19 ವರ್ಷದೊಳಗಿನವರ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು

    

Last Updated : Jan 14, 2018, 03:52 PM IST
19 ವರ್ಷದೊಳಗಿನವರ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು   title=
Photo Courtesy: ICC

ನವದೆಹಲಿ: ಭಾರತ ತಂಡವು 19 ವರ್ಷ ವಯಸ್ಸಿನವರಿಗಾಗಿ ನಡೆಯುತ್ತಿರುವ ವಿಶ್ವಕಪ್ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 100 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ.

ಆ ಮೂಲಕ ಭಾರತ ತಂಡವು ಮೊದಲ ಪಂದ್ಯದಲ್ಲಿ ಗೆಲುವಿನ ಮೂಲಕ  ವಿಶ್ವಕಪ್ ನ ಗೆಲುವಿನ ಯಾನಕ್ಕೆ ಮುನ್ನಡಿ  ಇಟ್ಟಿದೆ. ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು 50 ಓವರ್ಗಳಲ್ಲಿ 328 ರನ್ ಗಳಿಸಿದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲು ನೀಡಿತು. ಭಾರತದ ಪರ ತಂಡದ ನಾಯಕ 94, ಮನ್ಜೋತ್ ಕಾಲರಾ 86, ಹಾಗೂ ಶುಭಂ ಗಿಲ್ ರ 63 ರನ್ಗಳಿಂದ ಬೃಹತ್ ಮೊತ್ತ ಗಳಿಸಿತು

ಈ ಬೃಹತ್ ಸವಾಲನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಕಮಲೇಶ್ ನಾಗರಕೋಟೆ(29ಕ್ಕೆ 3)ಮತ್ತು ಶಿವಂ ಮಾವಿ (45 ಕ್ಕೆ3) ಯವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಸಿಲುಕಿ 228 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಜಾಕ್ ಎಡ್ವರ್ಡ್ಸ್ 79 ರನ್ ಗಳಿಸಿದ್ದು ಬೇರೆ ಯಾರು ಕೂಡಾ ತಂಡಕ್ಕೆ ಆಸರೆಯಾಗಿ ನಿಲ್ಲಲಿಲ್ಲ. 

 

Trending News