ಪಾಕಿಸ್ತಾನ್ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್ ಕೊಹ್ಲಿ

ಈ ಪಟ್ಟಿಯಲ್ಲಿ, ಕೊಹ್ಲಿಯನ್ನು ಪಾಕಿಸ್ತಾನದ ನಾಯಕ ಮತ್ತು ವಿಕೆಟ್ ಕೀಪರ್ ಸರ್ಫ್ರಜ್ ಅಹ್ಮದ್, ವೇಗದ ಬೌಲರ್ ಮೊಹಮ್ಮದ್ ಅಮೀರ್ ಮತ್ತು ಬ್ಯಾಟ್ಸ್ಮನ್ ಅಹ್ಮದ್ ಶೆಹಜಾದ್ ಅವರೊಂದಿಗೆ ಹೋಲಿಸಲಾಗಿದೆ.

Last Updated : Dec 17, 2017, 12:24 PM IST
  • ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ್ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್.
  • ಗಡಿಯಾಚೆಗೂ ಆರೋಗ್ಯಯುತ ಸ್ನೇಹ ಸಂಬಂಧವನ್ನು ಹೊಂದಿರುವ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ಕೊಹ್ಲಿ ಸಹ ಒಬ್ಬರು.
  • ಕೊಹ್ಲಿ ಅನುಷ್ಕಾ ಶರ್ಮಾವನ್ನು ಡಿಸೆಂಬರ್ 11 ರಂದು ಇಟಲಿಯ ಟುಸ್ಕಾನಿಯದಲ್ಲಿ ವಿವಾಹವಾದರು.
ಪಾಕಿಸ್ತಾನ್ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್ ಕೊಹ್ಲಿ title=
Courtesy: IANS

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ್ ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಗೂಗಲ್ ಟ್ರೆಂಡ್ಸ್ ತಿಳಿಸಿದೆ. 

29 ವರ್ಷದ ಕೊಹ್ಲಿ ಇಡೀ ಜಗತ್ತಿನಲ್ಲಿ ತಮ್ಮ ಆಳ್ವಿಕೆ ನಡೆಸುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಗಡಿಯಾಚೆಗೂ ಆರೋಗ್ಯಯುತ ಸ್ನೇಹ ಸಂಬಂಧವನ್ನು ಹೊಂದಿರುವ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ಕೊಹ್ಲಿ ಸಹ ಒಬ್ಬರು. ಪ್ರಪಂಚದಾದ್ಯಂತ ಕೊಹ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ, ಯಾವಾಗಲೂ ಭಾರತದ ವಿರುದ್ಧ ಸಮರ ಸಾರಲು ಹವಣಿಸುತ್ತಿರುವ ಪಾಕಿಸ್ತಾನದಲ್ಲಿ ಭಾರತದ ಕ್ರಿಕೆಟಿಗ ಹೆಚ್ಚು ಹುಡುಕಲ್ಪಟ್ಟಿದ್ದಾರೆಂದರೆ ಆಶ್ಚರ್ಯವೇ ಸರಿ! 

ಈ ಪಟ್ಟಿಯಲ್ಲಿ, ಕೊಹ್ಲಿಯನ್ನು ಪಾಕಿಸ್ತಾನದ ನಾಯಕ ಮತ್ತು ವಿಕೆಟ್ ಕೀಪರ್ ಸರ್ಫ್ರಜ್ ಅಹ್ಮದ್, ವೇಗದ ಬೌಲರ್ ಮೊಹಮ್ಮದ್ ಅಮೀರ್ ಮತ್ತು ಬ್ಯಾಟ್ಸ್ಮನ್ ಅಹ್ಮದ್ ಶೆಹಜಾದ್ ಅವರೊಂದಿಗೆ ಹೋಲಿಸಲಾಗಿದೆ.

ವಾಸ್ತವವಾಗಿ, ಅನೇಕ ಹಿಂದಿನ ಮತ್ತು ಪ್ರಸ್ತುತ ಪಾಕಿಸ್ತಾನಿ ಕ್ರಿಕೆಟಿಗರು ಕೊಹ್ಲಿ ಅವರು ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದಾಗ ಅಭಿನಂದಿಸಿದರು.

ಕೊಹ್ಲಿ ಅನುಷ್ಕಾ ಶರ್ಮಾವನ್ನು ಡಿಸೆಂಬರ್ 11 ರಂದು ಇಟಲಿಯ ಟುಸ್ಕಾನಿಯದಲ್ಲಿ ವಿವಾಹವಾದರು.

Trending News