Lok Sabha Election 2024: ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್‌ ಹಾಕಿದ ನಟರಾಕ್ಷಸ!

Daali Dhananjay: ಚಂದನವನದ ನಟರಾಕ್ಷಸ ಡಾಲಿ ಧನಂಜಯ್‌ ತಮ್ಮ ಹುಟ್ಟೂರು  ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 26, 2024, 12:49 PM IST
  • ನಟ ಡಾಲಿ ಧನಂಜಯ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಲೋಕಸಭೆ ಚುನಾವಣೆಯಂದು ಮತದಾನ ಹಕ್ಕು ಚಲಾಯಿಸುವುದಕ್ಕಾಗಿ ತಮ್ಮ ಹುಟ್ಟು ಬೆಳೆದ ಗ್ರಾಮಕ್ಕೆ ಬಂದಿದ್ದಾರೆ.
  • ನಟ ಧನಂಜಯ್‌ ಕುಟುಂಬ ಸಮೇತರಾಗಿ ಬಂದು ಕಾಳೇನಹಳ್ಳಿಯ ವೋಟಿಂಗ್‌ ಬೂತ್‌ಗೆ ಬಂದು ಮತದಾನ ಮಾಡಿದ್ದಾರೆ.
  • ಮತದಾನದ ನಂತರ ನಟ ಡಾಲಿ ಧನಂಜಯ್‌ ತಮ್ಮ ಕುಟುಂಬರವರ ಜೊತೆಗೆ ಹಾಗೂ ಸ್ನೇಹಿತರ ಜೊತೆಗೆ ನಿಂತುಕೊಂಡು ಫೋಟೋಗೆ ಪೋಸ್‌ ನೀಡಿದ್ದಾರೆ.
Lok Sabha Election 2024: ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್‌ ಹಾಕಿದ ನಟರಾಕ್ಷಸ! title=

Daali Dhanjay Family At Voting Booth: ಸ್ಯಾಂಡಲ್‌ವುಡ್‌ ನಟರಾಕ್ಷಸ ಡಾಲಿ ಧನಂಜಯ್‌ ತಮ್ಮ ಹುಟ್ಟೂರಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ನಟ ಡಾಲಿ ಧನಂಜಯ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಲೋಕಸಭೆ ಚುನಾವಣೆಯಂದು ಮತದಾನ ಹಕ್ಕು ಚಲಾಯಿಸುವುದಕ್ಕಾಗಿ ತಮ್ಮ ಹುಟ್ಟು ಬೆಳೆದ ಗ್ರಾಮಕ್ಕೆ ಬಂದಿದ್ದಾರೆ. 

ನಟ ಧನಂಜಯ್‌ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಜನಸಿದರು. ಇಂದು ಬೆಳಗ್ಗೆ ನಟ ಧನಂಜಯ್‌ ಕುಟುಂಬ ಸಮೇತರಾಗಿ ಬಂದು ಕಾಳೇನಹಳ್ಳಿಯ ವೋಟಿಂಗ್‌ ಬೂತ್‌ಗೆ ಬಂದು ಮತದಾನ ಮಾಡಿದ್ದಾರೆ. ಮತದಾನ ಹಕ್ಕು ಚಲಾಯಿಸಲು ಹೋದಾಗ ಈ ನಟ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಕಾಣಿಸಕೊಂಡಿದ್ದಾರೆ. 

ಇದನ್ನೂ ಓದಿ: Salmaan Khan: ಸಲ್ಮಾನ್​ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಬಂದೂಕು ನೀಡಿದ್ದ ಇಬ್ಬರ ಬಂಧನ!!

ಮತದಾನದ ನಂತರ ನಟ ಡಾಲಿ ಧನಂಜಯ್‌ ತಮ್ಮ ಕುಟುಂಬರವರ ಜೊತೆಗೆ ಹಾಗೂ ಸ್ನೇಹಿತರ ಜೊತೆಗೆ ನಿಂತುಕೊಂಡು ಫೋಟೋಗೆ ಪೋಸ್‌ ನೀಡಿದ್ದಾರೆ. ಧನಂಜಯ್‌ ಎಷ್ಟೇ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೂ ಆಗಾಗಾ ಹುಟ್ಟೂರಿಗೆ ಭೇಟಿ ನೀಡುತ್ತಾರೆ. ಮರೆಯದ ಈ ನಟ ತಮ್ಮ ತವರೂರಿಗೆ ಆಗಮಿಸಿ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ.

ಡಾಲಿ ಧನಂಜಯ್‌ ಸದ್ಯ ಉತ್ತರಕಾಂಡ ಸಿನಿಮಾದ ಚಿತ್ರೀಕರಣದ ಕೆಲಸದಲ್ಲಿ ತೊಡಗಿಕೊಂಡಿದ್ದರು. ಕಳೆದ ಎರಡು ವಾರಗಳಿಂದ ಈ ನಟ ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದು, ಇದೀಗ ಶೂಟಿಂಗ್ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡಿದ್ದಾರೆ. ಕೊಂಚ ಬ್ರೇಕ್‌ ತೆಗೆದುಕೊಂಡು ಈ ನಟ ಮತದಾನದ ಪ್ರಕ್ರಿಯೆಯಲ್ಲಿ  ಪಾಲ್ಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News