ಐಪಿಎಲ್ ಟೂರ್ನಿ ನಡೆಸಲು ಇನ್ನೂ ಅವಕಾಶವಿದೆ - ಅನಿಲ್ ಕುಂಬ್ಳೆ

ಈ ವರ್ಷ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾತುಕತೆ ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಸುದ್ದಿಯಲ್ಲಿದೆ.

Last Updated : May 28, 2020, 04:54 PM IST
ಐಪಿಎಲ್ ಟೂರ್ನಿ ನಡೆಸಲು ಇನ್ನೂ ಅವಕಾಶವಿದೆ - ಅನಿಲ್ ಕುಂಬ್ಳೆ  title=

ನವದೆಹಲಿ: ಈ ವರ್ಷ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾತುಕತೆ ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಸುದ್ದಿಯಲ್ಲಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ 20 ವಿಶ್ವಕಪ್‌ನ ಸ್ಥಿತಿಗೆ ಅನುಗುಣವಾಗಿ ಐಪಿಎಲ್ 13 ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯಬಹುದು ಎಂಬ ಊಹಾಪೋಹಗಳಿವೆ. ಕೋವಿಡ್ -19 ಲಾಕ್‌ಡೌನ್ ನಂತರ ಕ್ರಿಕೆಟ್‌ ಗೆ ಮತ್ತೆ ಚಾಲನೆ ನೀಡುವ ವಿಚಾರವಾಗಿ ಗುರುವಾರ ಸಭೆ ನಿಗದಿಪಡಿಸಲಾಗಿತ್ತು. ಇದೇ ವೇಳೆ ಐಪಿಎಲ್ 2020 ರಲ್ಲಿ ನಡೆಯಬಹುದೆಂದು ಹಲವಾರು ಹಾಲಿ ಮತ್ತು ಮಾಜಿ ಆಟಗಾರರು ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತದ ಮಾಜಿ ನಾಯಕ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕೂಡ ಈ ವರ್ಷ ಐಪಿಎಲ್ ನಡೆಯುವ ಭರವಸೆ ಹೊಂದಿದ್ದಾರೆ. ಕರೋನವೈರಸ್ ಕಾರಣ ಐಪಿಎಲ್ ಪ್ರೇಕ್ಷಕರಿಲ್ಲದೆ ನಡೆಯಬಹುದು ಎಂದು ಕುಂಬ್ಳೆ ಸಮರ್ಥಿಸಿಕೊಂಡರು.

ಇದು ಇನ್ನೂ ಅಧಿಕೃತವಾಗಿಲ್ಲವಾದರೂ COVID-19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಆರಂಭದಲ್ಲಿ ಪಂದ್ಯಾವಳಿಯನ್ನು ಅನಿರ್ದಿಷ್ಟವಾಗಿ ಮುಂದೂಡಿದ ನಂತರ ಅಕ್ಟೋಬರ್ ನಲ್ಲಿ ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಸುವ ಸಾಧ್ಯತೆಯನ್ನು ಬಿಸಿಸಿಐ ಎದುರು ನೋಡುತ್ತಿದೆ.

Trending News