ಇಶಾನ್, ಅಯ್ಯರ್ ಮಾತ್ರವಲ್ಲ… ಬಿಸಿಸಿಐ ಒಪ್ಪಂದದಿಂದ ಹೊರಬಿದ್ರು 7 ಸ್ಟಾರ್ ಆಟಗಾರರು! ಯಾರವರು?

Players dropped out of BCCI contract: ಬಿಸಿಸಿಐ 6 ಆಟಗಾರರನ್ನು ಗ್ರೇಡ್-ಎ ನಲ್ಲಿ ಇರಿಸಿದೆ. ಕಳೆದ ವರ್ಷದ ಒಪ್ಪಂದದಲ್ಲಿ ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಎ ಗ್ರೇಡ್’ಗೆ ಸೇರ್ಪಡೆಗೊಂಡಿದ್ದರು. ಆದರೆ ಈ ಬಾರಿ ಪಂತ್ ಮತ್ತು ಅಕ್ಷರ್ ಅವರನ್ನು ಬಿ ಗ್ರೇಡ್‌’ಗೆ ಕಳುಹಿಸಲಾಗಿದ್ದು, ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರನ್ನು ಪ್ರವೇಶಿಸಲಾಗಿದೆ.

Written by - Bhavishya Shetty | Last Updated : Feb 28, 2024, 08:35 PM IST
    • ಬಿಸಿಸಿಐ ವಾರ್ಷಿಕ ಒಪ್ಪಂದಗಳ ಪಟ್ಟಿ ಬಿಡುಗಡೆ
    • ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಹೆಸರು ಮೊದಲು ಬಂದಿದೆ
    • ಬಿಸಿಸಿಐ 6 ಆಟಗಾರರನ್ನು ಗ್ರೇಡ್-ಎ ನಲ್ಲಿ ಇರಿಸಿದೆ
ಇಶಾನ್, ಅಯ್ಯರ್ ಮಾತ್ರವಲ್ಲ… ಬಿಸಿಸಿಐ ಒಪ್ಪಂದದಿಂದ ಹೊರಬಿದ್ರು 7 ಸ್ಟಾರ್ ಆಟಗಾರರು! ಯಾರವರು? title=
BCCI Annual Contract List

Players dropped out of BCCI contract: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಒಪ್ಪಂದಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ಕೆಲವು ಆಟಗಾರರಿಗೆ ಬಿಸಿಸಿಐ ಶಾಕ್ ನೀಡಿದೆ. ಈ ಪಟ್ಟಿಯಲ್ಲಿ ಯುವ ಬ್ಯಾಟ್ಸ್‌ಮನ್‌’ಗಳಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಹೆಸರು ಮೊದಲು ಬಂದಿದೆ. ಇವರ ಜೊತೆ ಚೇತೇಶ್ವರ ಪೂಜಾರ ಮತ್ತು ಯುಜ್ವೇಂದ್ರ ಚಾಹಲ್ ಅವರಂತಹ ಆಟಗಾರರನ್ನು ಸಹ ಕೈಬಿಡಲಾಗಿದೆ.

ಇದನ್ನೂ ಓದಿ:  BCCI ಒಪ್ಪಂದ ಪಟ್ಟಿ ಪಕ್ರಟ: ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್!

ಗ್ರೇಡ್-ಎ ನಲ್ಲಿ ಬದಲಾವಣೆಗಳು

ಬಿಸಿಸಿಐ 6 ಆಟಗಾರರನ್ನು ಗ್ರೇಡ್-ಎ ನಲ್ಲಿ ಇರಿಸಿದೆ. ಕಳೆದ ವರ್ಷದ ಒಪ್ಪಂದದಲ್ಲಿ ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಎ ಗ್ರೇಡ್’ಗೆ ಸೇರ್ಪಡೆಗೊಂಡಿದ್ದರು. ಆದರೆ ಈ ಬಾರಿ ಪಂತ್ ಮತ್ತು ಅಕ್ಷರ್ ಅವರನ್ನು ಬಿ ಗ್ರೇಡ್‌’ಗೆ ಕಳುಹಿಸಲಾಗಿದ್ದು, ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರನ್ನು ಪ್ರವೇಶಿಸಲಾಗಿದೆ. ಈ ಪಟ್ಟಿಗೆ ವೇಗಿ ಮೊಹಮ್ಮದ್ ಸಿರಾಜ್ ಹೆಸರೂ ಸೇರ್ಪಡೆಯಾಗಿದೆ.

ಗ್ರೇಡ್ ಬಿ ಯಲ್ಲಿ ಯಾರ್ಯಾರು?

ಬಿಸಿಸಿಐ ಗ್ರೇಡ್ ಬಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಟೆಸ್ಟ್ ಕ್ರಿಕೆಟ್‌’ನ ಸ್ಟಾರ್ ಬ್ಯಾಟ್ಸ್‌ಮನ್‌’ಗಳಾದ ಚೇತೇಶ್ವರ ಪೂಜಾರ ಮತ್ತು ಶ್ರೇಯಸ್ ಅಯ್ಯರ್ ಅವರ ಹೆಸರು ಈ ಪಟ್ಟಿಯಲ್ಲಿಲ್ಲ. ಕೊನೆಯ ಒಪ್ಪಂದದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಬಿ ಗ್ರೇಡ್‌ನಲ್ಲಿದ್ದರು. ಈ ಬಾರಿ ಬಿಸಿಸಿಐ ಇಬ್ಬರೂ ಆಟಗಾರರನ್ನು ಕೇಂದ್ರ ಒಪ್ಪಂದದಿಂದ ತೆಗೆದುಹಾಕಿದೆ. ಇವರಿಬ್ಬರ ಜಾಗದಲ್ಲಿ ಕುಲದೀಪ್ ಯಾದವ್ ಮತ್ತು ಯಶಸ್ವಿ ಜೈಸ್ವಾಲ್ ಬಿ ಗ್ರೇಡ್‌’ಗೆ ಪ್ರವೇಶ ಪಡೆದಿದ್ದಾರೆ.

ಗ್ರೇಡ್ ಸಿ:

ಸಿ ಗ್ರೇಡ್‌’ನಲ್ಲಿಯೂ ಬಿಸಿಸಿಐ ಹಲವು ಆಟಗಾರರನ್ನು ದೂರವಿಟ್ಟಿದೆ. ಶಿಖರ್ ಧವನ್, ಉಮೇಶ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್ ಅವರಂತಹ ದಿಗ್ಗಜರನ್ನು ವಾರ್ಷಿಕ ಒಪ್ಪಂದದಿಂದ ಹೊರಗಿಟ್ಟಿದೆ.

ಗ್ರೇಡ್ A+ (4 ಆಟಗಾರರು)

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಆಟಗಾರರು)

ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಆಟಗಾರರು)

ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಆಟಗಾರರು)

ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

ಇದನ್ನೂ ಓದಿ: BBK 10: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್-ನಮ್ರತಾ ವಿವಾಹ!? ಮುದ್ದಾದ ಜೋಡಿಯ ಫೋಟೋಸ್ ಇಲ್ಲಿವೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News