IPL 2023, DC vs RCB: ವಿರಾಟ್ ಕೊಹ್ಲಿಯಿಂದ ಆರ್‌ಸಿಬಿಗೆ ಸೋಲು..?  

IPL 2023, DC vs RCB: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು. ಈ ಇನ್ನಿಂಗ್ಸ್‌ನ ನಂತರವೂ ವಿರಾಟ್ ಟೀಕೆಗೆ ಗುರಿಯಾಗಿದ್ದಾರೆ.

Written by - Puttaraj K Alur | Last Updated : May 7, 2023, 03:49 PM IST
  • ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಗೆ ಕೊಹ್ಲಿ ಕಾರಣ?
  • ಭರ್ಜರಿ ಅರ್ಧಶತಕ ಭಾರಿಸಿದರೂ ಟೀಕೆಗೆ ಗುರಿಯಾದ ಕಿಂಗ್ ಕೊಹ್ಲಿ!
  • ವಿರಾಟ್ ನಿಧಾಗತಿಯ ಇನ್ನಿಂಗ್ಸ್ ಬಗ್ಗೆ ಪ್ರಶ್ನೆ ಎತ್ತಿರುವ ಅಭಿಮಾನಿಗಳು
IPL 2023, DC vs RCB: ವಿರಾಟ್ ಕೊಹ್ಲಿಯಿಂದ ಆರ್‌ಸಿಬಿಗೆ ಸೋಲು..?   title=
ಟೀಕೆಗೆ ಗುರಿಯಾದ ಕಿಂಗ್ ಕೊಹ್ಲಿ!

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ಈ ಅದ್ಭುತ ಇನ್ನಿಂಗ್ಸ್ ಮಧ್ಯೆಯೂ ವಿರಾಟ್ ಕೊಹ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಅವರೇ ಕಾರಣ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿಯಿಂದ ಆರ್‌ಸಿಬಿಗೆ ಸೋಲು?

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 46 ಎಸೆತಗಳಲ್ಲಿ 55 ರನ್ ಗಳಿಸಿದ ವಿರಾಟ್ ಕೊಹ್ಲಿಯ ಇನ್ನಿಂಗ್ಸ್ T20 ಸ್ವರೂಪದಲ್ಲಿ ಆಂಕರ್ ಬ್ಯಾಟ್ಸ್‌ಮನ್‌ಗಳ ಪಾತ್ರ ಕಡಿಮೆಯಾಗುತ್ತಿದೆ ಎಂಬ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕೊಹ್ಲಿಯ ಈ ಇನ್ನಿಂಗ್ಸ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು. ಫಿಲ್ ಸಾಲ್ಟ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಡೆಲ್ಲಿ 20 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.

ಇದನ್ನೂ ಓದಿ: DCvsRCB: ಫಿಲಿಪ್ ಸಾಲ್ಟ್ ಸ್ಪೋಟಕ ಬ್ಯಾಟಿಂಗ್ ಗೆ ತತ್ತರಿಸಿದ ಆರ್ಸಿಬಿ

ವಿರಾಟ್ ಇನ್ನಿಂಗ್ಸ್ ಬಗ್ಗೆ ಪ್ರಶ್ನೆ!  

ಆರ್‌ಸಿಬಿಯ ಮಧ್ಯಮ ಕ್ರಮಾಂಕವು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅದರಂತೆ ವಿರಾಟ್ ಕೊಹ್ಲಿ ಟಿ-20 ಮಾದರಿಯ ಬ್ಯಾಟಿಂಗ್ ಪ್ರದರ್ಶನ ನೀಡದಿರುವುದು ತಂಡಕ್ಕೆ ದುಬಾರಿಯಾಯಿತು. ಮೊದಲ 18 ಎಸೆತಗಳಲ್ಲಿ ಕೊಹ್ಲಿ ಕೇವಲ 19 ರನ್ ಗಳಿಸಿದ್ದರು. ಹೆಚ್ಚು ಎಸೆತಗಳನ್ನು ಎದುರಿಸಿ ಕಡಿಮೆ ರನ್ ಗಳಿಸಿದ್ದು ತಂಡದ ಸೋಲಿಗೆ ಕಾರಣವಾಗಿದೆ. ಪವರ್ ಪ್ಲೇನಲ್ಲಿ ತಂಡಗಳು ಉತ್ತಮ ಸ್ಕೋರ್ ಮಾಡಬೇಕಾದರೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇನ್ನಿಂಗ್ಸ್ ಮುನ್ನಡೆಸುವ ಬ್ಯಾಟ್ಸ್ ಮನ್‍ಗಳ ಪಾತ್ರ ಗೌಣವಾಗುತ್ತದೆ.

ಆಂಕರ್ ಪಾತ್ರದ ಬಗ್ಗೆ ರಿಕಿ ಪಾಂಟಿಂಗ್ ಹೇಳಿಕೆ

ದೆಹಲಿಯ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈ ಋತುವಿನ ಆರಂಭದಲ್ಲಿ T20 ನಲ್ಲಿ ಆಂಕರ್ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮಲ್ಲಿ ಆಕ್ರಮಣಕಾರಿ ಮತ್ತು ಶಕ್ತಿಯುತ ಬ್ಯಾಟ್ಸ್‌ಮನ್‌ಗಳಿದ್ದರೆ, ಅವರು ಆಂಕರ್ ಪಾತ್ರವನ್ನು ವಹಿಸಲು ತಮ್ಮ ಆಟವನ್ನು ಬದಲಾಯಿಸಬಹುದೆಂದು ನಾನು ನಂಬುತ್ತೇನೆ. ಆದರೆ ಇನ್ನಿಂಗ್ಸ್‌ನ ಪಾತ್ರ ನಿರ್ವಹಿಸುವ ಬ್ಯಾಟ್ಸ್‌ಮನ್ 200 ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಲು ಸಾಧ್ಯವಾಗುವುದಿಲ್ಲ. ಈ ವರ್ಷ ಇದನ್ನು ಸಾಧ್ಯವಾಗಿಸಿದ್ದು ಅಜಿಂಕ್ಯ ರಹಾನೆ ಒಬ್ಬರೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK: BCCI ಈ ಷರತ್ತು ಒಪ್ಪಿಕೊಂಡರೆ 7 ವರ್ಷಗಳ ಬಳಿಕ ಭಾರತಕ್ಕೆ ಬರಲಿದೆ ಪಾಕಿಸ್ತಾನ!

‘ಆಂಕರ್ ಪಾತ್ರವು ಕಡಿಮೆಯಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಇದು ಕ್ರೀಸ್‌ಗೆ ಬರುವ ಬ್ಯಾಟ್ಸ್‌ಮನ್‌ನ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ಕೆಲವೊಮ್ಮೆ ನೀವು ಬಯಸಿದ ಆರಂಭ ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಪಾತ್ರ ಬದಲಾಯಿಸಲು ನಿಮ್ಮ ಮೇಲೆ ಒತ್ತಡವುಂಟಾಗುತ್ತದೆ’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News