CSK ವಿರುದ್ಧ RCB ಸೋಲಲು ಇವರೇ ಕಾರಣ! ಪೋಸ್ಟ್ ಮ್ಯಾಚ್’ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ದೂರಿದ್ದು ಯಾರನ್ನು…?

Faf du Plessis react: ನಮ್ಮ ತಂಡವು ಸಾಕಷ್ಟು ವಿಕೆಟ್ ಕಳೆದುಕೊಂಡಿದೆ. ಮೊದಲ ಆರು ಓವರ್‌’ಗಳಲ್ಲಿ ತ್ವರಿತವಾಗಿ ರನ್ ಗಳಿಸಬೇಕು. CSK ತನ್ನ ಸ್ಪಿನ್ನರ್‌’ಗಳೊಂದಿಗೆ ಒತ್ತಡವನ್ನು ಸೃಷ್ಟಿಸುತ್ತದೆ. ಅದೇ ವೇಳೆಗೆ ನಾವು ಮೊದಲ ಆರು ಓವರ್‌’ಗಳಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

Written by - Bhavishya Shetty | Last Updated : Mar 23, 2024, 05:40 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯೆ
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಕೈಕೊಟ್ಟಿದ್ದು ಸುಳ್ಳಲ್ಲ
    • ಈ ಬಗ್ಗೆ ಪರೋಕ್ಷವಾಗಿ ನಾಯಕ ಫಾಫ್ ಪ್ರಸ್ತಾಪ ಮಾಡಿದ್ದಾರೆ.
CSK ವಿರುದ್ಧ RCB ಸೋಲಲು ಇವರೇ ಕಾರಣ! ಪೋಸ್ಟ್ ಮ್ಯಾಚ್’ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ದೂರಿದ್ದು ಯಾರನ್ನು…? title=
Faf du Plessis

Faf du Plessis react: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್’ಗಳ ಸೋಲಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯೆ ನೀಡಿದ್ದಾರೆ.

“ನಮ್ಮ ತಂಡವು ಸಾಕಷ್ಟು ವಿಕೆಟ್ ಕಳೆದುಕೊಂಡಿದೆ. ಮೊದಲ ಆರು ಓವರ್‌’ಗಳಲ್ಲಿ ತ್ವರಿತವಾಗಿ ರನ್ ಗಳಿಸಬೇಕು. CSK ತನ್ನ ಸ್ಪಿನ್ನರ್‌’ಗಳೊಂದಿಗೆ ಒತ್ತಡವನ್ನು ಸೃಷ್ಟಿಸುತ್ತದೆ. ಅದೇ ವೇಳೆಗೆ ನಾವು ಮೊದಲ ಆರು ಓವರ್‌’ಗಳಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಆರಂಭಿಕ ಪಂದ್ಯದಲ್ಲೇ 4 ವಿಕೆಟ್ ಕಬಳಿಸಿ RCBಗೆ ಸಿಂಹಸ್ವಪ್ನವಾಗಿ ಕಾಡಿದ ಈ ಎಂ.ರೆಹಮಾನ್ ಯಾರು? ಆತನ ಹಿನ್ನೆಲೆ ಏನು ಗೊತ್ತಾ?

ಒಟ್ಟಾರೆಯಾಗಿ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಕೈಕೊಟ್ಟಿದ್ದು ಸುಳ್ಳಲ್ಲ. ಈ ಬಗ್ಗೆ ಪರೋಕ್ಷವಾಗಿ ನಾಯಕ ಫಾಫ್ ಪ್ರಸ್ತಾಪ ಮಾಡಿದ್ದಾರೆ.

ಅಂದಹಾಗೆ ಪಂದ್ಯದಲ್ಲಿ RCB ಉತ್ತಮ ಆರಂಭವನ್ನು ಹೊಂದಿತ್ತು. ಡು ಪ್ಲೆಸಿಸ್ ಮತ್ತು ಕೊಹ್ಲಿ ಮೊದಲ ವಿಕೆಟ್‌’ಗೆ 41 ರನ್ ಸೇರಿಸಿದರು. ಆದರೆ ಮುಸ್ತಾಫಿಜುರ್ ರೆಹಮಾನ್, ಡು ಪ್ಲೆಸಿಸ್ ಅವರನ್ನು ಔಟ್ ಮಾಡುವ ಮೂಲಕ ಆರ್‌ಸಿಬಿಗೆ ಮೊದಲ ಹೊಡೆತ ನೀಡಿದರು. ಇದಾದ ನಂತರ ರಜತ್ ಪಾಟಿದಾರ್ ಅವರನ್ನು ಔಟ್ ಮಾಡುವ ಮೂಲಕ ಮತ್ತೆ ಆರ್ ಸಿಬಿ ಆಘಾತ ತಂದೊಡ್ಡಿದರು ರೆಹಮಾನ್. ಇದಾದ ಬೆನ್ನಲ್ಲೇ ಮುಸ್ತಫಿಜುರ್ ರೆಹಮಾನ್ ಎಸೆತಕ್ಕೆ ರಹಾನೆ ಮತ್ತು ರಚಿನ್ ರವೀಂದ್ರಗೆ ಕ್ಯಾಚ್ ಇತ್ತು ಕೊಹ್ಲಿ ಕೂಡ ಔಟ್ ಆದರು.

ಒಂದು ಹಂತದಲ್ಲಿ RCB 77 ರನ್‌ ಗಳಿಸಿರುವಾಗ 4 ವಿಕೆಟ್‌ ಪತನಗೊಂಡಿದ್ದವು. ಆದರೆ ಅನುಜ್ ರಾವತ್ (48 ರನ್) ಹಾಗೂ ದಿನೇಶ್ ಕಾರ್ತಿಕ್ (ಔಟಾಗದೆ 38 ರನ್) ಆರನೇ ವಿಕೆಟ್‌’ಗೆ 95 ರನ್‌’ಗಳ ಜೊತೆಯಾಟವಾಡಿ ಆರ್‌’ಸಿಬಿಗೆ ಉತ್ತಮ ಸ್ಕೋರ್ ಕಲೆಹಾಕಲು ಸಹಾಯ ಮಾಡಿದರು. ಅಂದರೆ RCB ಆರು ವಿಕೆಟ್‌ಗೆ 173 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಇದಾದ ಬಳಿಕ CSK 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಶಿವಂ ದುಬೆ (28 ಎಸೆತಗಳಲ್ಲಿ ಔಟಾಗದೆ 34) ಮತ್ತು ರವೀಂದ್ರ ಜಡೇಜಾ (17 ಎಸೆತಗಳಲ್ಲಿ ಔಟಾಗದೆ 25) ಐದನೇ ವಿಕೆಟ್‌’ಗೆ ಔಟಾಗದೆ 66 ರನ್ ಸೇರಿಸಿ ಸಿಎಸ್‌ಕೆ ಗೆಲುವಿಗೆ ಕಾರಣರಾದರು.

ಇದನ್ನೂ ಓದಿ: ವಯಸ್ಸು 38, ಅವಳಿ ಮಕ್ಕಳ ತಂದೆ… ಈ ಕ್ರಿಕೆಟರ್ ತವರು ಚೆನ್ನೈ ಆದ್ರೂ IPLನಲ್ಲಿ ಆಡೋದು RCB ಪರ!! ಯಾರಿವರು ಗೊತ್ತಾಯ್ತ?

ಚೆನ್ನೈ ಸೂಪರ್ ಕಿಂಗ್ಸ್‌’ನ ಮುಸ್ತಫಿಜುರ್ ರೆಹಮಾನ್ ತಮ್ಮ ಅತ್ಯುತ್ತಮ ಬೌಲಿಂಗ್‌’ಗಾಗಿ ಪಂದ್ಯ ಆಟಗಾರ ಪ್ರಶಸ್ತಿಯನ್ನು ಸಹ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News