Video Viral: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಾರತದ ಮಾಜಿ ಕ್ರಿಕೆಟಿಗರೊಬ್ಬರ ಡಾನ್ಸ್ ಹೇಗಿತ್ತು ಗೊತ್ತಾ?

Vinod Kambli - ಇತ್ತೀಚಿಗಷ್ಟೇ  ಮಾಜಿ ಕ್ರಿಕೆಟಿಗರೊಬ್ಬರು ಮೂತ್ರಕೋಶದ ಸೋಂಕು ಮತ್ತು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಆಸ್ಪತ್ರೆಗೆ ದಾಖಲಿದ್ದರು, ಆ ವೇಳೆ ಅವರು ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ ನೋಡಿ

Written by - Zee Kannada News Desk | Last Updated : Jan 3, 2025, 09:40 PM IST
  • ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ
  • ಮೂತ್ರಕೋಶದ ಸೋಂಕು ಮತ್ತು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್
  • ಡಿಸೆಂಬರ್ 21 ರಂದು ಭಿವಾಂಡಿಯ ಕಲ್ಹೇರ್ ಪ್ರದೇಶದ ಆಕೃತಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಬ್ಳಿ,
Video Viral: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಾರತದ ಮಾಜಿ ಕ್ರಿಕೆಟಿಗರೊಬ್ಬರ ಡಾನ್ಸ್ ಹೇಗಿತ್ತು ಗೊತ್ತಾ? title=

Vinod Kambli Hospital Dance Video Viral - ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೂತ್ರಕೋಶದ ಸೋಂಕು ಮತ್ತು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 

ಥಾಣೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು  ಡಾನ್ಸ್ ಮಾಡಿದ ವೈರಲ್ ಆದ ವಿಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಡಾನ್ಸ್ ಮಾಡಿದ್ದಾರೆ.  ಡಿಸೆಂಬರ್ 21 ರಂದು ಭಿವಾಂಡಿಯ ಕಲ್ಹೇರ್ ಪ್ರದೇಶದ ಆಕೃತಿ ಆಸ್ಪತ್ರೆಗೆ ದಾಖಲಾಗಿದ್ದ ಕಾಂಬ್ಳಿ,  ವೈದ್ಯಕೀಯ ಪರೀಕ್ಷೆಗಳ ಸರಣಿಯ ನಂತರ ಮೆದುಳಿನ ಹೆಪ್ಪುಗಟ್ಟುವಿಕೆ ಎಂದು ತಿಳಿದು ದಾಖಲಾಗಿದ್ದರು. ಇದನ್ನು ಓದಿ:ಕಿಚ್ಚನ ಪಂಚಾಯ್ತಿ ಇದ್ರೂ ಟಿಆರ್‌ಪಿಯಲ್ಲಿ ಬಿಗ್‌ ಬಾಸ್‌ನ್ನೇ ಹಿಂದಿಕ್ಕಿದ ಮತ್ತೊಂದು ಶೋ!

 

ವೀಡಿಯೊದಲ್ಲ ಹೃದಯಕ್ಕೆ ಮುಟ್ಟುವಂತಹ ಹಾಡಿನೊಂದಿಗೆ  ಆಸ್ಪತ್ರೆಯ ವಾರ್ಡ್‌ನಲ್ಲಿ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು.  ನರ್ಸ್ ಮತ್ತು ಇನ್ನೊಬ್ಬ ಸಿಬ್ಬಂದಿ ಸೇರಿಕೊಂಡು ಅವರ ಉತ್ಸಾಹವನ್ನು ಹೆಚ್ಚಿಸಿದರು.

17 ಟೆಸ್ಟ್ ಮತ್ತು 104 ODIಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಎಡಗೈ ಬ್ಯಾಟ್ಸಮನ್, ಅಂದಿನಿಂದ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಮಾಜಿ ಕ್ರಿಕೆಟಿಗನನ್ನು ಕೊಂಡಾಡಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇದನ್ನು ಓದಿ:2024ರಲ್ಲಿ ನಡೆದ ಕ್ರೀಡೆಗಳ ಟಾಪ್ 5 ಅಚ್ಚಳಿಯದ ಕ್ಷಣಗಳು ಇಲ್ಲಿವೆ! 

 

Trending News