Suryakumar Yadav Press Conference: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಪ್ರಾರಂಭವಾಗಿದೆ. ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ ಭಾರತ. ಈ ಪಂದ್ಯದ ನಂತರ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಆಟಗಾರರನ್ನು ಹೊಗಳಿದ್ದು, ಬೌಲಿಂಗ್ ಉತ್ತಮ ಕೆಲಸ ಮಾಡಿದೆ ಮತ್ತು ಬ್ಯಾಟ್ಸ್ಮನ್ಗಳ ಪ್ರದರ್ಶನ ಅದ್ಭುತವಾಗಿತ್ತು ಎಂದು ಸೂರ್ಯ ಹೇಳಿದರು.
ಇದನ್ನೂ ಓದಿ: 2025 ರಲ್ಲಿ ಆಗಲಿದೆ ಜಗತ್ತಿನ ವಿನಾಶ.. ಎದೆ ನಡುಗಿಸುತ್ತೆ ಫ್ರೆಂಚ್ನ ಜನಪ್ರಿಯ ಕಾಲಜ್ಞಾನಿ ನಾಸ್ಟ್ರಾಡಾಮಸ್ ಭವಿಷ್ಯ!
ಸೂರ್ಯ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲ ಎರಡು ಓವರ್ಗಳಲ್ಲಿ ಎರಡು ವಿಕೆಟ್ಗಳನ್ನು ಪಡೆಯುವ ಮೂಲಕ ಅರ್ಶ್ದೀಪ್ ಆ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದರು. ಇದಾದ ನಂತರ, ವರುಣ್ ಚಕ್ರವರ್ತಿ ಇಂಗ್ಲೆಂಡ್ನ ಮಧ್ಯಮ ಕ್ರಮಾಂಕವನ್ನೇ ಬುಡಮೇಲು ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 132 ರನ್ ಗಳಿಸಿತು. ಭಾರತ 12.5 ಓವರ್ಗಳಲ್ಲಿ ಈ ಗುರಿಯನ್ನು ತಲುಪಿತು. ಅಭಿಷೇಕ್ ಶರ್ಮಾ ಬಿರುಗಾಳಿಯ ಇನ್ನಿಂಗ್ಸ್ ಆಡಿ 79 ರನ್ ಗಳಿಸಿದರು.
ಈ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಮಾತನಾಡಿ, "ಟಾಸ್ ಗೆದ್ದಿದ್ದು ನಮಗೆ ಒಳ್ಳೆಯದಾಯಿತು. ಬೌಲರ್ಗಳು ಸಹ ಉತ್ತಮವಾಗಿ ಬೌಲಿಂಗ್ ಮಾಡಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದರು. ಆಟಗಾರರು ಚೈತನ್ಯ ತುಂಬಿದಂತೆ ಕಾಣುತ್ತಿದ್ದರು ಮತ್ತು ಬ್ಯಾಟ್ಸ್ಮನ್ಗಳ ಪ್ರದರ್ಶನ ಅದ್ಭುತವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಹಾರ್ದಿಕ್ ಉತ್ತಮ ಬೌಲಿಂಗ್ ಮಾಡಿದ್ದರು. ಆದ್ದರಿಂದ ನಾವು ಹೆಚ್ಚುವರಿ ಸ್ಪಿನ್ನರ್ನೊಂದಿಗೆ ಬೌಲಿಂಗ್ ಮಾಡಲು ಸಾಧ್ಯವಾಯಿತು. ಹುಡುಗರು ಚೆನ್ನಾಗಿ ಫೀಲ್ಡಿಂಗ್ ಮಾಡಿದರು. ಫೀಲ್ಡಿಂಗ್ ಕೋಚ್ ಕೂಡ ಇದರ ಬಗ್ಗೆ ಚರ್ಚಿಸಿದರು" ಎಂದು ಹೇಳಿದರು.
ಇದನ್ನೂ ಓದಿ:
ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಗೆ ಬೆಚ್ಚಿದ ಇಂಗ್ಲೆಂಡ್, ಟೀಮ್ ಇಂಡಿಯಾಗೆ 7 ವಿಕೆಟ್ ಗಳ ಭರ್ಜರಿ ಗೆಲುವು
ಜೋಫ್ರಾ ಆರ್ಚರ್ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಒಂದೇ ಓವರ್ನಲ್ಲಿ ಪೆವಿಲಿಯನ್ಗೆ ಕಳುಹಿಸುವ ಮೂಲಕ ಭಾರತೀಯ ಅಭಿಮಾನಿಗಳಿ ಸ್ವಲ್ಪ ಟೆನ್ಶನ್ ಕೊಟ್ಟಿದ್ದರು. ಆದರೂ ಅಭಿಷೇಕ್ ತಮ್ಮ ಆಕ್ರಮಣಕಾರಿ ಶೈಲಿ ಬಿಡದೆ ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಮತ್ತು 34 ಎಸೆತಗಳಲ್ಲಿ 79 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ