Virat Kohli Video: ಪಂದ್ಯದ ಮಧ್ಯೆದಲ್ಲೇ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ ವಿರಾಟ್-ಜಡೇಜಾ: ವಿಡಿಯೋ ನೋಡಿ

Virat Kohli Dance Video: ಟೀಮ್ ಇಂಡಿಯಾ ತಮ್ಮ ಬ್ಯಾಟಿಂಗ್ ಇನ್ನಿಂಗ್ಸ್ ಮುಗಿದ ನಂತರ ಮೈದಾನಕ್ಕೆ ಬರಲು ಸಿದ್ಧವಾಗುತ್ತಿದ್ದಂತೆ, ಇತರ ಆಟಗಾರರು ಬೌಂಡರಿ ಬಳಿ ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ವಿರಾಟ್ ಸ್ವಲ್ಪ ಮೋಜು ಮಾಡಲು ನಿರ್ಧರಿಸಿದರು. ಕೊಹ್ಲಿ 'ಜೂಮ್ ಜೋ ಪಠಾಣ್' ಹುಕ್ ಸ್ಟೆಪ್ ಮಾಡಲು ಪ್ರಯತ್ನಿಸಿರುವ ವಿಡಿಯೋ ಕಂಡುಬಂತು. ಇವರ ಜೊತೆ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಸೇರಿ ಡ್ಯಾನ್ಸ್ ಮಾಡಿದ್ದಾರೆ.

Written by - Bhavishya Shetty | Last Updated : Feb 12, 2023, 07:30 PM IST
    • ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶನಿವಾರ 'ಪಠಾಣ್' ಟ್ರೆಂಡ್‌ಗೆ ಸೇರ್ಪಡೆಗೊಂಡಿದ್ದಾರೆ
    • ಈ ವಿಡಿಯೋ ಕಂಡ ಅಭಿಮಾನಿಗಳು ಖುಷಿಯಲ್ಲಿ ಮುಳುಗಿದ್ದಾರೆ
    • ಮೈದಾನದಲ್ಲಿಯೇ ಚಿತ್ರದ ಶೀರ್ಷಿಕೆ ಗೀತೆ 'ಜೂಮೇ ಜೋ ಪಠಾನ್'ಗೆ ಹೆಜ್ಜೆ ಹಾಕಿದ್ದು ವಿಡಿಯೋ ವೈರಲ್ ಆಗಿದೆ
Virat Kohli Video: ಪಂದ್ಯದ ಮಧ್ಯೆದಲ್ಲೇ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ ವಿರಾಟ್-ಜಡೇಜಾ: ವಿಡಿಯೋ ನೋಡಿ title=
virat kohli

Virat Kohli Dance Video: ಶಾರುಖ್ ಖಾನ್ ಅವರ ಬ್ಲಾಕ್ ಬಸ್ಟರ್ ಆಕ್ಷನ್ 'ಪಠಾನ್‘ ಸಖತ್ ಸುದ್ದಿಯಲ್ಲಿದೆ. ಇದಕ್ಕೆ ಪುರಾವೆ ಎಂಬಂತೆ ಇಲ್ಲೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶನಿವಾರ 'ಪಠಾಣ್' ಟ್ರೆಂಡ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ವಿಡಿಯೋ ಕಂಡ ಅಭಿಮಾನಿಗಳು ಖುಷಿಯಲ್ಲಿ ಮುಳುಗಿದ್ದಾರೆ. ಕ್ರಿಕೆಟಿಗರು ಮೈದಾನದಲ್ಲಿಯೇ ಚಿತ್ರದ ಶೀರ್ಷಿಕೆ ಗೀತೆ 'ಜೂಮೇ ಜೋ ಪಠಾನ್'ಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: IND vs AUS: ಇಂಡೋ-ಆಸೀಸ್ ಪಂದ್ಯ ಧರ್ಮಶಾಲಾದಿಂದ ಸ್ಥಳಾಂತರ: ಹಾಗಾದ್ರೆ 3ನೇ ಟೆಸ್ಟ್ ಕ್ರಿಕೆಟ್ ನಡೆಯೊದೆಲ್ಲಿ ಗೊತ್ತಾ?

ಟೀಮ್ ಇಂಡಿಯಾ ತಮ್ಮ ಬ್ಯಾಟಿಂಗ್ ಇನ್ನಿಂಗ್ಸ್ ಮುಗಿದ ನಂತರ ಮೈದಾನಕ್ಕೆ ಬರಲು ಸಿದ್ಧವಾಗುತ್ತಿದ್ದಂತೆ, ಇತರ ಆಟಗಾರರು ಬೌಂಡರಿ ಬಳಿ ಕಾಯುತ್ತಿದ್ದರು. ಅದೇ ಸಂದರ್ಭದಲ್ಲಿ ವಿರಾಟ್ ಸ್ವಲ್ಪ ಮೋಜು ಮಾಡಲು ನಿರ್ಧರಿಸಿದರು. ಕೊಹ್ಲಿ 'ಜೂಮ್ ಜೋ ಪಠಾಣ್' ಹುಕ್ ಸ್ಟೆಪ್ ಮಾಡಲು ಪ್ರಯತ್ನಿಸಿರುವ ವಿಡಿಯೋ ಕಂಡುಬಂತು. ಇವರ ಜೊತೆ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಸೇರಿ ಡ್ಯಾನ್ಸ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನೋಡಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಕೆ.ಎಲ್.ರಾಹುಲ್ ವಿರುದ್ಧ ಗಂಭೀರ ಆರೋಪ ಮಾಡಿದ ವೆಂಕಟೇಶ್ ಪ್ರಸಾದ್...!

ಪಠಾಣ್ ನೋಡಲೇಬೇಕಾದ ಸಿನಿಮಾ ಎಂದು ಅನೇಕ ಸಿನಿಪ್ರಿಯರು ಹೇಳುತ್ತಿದ್ದಾರೆ. ಪಠಾಣ್ ಆದಿತ್ಯ ಚೋಪ್ರಾ ಅವರ ಮಹತ್ವಾಕಾಂಕ್ಷೆಯ ಪತ್ತೇದಾರಿ ಸಿನಿಮಾ ಆಗಿದ್ದು, ಇದರಲ್ಲಿ ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News