬಿದ್ದ ಕಾಂಗರೂ ಪಡೆ ! ಮ್ಯಾಚ್ ವಿನ್ನರ್ ಬಾಯಿಯಿಂದ ಬಂತು ಈ ಮಾತು ! 

ಭಾರತೀಯ ಆಟಗಾರರ ಬಗ್ಗೆ ಮಾತನಾಡಿದ ಜಗನ್ನಾಥ್ ಗುರೂಜಿ, ಈ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ಜಾತಕವು ಬಲವಾಗಿದೆ. ಇದು ಅವರ ನಾಯಕತ್ವದ ಕೌಶಲ್ಯಕ್ಕೆ ಸಹಾಯ ಮಾಡಿದೆ. ಇದಲ್ಲದೆ, ರೋಹಿತ್ ಅವರ ಗ್ರಹಗಳ ಸ್ಥಾನಗಳು ಮತ್ತು ಜೋಡಣೆಯು 2011 ರ ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯವರಂತೆಯೇ ಇದೆ ಎಂದಿದ್ದಾರೆ. 

ಜ್ಯೋತಿಷಿಗಳು ಹೇಳುವ ಪ್ರಕಾರ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರ ಜಾತಕ ಕೂಡ ಗೆಲುವಿಗೆ ಪೂರಕವಾಗಿವೆ. ಇದರಿಂದ ಅವರು ಪ್ರಾಬಲ್ಯ ಸಾಧಿಸಲು ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತದೆ. ಭಾನುವಾರ ನಡೆಯಲಿರುವ ವಿಶ್ವಕಪ್ 2023ರ ಫೈನಲ್‌ನಲ್ಲಿ ಇತಿಹಾಸ ಸೃಷ್ಟಿಸಬಹುದು. ಭಾರತದ ಎಂಟನೇ ಮನೆಯಲ್ಲಿ ಮಂಗಳನ ಉಪಸ್ಥಿತಿಯು ಭಾರತೀಯ ಆಟಗಾರರು ತಮ್ಮ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲು ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಬಾರದು ಎಂದು ಸೂಚಿಸುತ್ತದೆ.  

ಆಸ್ಟ್ರೇಲಿಯ ತಂಡದ ಜಾತಕ : 

ಜಗನ್ನಾಥ್ ಗುರೂಜಿ ಪ್ರಕಾರ, ಆಸ್ಟ್ರೇಲಿಯದ ಪ್ಯಾಟ್ ಕಮ್ಮಿನ್ಸ್ ಅವರ ಜಾತಕವು ಉತ್ತಮ ರೂಪದಲ್ಲಿ ಕಾಣುತ್ತಿದೆ. ಇದು ಉತ್ತಮ ಗ್ರಹಗಳ ಜೋಡಣೆ ಮತ್ತು ನಾಯಕತ್ವದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದನ್ನು ಸೂಚಿಸುತ್ತದೆ. ಆದರೆ ರೋಹಿತ್ ಅವರ ಜಾತಕದೊಂದಿಗೆ ಹೋಲಿಸಿದರೆ, ಹಿಟ್‌ಮ್ಯಾನ್ ಎಲ್ಲಾ ಅಂಶಗಳಲ್ಲಿ ಆಸ್ಟ್ರೇಲಿಯನ್ ನಾಯಕನನ್ನು ಮೀರಿಸಬಹುದು ಎಂದು ಹೇಳಿದರು. ಆಸ್ಟ್ರೇಲಿಯನ್ ತಂಡದ ಆಟಗಾರರು ಹೆಡ್, ಮಿಚೆಲ್ ಮಾರ್ಷ್, ಆಡಮ್ ಝಂಪಾ, ಸ್ಟಾರ್ಕ್ ಮತ್ತು ಮಾರ್ನಸ್ ಆಟದ ಮೇಲೆ ಉತ್ತಮ ಪರಿಣಾಮ ಬೀರಬಹುದು. 

ಇದನ್ನೂ ಓದಿ : ICC World Cup 2023: 20 ವರ್ಷಗಳ ನಂತರ ವಿಶ್ವಕಪ್ ಫೈನಲ್‌ನಲ್ಲಿ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News