Ind vs Aus : ಭಾರತ - ಆಸ್ಟ್ರೇಲಿಯಾ 4 ನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಈ ಬಲಿಷ್ಠ ಆಟಗಾರ!

Ind vs Aus 4th Test Match: ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಾರ್ಚ್ 9 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. 

Written by - Chetana Devarmani | Last Updated : Mar 5, 2023, 10:50 AM IST
  • ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯ
  • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿ
  • ಹೊರಗುಳಿಯಲಿದ್ದಾರೆ ಈ ಬಲಿಷ್ಠ ಆಟಗಾರ!
Ind vs Aus : ಭಾರತ - ಆಸ್ಟ್ರೇಲಿಯಾ 4 ನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಈ ಬಲಿಷ್ಠ ಆಟಗಾರ!  title=
Ind vs Aus 4th Test Match

Ind vs Aus 4th Test Match: ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಾರ್ಚ್ 9 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ನಾಲ್ಕನೇ ಟೆಸ್ಟ್ ಪಂದ್ಯದಿಂದ ದೊಡ್ಡ ಮ್ಯಾಚ್ ವಿನ್ನರ್ ಆಟಗಾರನನ್ನು ಕೈಬಿಡಬಹುದು. ಈ ಆಟಗಾರನನ್ನು ಸರಣಿಯ ಮೂರನೇ ಟೆಸ್ಟ್ ಪಂದ್ಯದಿಂದಲೂ ಕೈಬಿಡಲಾಗಿದೆ.

ನಾಲ್ಕನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಈ ಆಟಗಾರ : 

ಈ ಸರಣಿಯ ಮಧ್ಯೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ತಮ್ಮ ದೇಶಕ್ಕೆ ಮರಳಿದ್ದರು. ಸರಣಿಯ ಎರಡನೇ ಟೆಸ್ಟ್ ಪಂದ್ಯದ ನಂತರ ಪ್ಯಾಟ್ ಕಮ್ಮಿನ್ಸ್ ತಮ್ಮ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಲು ಸಿಡ್ನಿಗೆ ತೆರಳಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಪ್ಯಾಟ್ ಕಮ್ಮಿನ್ಸ್ ಸಿಡ್ನಿಯಲ್ಲಿಯೇ ಉಳಿಯಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ಯಾಟ್ ಕಮಿನ್ಸ್ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಬಹುದು. ಪ್ಯಾಟ್ ಕಮ್ಮಿನ್ಸ್ ತವರಿಗೆ ಮರಳಿದ ನಂತರ ಸ್ಟೀವ್ ಸ್ಮಿತ್ ಅವರನ್ನು ಮೂರನೇ ಟೆಸ್ಟ್‌ನಲ್ಲಿ ನಾಯಕರನ್ನಾಗಿ ಮಾಡಲಾಯಿತು, ಆದ್ದರಿಂದ ಸ್ಟೀವ್ ಸ್ಮಿತ್ ಕೊನೆಯ ಪಂದ್ಯದಲ್ಲೂ ನಾಯಕರಾಗಿ ಮುಂದುವರೆಯಬಹುದು.

ಇದನ್ನೂ ಓದಿ : IND vs AUS: ತನ್ನ ಸ್ನೇಹಿತನಿಗೇ ವಿಲನ್ ಆದ ಕ್ಯಾಪ್ಟನ್ ರೋಹಿತ್ ಶರ್ಮಾ!

ಮುಖ್ಯ ಕೋಚ್ ನೀಡಿದ್ರು ಪ್ರಮುಖ ಮಾಹಿತಿ : 

ಪ್ಯಾಟ್ ಕಮ್ಮಿನ್ಸ್ ಬಗ್ಗೆ ಅಪ್‌ಡೇಟ್‌ ನೀಡುತ್ತಾ, ಆಸ್ಟ್ರೇಲಿಯಾದ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್, 'ಈ ಕಷ್ಟದ ಸಮಯದಲ್ಲಿ ನಾವು ಅವರು ಮತ್ತು ಅವರ ಕುಟುಂಬದೊಂದಿಗೆ ಇದ್ದೇವೆ. ನಾವು ದಿನನಿತ್ಯವೂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ, ಆದ್ದರಿಂದ ಪ್ರಸ್ತುತ ಅವರು ಆಡುವುದಿಲ್ಲ. ಟೆಸ್ಟ್ ಪಂದ್ಯವು ಕೆಲವು ದಿನಗಳು ಬಾಕಿಯಿದೆ, ಆದ್ದರಿಂದ ನಾವು ಪ್ರತಿನಿತ್ಯ ಪ್ಯಾಟ್ ಅವರೊಂದಿಗೆ ಚರ್ಚಿಸುತ್ತೇವೆ. ಅವರು ಇನ್ನೂ ತಂಡದೊಂದಿಗೆ ಸಂಪೂರ್ಣ ಸಂಪರ್ಕದಲ್ಲಿದ್ದಾರೆ" ಎಂದರು.

ಸ್ಟೀವ್ ಸ್ಮಿತ್ ಹೇಳಿದ್ದೇನು? 

ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್ ಪಂದ್ಯವನ್ನು 9 ವಿಕೆಟ್ ಗಳಿಂದ ಗೆದ್ದುಕೊಂಡಿತು. ಇದಕ್ಕೂ ಮುನ್ನ ಸ್ಟೀವ್ ಸ್ಮಿತ್ 2014ರಿಂದ 2018ರವರೆಗೆ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಮೂರನೇ ಟೆಸ್ಟ್‌ನ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಪಂದ್ಯದ ನಂತರ, "ನನ್ನ ಸಮಯ ಮುಗಿದಿದೆ. ಈಗ ಇದು ಪ್ಯಾಟ್ ಕಮ್ಮಿನ್ಸ್ ತಂಡವಾಗಿದೆ. ಆದರೆ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ಹಿಂತಿರುಗದಿದ್ದರೆ, ಸ್ಟೀವ್ ಸ್ಮಿತ್ ನಾಯಕತ್ವವನ್ನು ನೋಡಬಹುದು" ಎಂದರು.

ಇದನ್ನೂ ಓದಿ : WPL 2023: ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಶುಭಾರಂಭ, ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ದಾಖಲೆ!

ಕೊನೆಯ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ : 

ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮ್ಯಾಟ್ ಕುಹ್ನೆಮನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News