ಕೊಹ್ಲಿ ಓಪನರ್, ರೋಹಿತ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್! ವಿಶ್ವಕಪ್ ತಂಡ ಪ್ರಕಟ ಬೆನ್ನಲ್ಲೇ ಪ್ಲೇಯಿಂಗ್ 11 ಕುರಿತ ಅಪ್ಡೇಟ್ ರಿವೀಲ್!

T20 World Cup 2024: ಭಾರತ ಈ ವಾರ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಾಗಿದೆ.

Written by - Bhavishya Shetty | Last Updated : May 3, 2024, 05:06 PM IST
    • ಅಮೆರಿಕ ಮತ್ತು ವೆಸ್ಟ್ ಇಂಡೀಸ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌
    • ಜಿಯೋ ಸಿನಿಮಾದ ಜೊತೆ ಮಾತನಾಡಿದ ಅಜಯ್ ಜಡೇಜಾ
    • ಕಳಪೆ ಫಾರ್ಮ್‌’ನೊಂದಿಗೆ ಹೋರಾಡುತ್ತಿರುವ ಹಾರ್ದಿಕ್ ಪಾಂಡ್ಯ
ಕೊಹ್ಲಿ ಓಪನರ್, ರೋಹಿತ್ 3ನೇ ಸ್ಥಾನದಲ್ಲಿ ಬ್ಯಾಟಿಂಗ್! ವಿಶ್ವಕಪ್ ತಂಡ ಪ್ರಕಟ ಬೆನ್ನಲ್ಲೇ ಪ್ಲೇಯಿಂಗ್ 11 ಕುರಿತ ಅಪ್ಡೇಟ್ ರಿವೀಲ್! title=
Team India Playing 11 for T20 World Cup

T20 World Cup 2024: ಅಮೆರಿಕ ಮತ್ತು ವೆಸ್ಟ್ ಇಂಡೀಸ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿ ಬಂದು ವಿರಾಟ್ ಕೊಹ್ಲಿ ಅವರೊಂದಿಗೆ ಇನ್ನಿಂಗ್ಸ್ ತೆರೆಯಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಭಾರತ ಈ ವಾರ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಬೇಕಾಗಿದೆ.

ಇದನ್ನೂ ಓದಿ: ಟೆಸ್ಟ್ ರ್ಯಾಂಕಿಂಗ್’ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ! ಅಗ್ರಸ್ಥಾನದಲ್ಲಿರುವ ತಂಡ ಯಾವುದು

ಜಿಯೋ ಸಿನಿಮಾದ ಜೊತೆ ಮಾತನಾಡಿದ ಅಜಯ್ ಜಡೇಜಾ, “ವಿರಾಟ್ ಕೊಹ್ಲಿ ಇನ್ನಿಂಗ್ಸ್ ತೆರೆಯಬೇಕು. ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿ ಬರಬೇಕು. ನಾಯಕನಾಗಿ, ವಿರಾಟ್ ಕೊಹ್ಲಿ ತಂಡದಲ್ಲಿರುವುದು ಅವರ ಮನಸ್ಸಿನಲ್ಲಿ ನಿರಂತರತೆಯನ್ನು ಒದಗಿಸುವ ಕಾರಣ ಅವರಿಗೆ ಸ್ವಲ್ಪ ಸಮಯ ಸಿಗುತ್ತದೆ. ಅಗ್ರ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಪವರ್‌ಪ್ಲೇನಲ್ಲಿ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ” ಎಂದಿದ್ದಾರೆ.

ಕಳಪೆ ಫಾರ್ಮ್‌’ನೊಂದಿಗೆ ಹೋರಾಡುತ್ತಿರುವ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ಬೆಂಬಲಿಸಿದ ಅಜಯ್ ಜಡೇಜಾ, “ಅವರು ಅನೇಕ ಕಾರಣಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಅವರೊಬ್ಬ ವಿಶೇಷ ಆಟಗಾರರಾಗಿದ್ದು, ಇಂತಹ ಆಲ್ ರೌಂಡರ್ ಗಳು ಭಾರತದಲ್ಲಿ ಕಾಣಸಿಗುವುದು ಅಪರೂಪ. ಫಾರ್ಮ್ ಆಧಾರದ ಮೇಲೆ ಆಯ್ಕೆ ಮಾಡಲಾಗಿಲ್ಲ. ನೀವು ಹೇಗೆ ಆಡಲು ಬಯಸುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ” ಎಂದರು.

ಇದನ್ನೂ ಓದಿ:  ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!

ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ವಿರಾಟ್ ಕೊಹ್ಲಿ ಅವರ ಅಪಾರ ಅನುಭವವು ಟಿ 20 ವಿಶ್ವಕಪ್‌’ನಂತಹ ಟೂರ್ನಮೆಂಟ್‌’ನಲ್ಲಿ ಚಿನ್ನಕ್ಕೆ ಸಮ ಎಂದು ಹೇಳಿದರು. ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ 10 ಇನ್ನಿಂಗ್ಸ್‌’ಗಳಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳೊಂದಿಗೆ 500 ರನ್ ಗಳಿಸಿದ್ದಾರೆ,

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News