ನವದೆಹಲಿ: ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿ ಗೆಲುವು ಸಾಧಿಸಿತು.
ಕೊಲಂಬೊದಲ್ಲಿ ಮಳೆಯ ನಿರಂತರ ಅಡಚಣೆಯಿಂದ 50 ಓವರ್‍ಗಳ ಪಂದ್ಯವನ್ನು 27 ಓವರ್‌ಗಳಿಗೆ ಇಳಿಸಲಾಯಿತು. ಬೌಲಿಂಗ್‍ನಲ್ಲಿ ಪ್ರಾಬಲ್ಯ ಸಾಧಿಸಿದ ಶ್ರೀಲಂಕಾ ಅಲ್ಪಮೊತ್ತಕ್ಕೆ ಜಿಂಬಾಬ್ವೆ ತಂಡವನ್ನು ಕಟ್ಟಿಹಾಕಿತು. ಶ್ರೀಲಂಕಾದ ಮಾರಕ ಬೌಲಿಂಗ್ ದಾಳಿಗೆ ಆತಿಥೇಯ ತಂಡ ನಲುಗಿ ಹೋಯಿತು. ಪರಿಣಾಮ ಜಿಂಬಾಬ್ವೆ ತಂಡವು ಹೀನಾಯ ಸೋಲು ಕಾಣಬೇಕಾಯಿತು.
ಇದನ್ನೂ ಓದಿ: IND vs AFG: ಮೊದಲ ಟಿ20 ಪಂದ್ಯ ಗೆದ್ದ ಭಾರತ… ಈ ಆಟಗಾರನ ಎಂಟ್ರಿಯಿಂದಲೇ ಗೆಲುವು ಕಂಡ ಟೀಂ ಇಂಡಿಯಾ!
7 ವಿಕೆಟ್ ಕಬಳಿಸಿದ ಹಸರಂಗಾ!
🔥 Wanindu Hasaranga on fire! 7/19 - his BEST EVER spell in International Cricket! A new record for the spinner at RPICS!
🔴LIVE: https://t.co/Ssph3nk8Bm#SLvZIM pic.twitter.com/fCbKsm1cmo
— Sri Lanka Cricket 🇱🇰 (@OfficialSLC) January 11, 2024
ಬರೋಬ್ಬರಿ 6 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ವನಿಂದು ಹಸರಂಗಾ ತಮ್ಮ ಬೌಲಿಂಗ್‍ನಲ್ಲಿ ಮ್ಯಾಜಿಕ ಮಾಡಿದರು. ಜಿಂಬಾಬ್ವೆಯ 7 ವಿಕೆಟ್ ಕಬಳಿಸುವ ಮೂಲಕ ಅವರು ವಿಶೇಷ ದಾಖಲೆ ನಿರ್ಮಿಸಿ ಗಮನ ಸೆಳೆದರು. 50 ರನ್ ಗಳಿಸುವಷ್ಟರಲ್ಲಿ ಜಿಂಬಾಬ್ವೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪ್ರವಾಸಿ ತಂಡದ ಮೊದಲ 4 ವಿಕೆಟ್‍ಗಳನ್ನು ಹಸರಂಗಾ ಪಡೆಯುವ ಮೂಲಕ ಮಾರಕ ಬೌಲಿಂಗ್ ದಾಳಿ ನಡೆಸಿದರು.
ಹಸರಂಗಾರ ಬೌಲಿಂಗ್ ದಾಳಿಯಿಂದ ನಲುಗಿದ ಜಿಂಬಾಬ್ವೆ ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 22.5 ಓವರ್‍ಗಳಲ್ಲಿ ಕೇವಲ 96 ರನ್‌ಗಳಿಗೆ ಜಿಂಬಾಬ್ವೆ ಆಲೌಟ್ ಆಯಿತು. 19ಕ್ಕೆ 7 ವಿಕೆಟ್ ಕಬಳಿಸಿದ ಹಸರಂಗಾ ಜಿಂಬಾಬ್ವೆ ಅಲ್ಪಮೊತ್ತಕ್ಕೆ ಕುಸಿಯಲು ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ಶ್ರೇಷ್ಠ ದಾಖಲೆ ಬರೆದ ಶಿವಂ ದುಬೆ… ಕೊಹ್ಲಿ-ಯುವರಾಜ್ ಅವರಿದ್ದ ಈ ವಿಶೇಷ ಕ್ಲಬ್ ಪ್ರವೇಶಿಸಿದ ಧೋನಿಯ ಅಪ್ಪಟ ಶಿಷ್ಯ
Sri Lanka seals the deal with a dominant 8-wicket victory, taking the ODI series 2-0 against Zimbabwe! 🏆🇱🇰 #SLvZIM pic.twitter.com/Amd4idD3Ja
— Sri Lanka Cricket 🇱🇰 (@OfficialSLC) January 11, 2024
ಅಲ್ಪಮೊತ್ತದ ಟಾರ್ಗೆಟ್ ಬೆನ್ನತ್ತಿದ ಲಂಕಾ 16.4 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು. ಲಂಕಾ ಪರ ನಾಯಕ ಕುಸಾಲ್ ಮೆಂಡಿಸ್ ಅಜೇಯ (66) ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 3 ಪಂದ್ಯಗಳ ಸರಣಿಯ ಪೈಕಿ ಉಭಯ ತಂಡಗಳ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 2 ಮತ್ತು 3ನೇ ಪಂದ್ಯ ಗೆಲ್ಲುವ ಮೂಲಕ ಲಂಕಾ 2-0 ಅಂತರದಿಂದ ಸರಣಿ ಗೆಲುವು ಸಾಧಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.