“ದೇಶದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..”- ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೇಳಿಕೆ ವೈರಲ್

Mohammad Shami Reaction on Match Fixing Allegation: ಇದುವರೆಗೆ ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಆರು ಪಂದ್ಯಗಳನ್ನಾಡಿದೆ. ಅದರಲ್ಲೂ ಆರರಲ್ಲೂ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಂದಹಾಗೆ ಮೊಹಮ್ಮದ್ ಶಮಿ ಕೇವಲ 2 ಮ್ಯಾಚ್’ನಲ್ಲಿ ಸ್ಥಾನ ಪಡೆದಿದ್ದು, 9 ವಿಕೆಟ್ ಕಬಳಿಸಿದ್ದಾರೆ.

Written by - Bhavishya Shetty | Last Updated : Nov 1, 2023, 03:40 PM IST
    • ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವುದು ಮೊಹಮ್ಮದ್ ಶಮಿ.
    • ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೇಳಿಕೆ ವೈರಲ್
    • ಇದುವರೆಗೆ ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಆರು ಪಂದ್ಯಗಳನ್ನಾಡಿದೆ
“ದೇಶದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..”- ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೇಳಿಕೆ ವೈರಲ್ title=
Mohammad Shami

Mohammad Shami Reaction on Match Fixing Allegation: ಪ್ರಸ್ತುತ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸುತ್ತಿದೆ. ಆಡಿರುವ 6 ಪಂದ್ಯಗಳಲ್ಲೂ ಸತತ ಗೆಲುವು ಕಂಡ ಭಾರತಕ್ಕೆ ತಂಡದ ಪ್ರತಿಯೊಬ್ಬ ಆಟಗಾರನ ಬೆಂಬಲವೂ ಸಿಕ್ಕಿದೆ. ಇನ್ನೊಂದೆಡೆ ಟೀಂ ಇಂಡಿಯಾದ ಬೌಲಿಂಗ್ ಅದ್ಭುತವಾಗಿದೆ. ಅದರಲ್ಲೂ ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವುದು ಮೊಹಮ್ಮದ್ ಶಮಿ.

ಇದನ್ನೂ ಓದಿ: 100 ವರ್ಷಗಳ ಬಳಿಕ ಅದೃಷ್ಟದ ರಾಜಯೋಗಗಳು: ಮಹಾಲಕ್ಷ್ಮೀ ಪೂರ್ಣ ಆಶೀರ್ವಾದದಿಂದ ಈ ರಾಶಿಗೆ ಧನವೈಭವ-ಸುಖೀ ಜೀವನ ಸಿದ್ಧಿ

ಇದುವರೆಗೆ ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಆರು ಪಂದ್ಯಗಳನ್ನಾಡಿದೆ. ಅದರಲ್ಲೂ ಆರರಲ್ಲೂ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಂದಹಾಗೆ ಮೊಹಮ್ಮದ್ ಶಮಿ ಕೇವಲ 2 ಮ್ಯಾಚ್’ನಲ್ಲಿ ಸ್ಥಾನ ಪಡೆದಿದ್ದು, 9 ವಿಕೆಟ್ ಕಬಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದರೆ, ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಉರುಳಿಸಿದ್ದರು. ಸದ್ಯ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಶಮಿ, ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ತಿಳಿದಿರುವಂತಹದ್ದು. ಅವರ ಪತ್ನಿ ಹಸಿನ್ ಶಮಿ ವಿರುದ್ಧ ದೌರ್ಜನ್ಯ, ದೇಶದ್ರೋಹ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಮಾಡಿದ್ದರು.

ಒಂದೊಮ್ಮೆ ನಡೆದ ಸಂದರ್ಶನದಲ್ಲಿ ಪತ್ರಕರ್ತೆಯೊನ್ನರು ದೇಶದ್ರೋಹದಂತಹ ಆರೋಪದ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಶಮಿ, "ನನ್ನ ಮನಸ್ಸಿನಲ್ಲಿ ದೇಶಕ್ಕೆ ದ್ರೋಹ ಬಗೆಯುವ ಯೋಚನೆ ಬಂದರೆ,ನಾನು ಆ ಕ್ಷಣದಲ್ಲೇ ಸಾಯಲು ಬಯಸುತ್ತೇನೆಯೇ ಹೊರತು, ದೇಶಕ್ಕೆ ದ್ರೋಹ ಬಗೆಯುವುದಿಲ್ಲ" ಎಂದು ಹೇಳಿದ್ದರು.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ದೊಡ್ಡ ದೌರ್ಬಲ್ಯ ಈ ಆಟಗಾರ…!- ಪಾಕ್ ಆಟಗಾರನ ಬಹಿರಂಗ ಹೇಳಿಕೆ ವೈರಲ್

ಇನ್ನು 2021ರ ಐಸಿಸಿ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಸೋಲು ಕಂಡಿತ್ತು. ಆ ಸಂದರ್ಭದಲ್ಲಿ ಕೆಲ ನೆಟ್ಟಿಗರು ಶಮಿಯನ್ನು ‘ಪಾಕಿಸ್ತಾನಿ ಏಜೆಂಟ್’ ಎಂದೆಲ್ಲಾ ಟೀಕಿಸಿದ್ದರು. ಆದರೆ ಈಗ ಶಮಿಯೇ ಟೀಂ ಇಂಡಿಯಾದ ಗೆಲುವಿನ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News