ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಬ್ಯಾಟ್ಸ್’ಮನ್’ ಗಳು ಇನ್ಮುಂದೆ ಬೌಲಿಂಗ್ ಮಾಡ್ತಾರೆ… ಕೋಚ್ ಮಾಂಬ್ರೆ

Coach Paras Mhambrey: ಮಾಂಬ್ರೆ ಭಾರತೀಯ U19 ತಂಡದ ತರಬೇತುದಾರರಾಗಿದ್ದು, 2020 U19 ವಿಶ್ವಕಪ್ ಫೈನಲ್‌’ನಲ್ಲೂ ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಜೈಸ್ವಾಲ್ ಮತ್ತು ತಿಲಕ್ ಇಬ್ಬರೂ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದ್ದರು.

Written by - Bhavishya Shetty | Last Updated : Aug 13, 2023, 11:09 AM IST
    • ಟೀಂ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ
    • ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಹೇಳಿಕೆ
    • ಮುಂದಿನ ದಿನಗಳಲ್ಲಿ ಇವರಿಬ್ಬರು ಟೀಂ ಇಂಡಿಯಾ ಪರ ಬೌಲಿಂಗ್ ಮಾಡಬಹುದು
ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಬ್ಯಾಟ್ಸ್’ಮನ್’ ಗಳು ಇನ್ಮುಂದೆ ಬೌಲಿಂಗ್ ಮಾಡ್ತಾರೆ… ಕೋಚ್ ಮಾಂಬ್ರೆ title=
Coach Paras Mhambrey

Coach Paras Mhambrey on Yashasvi Jaiswal and Tilak Varma: ಟೀಂ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಅರ್ಥಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇವರಿಬ್ಬರು ಟೀಂ ಇಂಡಿಯಾ ಪರ ಬೌಲಿಂಗ್ ಮಾಡಬಹುದು ಎಂದು ಹೇಳಿದ್ದಾರೆ.  

ಇದನ್ನೂ ಓದಿ:  ರೋಹಿತ್ ಶರ್ಮಾ ಹೆಸರಿನಲ್ಲಿದ್ದ 14 ವರ್ಷ ಹಳೆಯ ದಾಖಲೆ ಇನ್ಮುಂದೆ ಜೈಸ್ವಾಲ್ ತೆಕ್ಕೆಗೆ!

ಮಾಂಬ್ರೆ ಭಾರತೀಯ U19 ತಂಡದ ತರಬೇತುದಾರರಾಗಿದ್ದು, 2020 U19 ವಿಶ್ವಕಪ್ ಫೈನಲ್‌’ನಲ್ಲೂ ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಜೈಸ್ವಾಲ್ ಮತ್ತು ತಿಲಕ್ ಇಬ್ಬರೂ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೋರಿಸಿದ್ದರು.

ಇನ್ನು 4ನೇ ಟಿ 20 ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪಾರಸ್ ಮಾಂಬ್ರೆ,”ನಿಮ್ಮಲ್ಲಿ ಚಿಪ್ ಇನ್ ಮಾಡುವ ಯಾರಾದರೂ ಇದ್ದರೆ, ಒಳ್ಳೆಯದು. ನಾನು ತಿಲಕ್ ಮತ್ತು ಯಶಸ್ವಿ U19 ದಿನಗಳಿಂದಲೂ ಬೌಲ್ ಮಾಡುವುದನ್ನು ನೋಡಿದ್ದೇನೆ. ಅವರು ಉತ್ತಮ ಬೌಲರ್‌ಗಳಾಗಲು ಸಮರ್ಥರಾಗಿದ್ದಾರೆ. ಈ ಮಟ್ಟದಲ್ಲಿ ಕೆಲಸ ಮಾಡಬಹುದು. ಈ ರೀತಿಯ ಆಯ್ಕೆಗಳು ನಿಮಗೆ ಸಿಕ್ಕಾಗ ನಮಗೆ ಬಲ ಹೆಚ್ಚಾಗುತ್ತದೆ. ಅವರು ಶೀಘ್ರದಲ್ಲೇ ಬೌಲ್ ಮಾಡುವುದನ್ನು ನಾವು ನೋಡುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಈ ವಿಶ್ವದಾಖಲೆ ಮುರಿದೇಬಿಟ್ಟರು ಗಿಲ್-ಜೈಸ್ವಾಲ್ ಜೋಡಿ!

"ಈ ಸ್ವರೂಪದಲ್ಲಿ ಶಿಸ್ತು ಹೊಂದಿರುವುದು, ಯೋಜನೆಗಳನ್ನು ನಿರ್ಧರಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವಿಕೆ ಮುಖ್ಯ. ಯಶಸ್ವಿಯಾಗಲು ಉತ್ತಮ ಅವಕಾಶವನ್ನು ನೀಡಿ" ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News