ನವದೆಹಲಿ: ಗುರುವಾರದಂದು 49 ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಭಾರತದ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆಗೆ ತಂಡದ ಮಾಜಿ ಆಟಗಾರರಿಂದ ಹಿಡಿದು ಸದ್ಯದ ಆಟಗಾರವರೆಗೂ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.
ಆದರೆ ಈಗ ಕುಂಬ್ಳೆಗೆ ತಂಡ ಸಹ ಆಟಗಾರನಾಗಿದ್ದ ವೀರೇಂದ್ರ ಸೆಹ್ವಾಗ್ ಈಗ ಶುಭಾಶಯಗಳನ್ನು ಕೋರಿ ನಂತರ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ಅವರು ಕ್ಷಮೆಯಾಚಿಸಿದ್ದು ಏಕೆ ಅಂತೀರಾ? ಎರಡನೇ ಶತಕದ ಅವಕಾಶವನ್ನು ಅವರು ತಪ್ಪಿಸಿದ ಕಾರಣಕ್ಕಾಗಿ ಕ್ಷಮೆಕೋರಿದ್ದಾರೆ ಎನ್ನಲಾಗಿದೆ.
Thanks Viru. You always have a knack of saying...😀
— Anil Kumble (@anilkumble1074) October 17, 2019
ಈ ಕುರಿತಾಗಿಯ ಟ್ವೀಟ್ ಮಾಡಿರುವ ವೀರೇಂದ್ರ ಸೆಹ್ವಾಗ್ ' ಭಾರತದ ಶ್ರೇಷ್ಠ ಪಂದ್ಯ ವಿಜೇತ ಹಾಗೂ ಅದ್ಬುತ ಆದರ್ಶ ವ್ಯಕ್ತಿ, ಅನಿಲ್ ಕುಂಬ್ಳೆ ಬಾಯಿ, ನಿಮ್ಮ ಎರಡನೇ ಶತಕಕ್ಕೆ ಅಡ್ಡಿ ಪಡಿಸಿದ್ದಕ್ಕೆ ಕ್ಷಮೆ ಇರಲಿ, ಆದರೆ ನಿಮ್ಮ ನಿಜ ಜೀವನದಲ್ಲಿ ಶತಕವನ್ನು ಗಳಿಸಿರಿ. ಕೇವಲ 51 ಅಷ್ಟೇ 'ಹುಟ್ಟು ಹಬ್ಬದ ಶುಭಾಶಯಗಳು ಅನಿಲ್ ಬಾಯ್ 'ಎಂದು ಶುಭ ಕೋರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ ' ಧನ್ಯವಾದಗಳು ವಿರು. ನೀವು ಯಾವಾಗಲೂ ಹೇಳುವ ಜಾಣ್ಮೆ ಹೊಂದಿದ್ದೀರಿ.' ಎಂದು ಟ್ವೀಟ್ ಮಾಡಿದ್ದಾರೆ.
ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಟೆಸ್ಟ್‌ನಲ್ಲಿ ಭಾರತದ ಸಾರ್ವಕಾಲಿಕ ಬೌಲರ್ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರು 2007 ರಲ್ಲಿ ದಿ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 110 ರನ್ ಗಳಿಸಿದ್ದರು.