ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು ..

ಆಸ್ಟ್ರೇಲಿಯಾದ ದಂತ ಕಥೆ ಶೇನ್ ವಾರ್ನ್ (Shane Warne) ಅವರ ಅಕಾಲಿಕ ನಿಧನಕ್ಕೆ ಈಗ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೆ ಒಳಗಾಗಿದೆ.ಅವರ ನಿಧನಕ್ಕೆ ಈಗ ಕ್ರಿಕೆಟ್ ಜಗತ್ತಿನ ಗಣ್ಯ ಆಟಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Mar 4, 2022, 11:46 PM IST
  • ಆಸ್ಟ್ರೇಲಿಯಾದ ದಂತ ಕಥೆ ಶೇನ್ ವಾರ್ನ್ (Shane Warne) ಅವರ ಅಕಾಲಿಕ ನಿಧನಕ್ಕೆ ಈಗ ಇಡೀ ಕ್ರಿಕೆಟ್ ಜಗತ್ತೇ ಈಗ ಆಘಾತಕ್ಕೆ ಒಳಗಾಗಿದೆ.
  • ಅವರ ಈ ನಿಧನಕ್ಕೆ ಕ್ರಿಕೆಟ್ ಜಗತ್ತಿನ ಗಣ್ಯ ಆಟಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
 ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು .. title=
Photo Courtesy: Twitter

ನವದೆಹಲಿ: ಆಸ್ಟ್ರೇಲಿಯಾದ ದಂತ ಕಥೆ ಶೇನ್ ವಾರ್ನ್ (Shane Warne) ಅವರ ಅಕಾಲಿಕ ನಿಧನಕ್ಕೆ ಈಗ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೆ ಒಳಗಾಗಿದೆ.ಅವರ ನಿಧನಕ್ಕೆ ಈಗ ಕ್ರಿಕೆಟ್ ಜಗತ್ತಿನ ಗಣ್ಯ ಆಟಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Noooooo #Shanewarne ನಾನು ಓದುತ್ತಿರುವುದನ್ನು ಈಗ ನಂಬಲು ಸಾಧ್ಯವಿಲ್ಲ- ಜಾಂಟಿ ರೋಡ್ಸ್

"ನಂಬಲು ಕಷ್ಟವಾಗುತ್ತದೆ. ಕ್ರಿಕೆಟ್ ಜಗತ್ತಿಗೆ ತುಂಬಲಾರದ ನಷ್ಟ, ಅವರು ತಮ್ಮ ಲೆಗ್ ಸ್ಪಿನ್ ನಿಂದಾಗಿ ತಲೆಮಾರುಗಳಿಂದ ಹೊಸ ಪೀಳಿಗೆಗಳಿಗೆ ಸ್ಫೂರ್ತಿಯಾಗಿದ್ದರು. ನಿಮ್ಮನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ" -ಬಾಬರ್ ಅಜಂ 

"ನಾನು ಇಂದು ಲೆಗ್ ಸ್ಪಿನ್ ಬೌಲಿಂಗ್ ವಿಶ್ವವಿದ್ಯಾನಿಲಯವೆಂದು ಪರಿಗಣಿಸುವ ವ್ಯಕ್ತಿಯನ್ನು ಕ್ರಿಕೆಟ್ ಆಟ ಕಳೆದುಕೊಂಡಿದೆ. ನನ್ನ ವೃತ್ತಿಜೀವನದ ಆರಂಭದಿಂದಲೂ ನಾನು ಅವರ ಬೌಲಿಂಗ್‌ನಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ಅವರ ವಿರುದ್ಧ ಆಡುವುದು ಯಾವಾಗಲೂ ವಿಶೇಷ ಸಂಗತಿಯಾಗಿತ್ತು. ನನ್ನ ಸಂತಾಪಗಳು "-ಶಾಹಿದ್ ಆಫ್ರಿದಿ

'ಕೆಲವೇ ಕೆಲವರನ್ನು ಕಡಕ್ ಪ್ರತಿಭೆಯೊಂದಿಗೆ ತಮ್ಮ ಮನೋಭಾವವನ್ನು ಹೊಂದಿಸಬಹುದು. ಶೇನ್‌ವಾರ್ನ್ ತಮ್ಮ ಬೌಲಿಂಗ್ ನ್ನು ಮ್ಯಾಜಿಕ್‌ನಂತೆ ಕಾಣುವ ಹಾಗೆ ಮಾಡಿದರು'- ಗೌತಮ್ ಗಂಭೀರ್ 

'ನಾನು ಸಂಕಟದಲ್ಲಿದ್ದೇನೆ. ದುಃಖ.ಮತ್ತು ಪದಗಳಿಲ್ಲ. ನಾನು ಅವರನ್ನು ಚೆನ್ನಾಗಿ ತಿಳಿದುಕೊಳ್ಳುವಷ್ಟು ಅದೃಷ್ಟಶಾಲಿಯಾಗಿದ್ದೆ. ಅವರ ಮ್ಯಾಜಿಕ್ ಶಾಶ್ವತವಾಗಿ ಉಳಿಯುತ್ತದೆ'- ಹರ್ಷಾ ಭೋಗ್ಲೆ

'ಈ ನಷ್ಟದಿಂದ ಹೊರಬರಲು ಬಹಳ ಸಮಯ ತೆಗೆದುಕೊಳ್ಳುತ್ತದೆ.ಲೆಜೆಂಡರಿ ಶೇನ್‌ವಾರ್ನ್ ಈಗ ನಮ್ಮೊಂದಿಗಿಲ್ಲ- ಶೋಯಬ್ ಅಖ್ತರ್

'ನಾನು ಇದನ್ನು ಟೈಪ್ ಮಾಡುತ್ತಿದ್ದೇನೆ ಎಂದು ನಂಬಲಾಗುತ್ತಿಲ್ಲ...ಮತ್ತೊಬ್ಬ #ಶೇನ್‌ವಾರ್ನ್ ಎಂದಿಗೂ ಸಿಗುವುದಿಲ್ಲ- ಮನೋಜ್ ತಿವಾರಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News