ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಯಶಸ್ಸು ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ.ಭಾರತಕ್ಕೆ ಎರಡು ವಿಶ್ವಕಪ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ, ರಾಂಚಿಯಲ್ಲಿ ಅತ್ಯುತ್ತಮವಾದ ಫಾರ್ಮ್ ಹೌಸ್ ಹೊಂದಿದ್ದಾರೆ.
ಧೋನಿಯ ಐಷಾರಾಮಿ ಫಾರ್ಮ್ ಹೌಸ್ :
ಎಂಎಸ್ ಧೋನಿಯ ಈ ಫಾರ್ಮ್ ಹೌಸ್ ಹೆಸರು 'ಕೈಲಾಸಪತಿ'.ಎಂಎಸ್ ಧೋನಿ ಅವರ ರಾಂಚಿ ಫಾರ್ಮ್ ಹೌಸ್ ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಎಂಎಸ್ ಧೋನಿಯ ಈ ಫಾರ್ಮ್ ಹೌಸ್ ಈಜುಕೊಳ, ಒಳಾಂಗಣ ಕ್ರೀಡಾಂಗಣ ಮತ್ತು ಜಿಮ್ ಹೀಗೆ ಸಕಲ ಸೌಲಭ್ಯಗಳನ್ನು ಹೊಂದಿದೆ.ಧೋನಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.
ಧೋನಿಯ ಸುಂದರ ಫಾರ್ಮ್ ಹೌಸ್ :
ಮಹೇಂದ್ರ ಸಿಂಗ್ ಧೋನಿ ಈ ಫಾರ್ಮ್ ಹೌಸ್ ಬಣ್ಣಿಸಲು ಸಾಧ್ಯವಾಗದಷ್ಟು ಸುಂದರವಾಗಿದೆ. ಈ ಫಾರ್ಮ್ ಹೌಸ್ ಹರ್ಮು ರಸ್ತೆಯಲ್ಲಿರುವ ಧೋನಿಯ ಮೊದಲ ಮನೆಯಿಂದ ಕೇವಲ 20 ನಿಮಿಷಗಳ ಪ್ರಯಾಣದಲ್ಲಿದೆ.
ಇದನ್ನೂ ಓದಿ : ಇದುವರೆಗೆ 36 ಮಂದಿ ನಾಯಕತ್ವ ಕಂಡ ಟೀಂ ಇಂಡಿಯಾದ ಮೊದಲ ಕ್ಯಾಪ್ಟನ್ ಯಾರು ಗೊತ್ತಾ? ಇವರು ದೇಶದ ಹೆಮ್ಮಯ ಯೋಧನೂ ಆಗಿದ್ರು...
ಅದ್ಭುತ ಸೌಂದರ್ಯ :
ಧೋನಿ ತಮ್ಮ ಬಿಡುವಿನ ವೇಳೆಯನ್ನು ಈ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಾರೆ. ಈ ಫಾರ್ಮ್ ಹೌಸ್ ಗೆ ಟೀಂ ಇಂಡಿಯಾದ ಬಹುತೇಕ ಎಲ್ಲಾ ಕ್ರಿಕೆಟಿಗರು ಆಗಮಿಸಿ ಸ್ಮಾಯ ಕಳೆದಿದ್ದಾರೆ.
ರಾಂಚಿಯ ರಿಂಗ್ ರೋಡ್ ನಲ್ಲಿ ಫಾರ್ಮ್ ಹೌಸ್ :
ಮಹೇಂದ್ರ ಸಿಂಗ್ ಧೋನಿ ದೇಶದ ಅತ್ಯಂತ ಜನಪ್ರಿಯ ಆಟಗಾರ.ರಾಂಚಿಯ ರಿಂಗ್ ರೋಡ್ ನಲ್ಲಿ ಧೋನಿಯ 'ಕೈಲಾಸಪತಿ ಫಾರ್ಮ್ ಹೌಸ್' ನಿರ್ಮಿಸಲಾಗಿದೆ.
ಫಾರ್ಮ್ ಹೌಸ್‌ನಲ್ಲಿ ಒಳಾಂಗಣ ಕ್ರೀಡಾಂಗಣ :
ಈ ಭವ್ಯವಾದ ಫಾರ್ಮ್ ಹೌಸ್ ನಿರ್ಮಿಸಲು ಮೂರು ವರ್ಷಗಳು ಬೇಕಾಯಿತು.ಧೋನಿಯ ಪ್ರಕೃತಿ ಪ್ರೇಮ ಈ ಫಾರ್ಮ್ ಹೌಸ್ ನಲ್ಲೂ ಕಾಣುತ್ತಿದೆ.ಕೈಲಾಸಪತಿ'ಯಲ್ಲಿ ಎಲ್ಲವೂ ಐಶಾರಾಮಿಯಾಗಿದೆ.ಈ ಫಾರ್ಮ್ ಹೌಸ್ ಒಳಾಂಗಣ ಕ್ರೀಡಾಂಗಣ, ಈಜುಕೊಳ, ನೆಟ್ ಅಭ್ಯಾಸ ಮಾಡುವ ಮೈದಾನ, ಅಲ್ಟ್ರಾ ಮಾಡರ್ನ್ ಜಿಮ್ ಹೊಂದಿದೆ.
ಸಾಕಷ್ಟು ಆಧುನಿಕ ಸೌಲಭ್ಯಗಳು :
ತಮ್ಮ ಕ್ರಿಕೆಟ್ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ ನಂತರ, ಮಹೇಂದ್ರ ಸಿಂಗ್ ಧೋನಿ ಈ ಮನೆಯನ್ನು ತೊರೆದರು ಮತ್ತು 2009 ರಲ್ಲಿ ಹರ್ಮು ರಸ್ತೆಯಲ್ಲಿ ಮೂರು ಅಂತಸ್ತಿನ ಮನೆಯನ್ನು ಖರೀದಿಸಿದರು.ಧೋನಿ ಸುಮಾರು 8 ವರ್ಷಗಳ ಕಾಲ ಇಲ್ಲಿಯೇ ಇದ್ದರು. 2017ರಲ್ಲಿ ಕೈಲಾಸಪತಿ ಫಾರ್ಮ್ ಹೌಸ್ ಗೆ ಶಿಫ್ಟ್ ಆಗಿದ್ದರು.ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಈ ಫಾರ್ಮ್ ಹೌಸ್‌ನಲ್ಲಿ ಎಲ್ಲೆಡೆ ಹಸಿರು ಗೋಚರಿಸುತ್ತದೆ.ಫಾರ್ಮ್ ಹೌಸ್ ಉದ್ದಕ್ಕೂ ವಿವಿಧ ರೀತಿಯ ಮರಗಳು ಮತ್ತು ಗಿಡಗಳನ್ನು ನೆಡಲಾಗಿದೆ. ಈ ತೋಟದ ಮನೆಯಲ್ಲಿ ಮರ ಮತ್ತು ಅಮೃತಶಿಲೆಯನ್ನು ಅತ್ಯಂತ ಸೂಕ್ಷ್ಮವಾಗಿ ಬಳಸಲಾಗಿದೆ. ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ತಮ್ಮ ನೆಚ್ಚಿನ ಕಾರುಗಳು ಮತ್ತು ಬೈಕ್‌ಗಳ ಸಂಗ್ರಹವನ್ನು ಹೊಂದಿದ್ದಾರೆ.
ಇದನ್ನೂ ಓದಿ : ಭಾರತ-ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ
ಸುಂದರವಾದ ಪೀಠೋಪಕರಣಗಳ ಬಳಕೆ :
ಈ ತೋಟದ ಮನೆಯ ಉದ್ದಕ್ಕೂ ಸುಂದರವಾದ ಪೀಠೋಪಕರಣಗಳನ್ನು ಬಳಸಲಾಗಿದೆ.
ಧೋನಿ ಫಾರ್ಮ್ ಹೌಸ್‌ನಲ್ಲಿ ಸಾಕುಪ್ರಾಣಿಗಳಿಗೆ ತರಬೇತಿ :
ಈ ಫಾರ್ಮ್ ಹೌಸ್ ನ ಲಾನ್ ನಲ್ಲಿ ಧೋನಿಯ ನೆಚ್ಚಿನ ಸಾಕುಪ್ರಾಣಿಗಳು (ನಾಯಿಗಳು) ಕಾಣಸಿಗುತ್ತವೆ.ಈ ಫಾರ್ಮ್ ಹೌಸ್ ನಲ್ಲಿ ಧೋನಿ ತಮ್ಮ ಸಾಕುಪ್ರಾಣಿಗಳಿಗೂ ತರಬೇತಿ ನೀಡುತ್ತಿದ್ದಾರೆ.ತಮ್ಮ ನಾಯಿಗಳಿಗೆ ತರಬೇತಿ ನೀಡುವಹಲವು ವಿಡಿಯೋಗಳನ್ನು ಧೋನಿ ಶೇರ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.