ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆ ಗರಿ

India vs West Indies: ಹೈದರಾಬಾದ್‌ನಲ್ಲಿ ಆಡಿದ ಮೊದಲ ಟಿ 20 ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

Last Updated : Dec 7, 2019, 12:01 PM IST
ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆ ಗರಿ title=
ಫೋಟೋ: ANI

ನವದೆಹಲಿ: ಆತಿಥೇಯ ತಂಡ ಭಾರತ ಹೈದರಾಬಾದ್‌ನಲ್ಲಿ ಆಡಿದ ಮೊದಲ ಟಿ 20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ(Virat Kohli) ಅತಿ ಹೆಚ್ಚು 94 ರನ್ ಗಳಿಸಿದ್ದಾರೆ. ಪಂದ್ಯ ಗೆದ್ದ ನಂತರ ಈ ಸಾಧನೆಗಾಗಿ ಭಾರತ ಕ್ರಿಕೆಟ್ ತಂಡದ ನಾಯಕನಿಗೆ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಲಾಯಿತು. ಇದರೊಂದಿಗೆ ವಿರಾಟ್ ಕೊಹ್ಲಿ  'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಅತಿ ಹೆಚ್ಚು ಬಾರಿ ಗೆದ್ದಿರುವ ನಾಯಕ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಶುಕ್ರವಾರ ಆಡಿದ ಮೊದಲ ಟಿ 20(T 20) ಪಂದ್ಯದಲ್ಲಿ ವೆಸ್ಟ್ ಇಂಡೀಸ್ 207/5 ರ ಪ್ರಬಲ ಸ್ಕೋರ್ ಗಳಿಸಿತು. ಆದರೆ ವಿರಾಟ್ ಕೊಹ್ಲಿ(94) ಮತ್ತು ಕೆ.ಎಲ್. ರಾಹುಲ್ (62) ಗಳಿಸಿದರು. ಆತಿಥೇಯರು 18.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 209 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದರು.

ವಿರಾಟ್ ಕೊಹ್ಲಿ ಟಿ 20 ವೃತ್ತಿಜೀವನದಲ್ಲಿ 23 ನೇ ಬಾರಿಗೆ ಅರ್ಧಶತಕ ಬಾರಿಸಿದರು. ಈ ಸಾಧನೆಗಾಗಿ ಭಾರತದ ನಾಯಕನಿಗೆ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿ ನೀಡಲಾಯಿತು. ಟಿ 20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 12 ನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ಪಂದ್ಯದ ಮೊದಲು, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಹೆಚ್ಚು ಬಾರಿ ಗೆದ್ದ ದಾಖಲೆ ಮೊಹಮ್ಮದ್ ನಬಿ ಅವರ ಹೆಸರಿನಲ್ಲಿತ್ತು. ಈ ಅಫ್ಘಾನಿಸ್ತಾನ ಆಟಗಾರ ಈ ಪ್ರಶಸ್ತಿಯನ್ನು 12 ಬಾರಿ ಗೆದ್ದಿದ್ದಾರೆ. ಈಗ ವಿರಾಟ್ ಕೊಹ್ಲಿ ಅವರನ್ನು ಸರಿಗಟ್ಟಿದ್ದಾರೆ. ಈ ಮೂಲಕ ಅವರು ಮತ್ತೊಂದು ದಾಖಲೆಯನ್ನೂ ಮುಡಿಗೇರಿಸಿಕೊಂದಿದ್ದಾರೆ. ಈ ರೀತಿಯಾಗಿ, ಈ ದಾಖಲೆಯಲ್ಲಿ ಈಗ ಕೊಹ್ಲಿ ಮತ್ತು ನಬಿ ಅವರ ಜಂಟಿಯಾಗಿ ಹೆಸರಿಸಲಾಗಿದೆ.

ಇದಕ್ಕೂ ಮುನ್ನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಭಾರತದ ಅತಿ ಹೆಚ್ಚು ವಿಕೆಟ್ ದಾಖಲೆಯನ್ನು ಸಮಗೊಳಿಸಿದರು. 46 ಪಂದ್ಯಗಳಲ್ಲಿ 52 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು. ವೆಸ್ಟ್ ಇಂಡೀಸ್‌ಗೆ ಚಹಲ್ ಶುಕ್ರವಾರ ಎರಡು ಹೊಡೆತಗಳನ್ನು ನೀಡಿದರು. ಈ ರೀತಿಯಾಗಿ, ಅವರು ಟಿ 20 ಕ್ರಿಕೆಟ್‌ನಲ್ಲಿ ತಮ್ಮ ಒಟ್ಟು ವಿಕೆಟ್‌ಗಳ ಸಂಖ್ಯೆಯನ್ನು 52 ಕ್ಕೆ ಹೆಚ್ಚಿಸಿದರು. ಅವರು 35 ಪಂದ್ಯಗಳಲ್ಲಿ 21.21 ಸರಾಸರಿಯಲ್ಲಿ ಈ ವಿಕೆಟ್‌ಗಳನ್ನು ಪಡೆದಿದ್ದಾರೆ.

Trending News