MS Dhoni Video: ಅಭ್ಯಾಸದಲ್ಲೇ ಧೋನಿ ಅಬ್ಬರ: ಚೆನ್ನೈ ಮೈದಾನದಲ್ಲಿ ಸಿಕ್ಸರ್ ಸುರಿಮಳೆಯ ವಿಡಿಯೋ ನೋಡಿ

MS Dhoni Video: ಒಟ್ಟು 74 ಲೀಗ್ ಪಂದ್ಯಗಳು ನಡೆಯಲಿವೆ. ಚೆನ್ನೈ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ 12 ನಗರಗಳಲ್ಲಿ ಸರಣಿ ಪಂದ್ಯಗಳು ನಡೆಯಲಿವೆ. ಈ ಬೆನ್ನಲ್ಲೇ ತಂಡಗಳು ಅಭ್ಯಾಸ ಮಾಡುತ್ತಿದ್ದು, ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಆಗಿವೆ.

Written by - Bhavishya Shetty | Last Updated : Mar 6, 2023, 02:50 PM IST
    • ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಸರಣಿಯು ಮಾರ್ಚ್ 31 ರಂದು ಪ್ರಾರಂಭವಾಗಲಿದೆ
    • ಮೊದಲ ಪಂದ್ಯವು ಗುಜರಾತ್’ನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
    • ನೆಟ್ ಅಭ್ಯಾಸದ ವೇಳೆ ಸ್ಪಿನ್ನರ್‌ಗಳ ವಿರುದ್ಧ ಧೋನಿ ಸಿಕ್ಸರ್ ಬಾರಿಸಿದ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ
MS Dhoni Video: ಅಭ್ಯಾಸದಲ್ಲೇ ಧೋನಿ ಅಬ್ಬರ: ಚೆನ್ನೈ ಮೈದಾನದಲ್ಲಿ ಸಿಕ್ಸರ್ ಸುರಿಮಳೆಯ ವಿಡಿಯೋ ನೋಡಿ title=
ms dhoni

MS Dhoni Video: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಸರಣಿಯು ಮಾರ್ಚ್ 31 ರಂದು ಪ್ರಾರಂಭವಾಗಲಿದೆ. ಕಳೆದ ವರ್ಷದಂತೆ 10 ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಲೀಗ್ ಸುತ್ತಿನ ಪಂದ್ಯಗಳು ಸ್ಥಳೀಯ ಮತ್ತು ವಿದೇಶ ಮಾದರಿಯಲ್ಲಿ ನಡೆಯಲಿವೆ. ಮೊದಲ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯವು ಗುಜರಾತ್’ನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದನ್ನೂ ಓದಿ: Gold price Today : 10 ಗ್ರಾಂ ಚಿನ್ನ ಕೇವಲ 33,000 ರೂ.ಗೆ ಲಭ್ಯ

ಒಟ್ಟು 74 ಲೀಗ್ ಪಂದ್ಯಗಳು ನಡೆಯಲಿವೆ. ಚೆನ್ನೈ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ 12 ನಗರಗಳಲ್ಲಿ ಸರಣಿ ಪಂದ್ಯಗಳು ನಡೆಯಲಿವೆ. ಈ ಬೆನ್ನಲ್ಲೇ ತಂಡಗಳು ಅಭ್ಯಾಸ ಮಾಡುತ್ತಿದ್ದು, ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಆಗಿವೆ.

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಸದ್ಯ ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಫೆಬ್ರವರಿ. 2ರಂದು ನಾಯಕ ಧೋನಿ ಸೇರಿದಂತೆ ಸಿಎಸ್ ಕೆ ತಂಡ ಚೆನ್ನೈಗೆ ಆಗಮಿಸಿದ್ದು, ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದಾರೆ.

ಬಹಳ ದಿನಗಳ ನಂತರ ಚೆನ್ನೈ ತಂಡ ಚೆಪಾಕ್‌’ಗೆ ವಾಪಸಾಗಿರುವುದರಿಂದ ಅಭಿಮಾನಿಗಳು ಉತ್ಸುಕರಾಗಿದ್ದಾರೆ. 3 ವರ್ಷಗಳ ನಂತರ ಧೋನಿ ಈ ಬಾರಿ ಚೆಪಾಕ್‌’ನಲ್ಲಿ ಆಡಲಿದ್ದಾರೆ. ಇದು ಅವರ ಕೊನೆಯ ಐಪಿಎಲ್ ಸರಣಿ ಎಂದು ಹೇಳಲಾಗುತ್ತಿದ್ದು, ಅವರ ವಿದಾಯ ಪಂದ್ಯ ಕೂಡ ಚೆನ್ನೈನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.

ಈ ವೇಳೆ ತಂಡದ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಚೆನ್ನೈ ಆಟಗಾರರು ತರಬೇತಿ ಪಡೆಯುತ್ತಿರುವ ಅಪ್ ಡೇಟ್’ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಧೋನಿ ವೆಬ್ ಟ್ರೈನಿಂಗ್ ಮಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಕಳೆದ ಎರಡು ದಿನಗಳಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

 

ನೆಟ್ ಅಭ್ಯಾಸದ ವೇಳೆ ಸ್ಪಿನ್ನರ್‌ಗಳ ವಿರುದ್ಧ ಧೋನಿ ಸಿಕ್ಸರ್ ಬಾರಿಸಿದ ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಹಳೇ ಧೋನಿಯನ್ನು ಮತ್ತೊಮ್ಮೆ ನೋಡಿದಂತಿದೆ ಎಂದು ಧೋನಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Realmeಯ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಅನ್ನು ಕೇವಲ 599 ರೂ.ಗಳಿಗೆ ಖರೀದಿಸಿ

2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್ ಸರಣಿಯಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ. ಅವರ ನಿವೃತ್ತಿಯ ನಂತರ, ಚೆನ್ನೈ ಸೂಪರ್ ಕಿಂಗ್ಸ್ 2021 ರಲ್ಲಿ ಐಪಿಎಲ್ ಸರಣಿಯನ್ನು ಗೆದ್ದುಕೊಂಡಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News