Viral Video: ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಮನೆ ಮೇಲೆ ಹಣದ ಸುರಿಮಳೆಗೈದ ಪಾಕಿಸ್ತಾನಿ ಅಳಿಯ!!

Viral Video: ಪಾಕಿಸ್ತಾನದ ಮದುವೆಯೊಂದರಲ್ಲಿ ಮಾವನ ವಿಚಿತ್ರ ಬೇಡಿಕೆ ಈಡೇರಿಸಲು ಅಳಿಯನೊಬ್ಬ ಹೆಲಿಕಾಪ್ಟರ್ ಮೂಲಕ ಹಣದ ಸುರಿಮಳೆ ಸುರಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.  

Written by - Puttaraj K Alur | Last Updated : Jan 5, 2025, 06:51 PM IST
  • ಮಾವನ ವಿಶೇಷ ಬೇಡಿಕೆ ಈಡೇರಿಸಲು ಹೆಲಿಕಾಪ್ಟರ್‌ ಬುಕ್‌ ಮಾಡಿದ ಅಳಿಯ
  • ಪಾಕಿಸ್ತಾನದ ಹೈದರಾಬಾದ್‌ನ ವಧುವಿನ ಮನೆಯ ಮೇಲೆ ಹಣದ ಸುರಿಮಳೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ ವಿಡಿಯೋ
Viral Video: ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಮನೆ ಮೇಲೆ ಹಣದ ಸುರಿಮಳೆಗೈದ ಪಾಕಿಸ್ತಾನಿ ಅಳಿಯ!! title=
ಮಾವನ ಆಸೆ ಈಡೇರಿಸಿದ ಅಳಿಯ!

Money Rain Viral Video: ಮದುವೆಯ ಸಂದರ್ಭದಲ್ಲಿ ವಧು-ವರನ ಕಡೆಯಿಂದ ಅನೇಕ ತಮಾಷೆಯ ಹಾಗೂ ಗಂಭೀರ ಬೇಡಿಕೆಗಳಿರುತ್ತವೆ. ಕೆಲವು ಕಡೆ ವರದಕ್ಷಿಣೆ ಚಾಲ್ತಿಯಲ್ಲಿದ್ದರೆ, ಮತ್ತೆ ಕೆಲವು ಕಡೆ ವಧು ದಕ್ಷಿಣೆಯ ಸಂಪ್ರದಾಯ ನಡೆಯುತ್ತಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಹೆಣ್ಣು ಕೊಟ್ಟ ಮಾವನೋರ್ವ ಅಳಿಯನ ಬಳಿ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದ. ತನ್ನ ಹೈದರಾಬಾದ್‌ನ ಮನೆಯ ಮೇಲೆ ನೋಟಿನ ಸುರಿಮಳೆ ಸುರಿಸುವಂತೆ ಸೂಚಿಸಿದ್ದನಂತೆ. ಮಾವನ ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಅಳಿಯ ಇದಕ್ಕಾಗಿ ಖಾಸಗಿ ಹೆಲಿಕಾಪ್ಟರ್‌ ಬುಕ್ ಮಾಡಿ ಮಾವನ ಮನೆಯ ಮೇಲೆ ಹಣದ ಸುರಿಮಳೆಯನ್ನೇ ಸುರಿಸಿದ್ದಾನೆ. ಇದರ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.   

ಮದುವೆ ಕಾರ್ಯಕ್ರಮದಲ್ಲಿ ವಧು-ವರರ ಮೇಲೆ ಹಣ ಸುರಿಸುವುದು ಕಾಮನ್. ಉತ್ತರ ಭಾರತದ ಮದುವೆಗಳಲ್ಲಿ ಇಂತಹ ಸಂಗತಿ ಸಾಮಾನ್ಯ. ಕೆಲವರು ಹಣದ ಹಾರ ಮಾಡಿ ವಧು-ವರರ ಕೊರಳಿಗೆ ಹಾಕಿದ್ರೆ, ಮತ್ತೆ ಕೆಲವರು ಅವರ ತಲೆಯ ಮೇಲೆ ಹಣದ ಮಳೆ ಸುರಿಸುತ್ತಾರೆ. ಆದರೆ ನೆರೆಯ ಪಾಕಿಸ್ತಾನದಲ್ಲಿ ವರನೋರ್ವ ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಆಕಾಶದಿಂದಲೇ ನೇರವಾಗಿ ಮಾವನ ಮನೆ ಮೇಲೆ ಹಣದ ಮಳೆ ಸುರಿಸಿದ್ದಾನೆ. 

ಇದನ್ನೂ ಓದಿ: ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ  ಟ್ರಂಪ್, ಮಸ್ಕ್! ವೀಡಿಯೊ ಇಲ್ಲಿದೆ

ಪಾಕಿಸ್ತಾನಿ ವಧುವಿನ ಪೋಷಕರು ತಮ್ಮ ಅಳಿಯನ ಬಳಿ ವಿಶೇಷ ಬೇಡಿಕೆ ಇಟ್ಟಿದ್ದರು. ಮದುವೆ ದಿನದಂದು ತಮ್ಮ ಮನೆಯ ಮೇಲೆ ಹಣದ ಮಳೆ ಸುರಿಸುವಂತೆ ಕೇಳಿಕೊಂಡಿದ್ದಾರೆ. ಮಾವನ ಮಾತನ್ನ ಸಿರೀಯಸ್‌ ಆಗಿ ತೆಗೆದುಕೊಂಡ ವರ, ಅವರ ಈ ಆಸೆ ಈಡೇರಿಸಲು ಹಣದ ಮಳೆ ಸುರಿಸಲು ಖಾಸಗಿ ಹೆಲಿಕಾಪ್ಟರ್‌ ಬುಕ್ ಮಾಡಿದ್ದಾನೆ. ಬಳಿಕ ಹೆಲಿಕಾಪ್ಟರ್ ಮೂಲಕ ಮಾವನ ಮನೆಯ ಮೇಲೆ ಹಣದ ಸುರಿಮಳೆ ಸುರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದ್ದು, ಅನೇಕರ ಗಮನ ಸೆಳೆದಿದೆ. 

@amalqa_ ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ʼಪಾಕಿಸ್ತಾನದ ರೂಪಾಯಿ ಬೆಲೆ ಕಳೆದುಕೊಂಡಿದೆ, ಮಾವನ ಮನೆಯ ಮೇಲೆ ಅಳಿಯ ಸುರಿಸಿರೋ ಈ ಹಣದ ಮಳೆಗೆ ಯಾವುದೇ ಬೆಲೆಯಿಲ್ಲʼ ಅಂತಾ ಒಬ್ಬರು ಕಾಮೆಂಟ್‌ ಮಾಡಿದರೆ, ʼಈ ಕೂಡಲೇ IMFಗೆ ಈ ವಿಚಾರವನ್ನು ತಿಳಿಸಿ ಪಾಕಿಸ್ತಾನಕ್ಕೆ ಹಣದ ಸಹಾಯವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿಕೊಳ್ಳಬೇಕುʼ ಅಂತಾ ಕೆಲವರು ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಒಂದೂವರೆ ಮಿಲಿಯನ್ ಟನ್ ನೀರು, ಮಂಗಳ ಗ್ರಹದಲ್ಲಿ ಜೀವ ಪತ್ತೆ? ಏನು ಹೇಳುತ್ತೆ ಈ ಸಂಶೋಧನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News