ವಿರಾಟ್ ಕೊಹ್ಲಿ ಫಿಟ್ ಆಗಿದ್ದರೆ ಶತಕಗಳ 'ಶತಕ' ಗಳಿಸಲಿದ್ದಾರೆ-ಅಜರುದ್ದೀನ್

ವಿರಾಟ್ ಕೊಹ್ಲಿ ಈಗ ಕ್ರಿಕೆಟ್ ವಲಯದಲ್ಲಿ ಮುಟ್ಟಿದ್ದೆಲ್ಲವು ಚಿನ್ನ ಎನ್ನುವ ಹಾಗೆ ಆಗಿದೆ. ಏಕದಿನ,ಟೆಸ್ಟ್ ಅಥವಾ ಟ್ವೆಂಟಿ ಕ್ರಿಕೆಟ್ ಆಗಿರಬಹುದು ಹೀಗೆ ಎಲ್ಲ ಮಾದರಿಯ ಕ್ರಿಕೆಟ್ ದಾಖಲೆಗಳನ್ನು ಮುರಿಯಲಿದ್ದಾರೆ ಎನ್ನುವ ಅಭಿಪ್ರಾಯ ಬಹುತೇಕ ಹಿರಿಯ ಕ್ರಿಕೆಟಿಗರದ್ದು, ಇದಕ್ಕೆ ಈಗ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ.

Last Updated : Jan 16, 2019, 04:27 PM IST
ವಿರಾಟ್ ಕೊಹ್ಲಿ ಫಿಟ್ ಆಗಿದ್ದರೆ ಶತಕಗಳ 'ಶತಕ' ಗಳಿಸಲಿದ್ದಾರೆ-ಅಜರುದ್ದೀನ್  title=

ನವದೆಹಲಿ: ವಿರಾಟ್ ಕೊಹ್ಲಿ ಈಗ ಕ್ರಿಕೆಟ್ ವಲಯದಲ್ಲಿ ಮುಟ್ಟಿದ್ದೆಲ್ಲವು ಚಿನ್ನ ಎನ್ನುವ ಹಾಗೆ ಆಗಿದೆ. ಏಕದಿನ,ಟೆಸ್ಟ್ ಅಥವಾ ಟ್ವೆಂಟಿ ಕ್ರಿಕೆಟ್ ಆಗಿರಬಹುದು ಹೀಗೆ ಎಲ್ಲ ಮಾದರಿಯ ಕ್ರಿಕೆಟ್ ದಾಖಲೆಗಳನ್ನು ಮುರಿಯಲಿದ್ದಾರೆ ಎನ್ನುವ ಅಭಿಪ್ರಾಯ ಬಹುತೇಕ ಹಿರಿಯ ಕ್ರಿಕೆಟಿಗರದ್ದು, ಇದಕ್ಕೆ ಈಗ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ.

ಆಸ್ಟ್ರೇಲಿಯಾದ ವಿರುದ್ದ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರು ಭರ್ಜರಿ ಶತಕ ಗಳಿಸುವ ಮೂಲಕ ಸರಣಿ ಸಮ ಮಾಡಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.ಈ ಹಿನ್ನಲೆಯಲ್ಲಿ ಅಜರುದ್ದೀನ್ ಅವರ ಹೇಳಿಕೆ ಬಂದಿದೆ.

"ವಿರಾಟ್ ಕೊಹ್ಲಿಯವರ ಸ್ಥಿರ ಪ್ರದರ್ಶನ ಕೆಲವೇ ವ್ಯಕ್ತಿಗಳಿಂದ ಮಾತ್ರ ಸಾಧ್ಯವಾಗಿದೆ.ಒಂದು ವೇಳೆ ಅವರು ತಮ್ಮ ಫಿಟ್ ನೆಸ್ ಕಾಪಡಿಕೊಂಡಿದ್ದೆ ಆದಲ್ಲಿ ಅಥವಾ ಗಾಯಗೊಳ್ಳದೆ ಇದ್ದಲ್ಲಿ ಅವರು ಖಂಡಿತ ನೂರು ಶತಕಗಳನ್ನು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಗಳಿಸುತ್ತಾರೆ.ಅವರ ಸ್ಥಿರತೆ ಜಗತ್ತಿನ ಬಹುತೇಕ ಆಟಗಾರರಿಗಿಂತಲೂ ಅಧಿಕವೆಂದು" ಅಜರುದ್ದೀನ್ ತಿಳಿಸಿದ್ದಾರೆ. 

ಇನ್ನೊಂದೆಡೆ ಆಸ್ಟ್ರೇಲಿಯಾದ ಆಟಗಾರ ಜಸ್ಟಿನ್ ಲ್ಯಾಂಗರ್ ಕೂಡ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ " ಕೊಹ್ಲಿ ಅತ್ತ್ಯುತ್ತಮ ಸ್ಪರ್ಧಿ ಅವರ ಕ್ರಿಕೆಟ್ ಮೇಲಿನ ಗಮನ ನಿಜಕ್ಕೂ ಅದ್ಬುತ "ಎಂದು ಕೊಂಡಾಡಿದ್ದಾರೆ.   

Trending News