ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯದ ಐಪಿಎಲ್‌ನ ಐದು ವಿವಾದಗಳು ಇವು !

IPL TOP Controversy:  ಐಪಿಎಲ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲದಂಥಹ ಐದು ವಿವಾದಗಳಿವೆ. ಅವು ಯಾವುವು ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.   

Written by - Ranjitha R K | Last Updated : Mar 15, 2023, 02:56 PM IST
  • ಅತಿ ಹೆಚ್ಚು ಅಭಿಮಾನಿಯಾ ಬಳಗವನ್ನು ಹೊಂದಿದೆ ಐಪಿಎಲ್
  • ವಿವಾದಗಳನ್ನು ಕೂಡಾ ಹೊತ್ತು ಕೊಂಡಿದೆ ಈ ಲೀಗ್
  • ಅತಿ ಹೆಚ್ಚು ಸದ್ದು ಮಾಡಿದ ವಿವಾದಗಳು ಇವು
 ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯದ ಐಪಿಎಲ್‌ನ ಐದು ವಿವಾದಗಳು ಇವು ! title=

ಬೆಂಗಳೂರು : ಐಪಿಎಲ್ ಆರಂಭವಾದಾಗಿನಿಂದ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದೆ. ಒಂದು ಸೀಸನ್ ಮುಗಿದ ಕೂಡಲೇ ಮುಂದಿನ ಸೀಸನ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಐಪಿಎಲ್  ಅಷ್ಟೇ  ವಿವಾದಗಳನ್ನು ಕೂಡಾ ಹೊತ್ತು ಕೊಂಡಿದೆ. ಅದರಲ್ಲೂ ಐಪಿಎಲ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲದಂಥಹ ಐದು  ವಿವಾದಗಳಿವೆ. ಅವು ಯಾವುವು ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.   

ಹರ್ಭಜನ್-ಶ್ರೀಶಾಂತ್ ಗಲಾಟೆ  : 
ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ, ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಶ್ರೀಶಾಂತ್ ಅವರಿಗೆ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ಹರ್ಭಜನ್ ಸಿಂಗ್ ಕಪಾಳಮೋಕ್ಷ ಮಾಡಿದ್ದರು. ಪ್ರೆಸೆಂಟೆಶನ್ ಸೆರೆಮನಿಗೂ   ಮುನ್ನ ಶ್ರೀಶಾಂತ್ ಮೈದಾನದಲ್ಲಿ ಅಳುತ್ತಿರುವ ದೃಶ್ಯವನ್ನು ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಪ್ರಕರಣದ ತನಿಖೆ ನಡೆದ ನಂತರ, ಹರ್ಭಜನ್ ಅವರನ್ನು ಪಂದ್ಯಾವಳಿಯಿಂದ ನಿಷೇಧಿಸಲಾಯಿತು. ಹರ್ಭಜನ್ ಸಿಂಗ್ ತಪ್ಪಿತಸ್ಥರೆಂದು ಸಾಬೀತಾದ ನಂತರ IPL ಆಡಳಿತ ಮಂಡಳಿಯು ಅವರ  ವೇತನವನ್ನು ಕೂಡಾ ತಡೆ ಹಿಡಿದಿತ್ತು. ಬಿಸಿಸಿಐ ಕೂಡ ಭಜ್ಜಿಗೆ ಐದು ಏಕದಿನ ಪಂದ್ಯಗಳ ನಿಷೇಧ ಹೇರಿತ್ತು.

ಇದನ್ನೂ ಓದಿ : Team India: ಏಕದಿನ ತಂಡಕ್ಕೆ ರೋಹಿತ್ ಬದಲಿಗೆ ಈ ಸ್ಟಾರ್ ಆಲ್’ರೌಂಡರ್ ನಾಯಕ!

ಲಲಿತ್ ಮೋದಿ ವಜಾ :
ಲಲಿತ್ ಮೋದಿ ಅವರು ಐಪಿಎಲ್‌ನ ಮೊದಲ ಅಧ್ಯಕ್ಷರ ಮತ್ತು ಚೇರ್ ಮ್ಯಾನ್ ಆಗಿದ್ದರು. ಐಪಿಎಲ್ ಲೀಗ್ ಅನ್ನು ಪ್ರಾರಂಭಿಸುವ ಹಿಂದಿನ ಮಾಸ್ಟರ್ ಮೈಂಡ್  ಅವರೇ ಆಗಿದ್ದರು ಎನ್ನಲಾಗುತ್ತದೆ. ಅನುಚಿತ ವರ್ತನೆ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಯಿತು. ಲಲಿತ್ ಮೋದಿ ವಿರುದ್ದವೂ ಬಿಸಿಸಿಐ ತನಿಖೆಯನ್ನು ಪ್ರಾರಂಭಿಸಿ, ಎಲ್ಲಾ ಆರೋಪಗಳಲ್ಲಿಯೂ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು.  ಆದರೂ ಲಲಿತ್ ಮೋದಿ ತಮ್ಮ ಮೇಲಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. 

ಶಾರುಖ್ ಖಾನ್ ಗೆ ವಾಂಖೆಡೆ ಸ್ಟೇಡಿಯಂ ಪ್ರವೇಶ ನಿಷೇಧ : 
ಐದು ವರ್ಷಗಳ ಕಾಲ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್  ಮೇಲೆ ನಿಷೇಧ ಹೇರಿತ್ತು.  ಐಪಿಎಲ್ ಪಂದ್ಯದ ನಂತರ  ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಈ ಕ್ರಮ ಕೈಗೊಂಡಿತ್ತು. 

ಇದನ್ನೂ ಓದಿ : Viral Video: ‘ಕೈಗೆ ಬಂದಿದ್ದು, ಕಾಲಲ್ಲಿ ಹೋಯ್ತು’; ಈ ಅಂಕಲ್ ಫೀಲ್ಡಿಂಗ್ ನೋಡಿದ್ರೆ ನೀವು ಜೀವಮಾನದಲ್ಲಿ ನಕ್ಕಿರಲ್ಲ… ಅಷ್ಟು ನಗ್ತೀರಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ :
ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಎಸ್ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಇದೇ ಪ್ರಕರಣದಲ್ಲಿ ಮುಂಬೈ ಪೊಲೀಸರು ವಿಂದು ದಾರಾ ಸಿಂಗ್ ಮತ್ತು ಗುರುನಾಥ್ ಮೇಯಪ್ಪನ್ ಅವರನ್ನು ಕೂಡಾ ಬಂಧಿಸಿದ್ದರು. ಸಿಎಸ್‌ಕೆ ಮಾಲೀಕ ಮತ್ತು ಈಗ ಬಿಸಿಸಿಐ ಮಾಜಿ ಅಧ್ಯಕ್ಷ  ಕೂಡಾ ಬೆಟ್ಟಿಂಗ್ ಮತ್ತು ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. 2015 ರಲ್ಲಿ ಸುಪ್ರೀಂ ಕೋರ್ಟ್ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿತು. 

ಜೋಸ್ ಬಟ್ಲರ್  ಔಟ್ ಮೂಲಕ ಎದ್ದ ವಿವಾದ : 
ಲೀಗ್ ನ 12ನೇ ಸೀಸನ್  ನಲ್ಲಿ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ನಾನ್ ಸ್ಟ್ರೈಕರ್ ಅಂತ್ಯದಲ್ಲಿದ್ದ ರಾಜಸ್ಥಾನದ ಜೋಸ್ ಬಟ್ಲರ್ ಅವರನ್ನು ರನೌಟ್ ಮಾಡಿದಾಗ  ವಿವಾದದ ಛಾಯೆ ಆವರಿಸಿತ್ತು. ಬಟ್ಲರ್ ಔಟಾದ ನಂತರ ಸ್ಪೋರ್ಟ್ ಸ್ಪಿರಿಟ್ ಬಗ್ಗೆ ಚರ್ಚೆ ನಡೆಯಿತು.  ನಿಯಮಗಳು ಅಶ್ವಿನ್ ಪರವಾಗಿದ್ದರೂ ವಿವಾದವಾಗುವುದನ್ನು ಮಾತ್ರ ತಡೆಯಲಾಗಲಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News