ಬೆಂಗಳೂರು : ಬಿಜೆಪಿಯಲ್ಲಿ ಬಣದ ರಾಜಕೀಯ ತೀವ್ರಗೊಂಡಿದ್ದು, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಸದಸ್ಯರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜೇಯೇಂದ್ರ ಪರ ಬಣದ ಸದಸ್ಯರ ನಡೆಗೆ ಅಗರವಾಲ್ ಗರಂ ಆಗಿದ್ದು, ಈ ಬಣದ ಸದಸ್ಯರಿಗೆ ಚಾಟಿ ಬೀಸಿದ್ದಾರೆ. "ಯತ್ನಾಳ್ ಮಾಡುವ ಕೆಲಸ ತಪ್ಪಾಗಿದೆ. ಆದರೆ, ನೀವು ಮಾಡುತ್ತಿದ್ದುದು ಏನು?" ಎಂದು ಪ್ರಶ್ನೆ ಮಾಡಿ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ. "ಚುನಾವಣೆಯಲ್ಲಿ ರೇಣುಕಾಚಾರ್ಯ ಮತ್ತು ಪ್ರೀತಂ ಗೌಡ ಏನು ಮಾಡಿದರು? ನಿಮ್ಮ ಪ್ರಯತ್ನಗಳು ಪಕ್ಷದ ಹಿತಾಸಕ್ತಿಗೆ ಬೆಂಬಲವಾಯಿತೇ?" ಎಂಬ ಪ್ರಶ್ನೆಯನ್ನು ಅಗರವಾಲ್ ಸ್ಪಷ್ಟವಾಗಿ ಮುಂದಿಟ್ಟಿದ್ದಾರೆ.
ಇದನ್ನೂ ಓದಿ:ಇದು 60 ಪರ್ಸೆಂಟ್ ವಸೂಲಿ ಮಾಡಿದ ನೆನಪಿನ ಜಾತ್ರೆಯೇ ಹೊರತು ಕಾಂಗ್ರೆಸ್ ಸಮಾವೇಶವಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ
ಹೈಕಮಾಂಡ್ ಗಮನ:
ಈ ಬಣಗಳ ಅಹಿತಕರ ಚಟುವಟಿಕೆಗಳ ಬಗ್ಗೆ ಹೈಕಮಾಂಡ್ ಗಮನಿಸಿದ್ದು, "ಎಲ್ಲವೂ ಸರಿಯಾಗುತ್ತೆ" ಎಂದು ಅವರು ಸಭೆಯಲ್ಲಿ ಹೇಳಿದರು. "ಗುಂಪುಗಾರಿಕೆಯನ್ನು ಮೊದಲು ನಿಲ್ಲಿಸಿ. ಪಕ್ಷವನ್ನು ಪಾವಿತ್ರ್ಯದಿಂದ ಪೂಜಿಸುವವರು ನಾವು. ದಯವಿಟ್ಟು ಈ ಸ್ಥಿತಿಯನ್ನು ಸರಿಪಡಿಸಿ," ಎಂದು ರಾಧಾಮೋಹನ್ ದಾಸ್ ಮನವಿ ಮಾಡಿದ್ದಾರೆ.
ವಿಜೇಯೇಂದ್ರ ಪ್ರೊಬೇಷನರಿ ಪೀರಿಯಡ್ನಲ್ಲಿ ಇದ್ದಾರೆ :
ಸದ್ಯ ವಿಜೇಯೇಂದ್ರ ಪ್ರೊಬೇಷನರಿ ಅವಧಿಯಲ್ಲಿ ಇರುವುದರಿಂದ ಅವರಿಗೆ ಇನ್ನೂ ಕೆಲವು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ಬಹುತೇಕ ಸದಸ್ಯರು ವ್ಯಕ್ತಪಡಿಸಿದ್ದಾರೆ.
ಬಣದ ಭಿನ್ನತೆ ಮತ್ತು ಗುಂಪುಗಾರಿಕೆಯನ್ನು ತಾತ್ಸಾರವಾಗಿ ಬಿಡಲು ರಾಧಾಮೋಹನ್ ದಾಸ್ ಸಿದ್ಧರಿಲ್ಲ. "ಪಕ್ಷದ ಭವಿಷ್ಯ ದೃಷ್ಟಿಯಿಂದ ಬಣದ ರಾಜಕೀಯವನ್ನು ತಕ್ಷಣವೇ ತಡೆಯಬೇಕಾಗಿದೆ" ಎಂದು ಅವರು ಸಿಟ್ಟಿನಿಂದ ಹೇಳಿದರು.
ಇದನ್ನೂ ಓದಿ: ಬೆಳಗಾವಿ ಐತಿಹಾಸಿಕ 'ಗಾಂಧಿ ಭಾರತ ಸಮಾವೇಶ'ದ ಮೈಲಿಗಲ್ಲಿನ ತುಣುಕು ಇಲ್ಲಿದೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.