World Cricket: ವಿಶ್ವ ಕ್ರಿಕೆಟ್ನಲ್ಲಿ ಲೀಗ್ಗಳಿಂದಾಗಿ ತಂತ್ರಜ್ಞಾನ ಮತ್ತು ನಿಯಮಗಳ ಹೊಸ ಪರಿಚಯ ಆಗುತ್ತಿದೆ.ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನ ಇತ್ತೀಚೆಗಷ್ಟೆ ಘೋಷಣೆ ಮಾಡಿದ್ದ ಬಿಸಿಸಿಐ ಈ ನಿಯಮವನ್ನ ಶೀಘ್ರದಲ್ಲೆ ಆರಂಭವಾಗಲಿರುವ ಐಪಿಲ್ ನಲ್ಲಿ ಅಳವಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ಈ ಒಂದು ವಿಚಾರವೇ ಅಭಿಮಾನಿಗಳನ್ನ ಹೆಚ್ಚು ಖುಷಿ ಪಡೆಸಿತ್ತು ಇದೀಗ ಅಭಿಮಾನಿಗಳ ಹೃದಯ ಗೆಲ್ಲಲು ಮತ್ತು ಹೆಚ್ಚು ಪ್ರೇಕ್ಷಕರನ್ನ ಸೆಳೇಯಲು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.
ವಿಶ್ವ ಕ್ರಿಕೆಟ್ ಸಾಧನೆಗೆ ಹೊಸ ದಾರಿಯನ್ನು ತೆರೆದಿರುವ ಅಸಾಧಾರಣ ತಂತ್ರಜ್ಞಾನ ಮತ್ತು ನಿಯಮಗಳು ಲೀಗ್ ಕ್ರಿಕೆಟ್ಗೆ ಹೊಸ ಉಡುಗೊರೆಗಳನ್ನು ತಂದಿವೆ. ಕನಸು ಕಾಣಿಸುವ ಲೀಗ್ ಕ್ರಿಕೆಟ್ ಮೂಲಕ ಬಂದ ಈ ಹೊಸ ತಂತ್ರಜ್ಞಾನವು ಕ್ರಿಕೆಟ್ ಪ್ರೇಕ್ಷಕರನ್ನು ಹೆಚ್ಚು ಉತ್ಸಾಹಿಗಳನ್ನಾಗಿ ಮಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ ನ 13ನೇ ಸೀಸನ್ ನಲ್ಲಿ ಮಾಡಲಾಗಿರುವ ಹೊಸ ಪ್ರಯತ್ನಗಳು ಆಕರ್ಷಣೀಯವಾಗಿವೆ.
ಇದನ್ನೂ ಓದಿ: "ಹಾರ್ಧಿಕ್ ಪಾಂಡ್ಯ" ಈ ಭಾರಿಯ ಐಪಿಎಲ್ ಆಡೋದು ಡೌಟ್ ! ಮುಂಬೈ ತಂಡದ ನಾಯಕನಿಗೆ ಇಂಜುರಿ ಸಮಸ್ಯೆ...
ಕ್ರಿಕೆಟ್ನಲ್ಲಿ ಬಳಸಲಾದ ವರ್ಣರಂಜಿತ ಎಲೆಕ್ಟ್ರಾ ಸ್ಟಂಪ್ಗಳನ್ನ ಅಭಿಮಾನಿಗಳನ್ನ ಆಕರ್ಷಿಸುತ್ತಿದೆ. ಮೊದಲ ಭಾರಿಗೆ ಈ ತಂತ್ರಜ್ಞಾನವನ್ನ ಇತ್ತೀಚೆಗೆ ನಡೆದ ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ ಬಳಸಿಕೊಳ್ಳಲಾಗಿತ್ತು.
ಅದೇನೆಂದರೆ, ಪುರುಷರ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯಗಳಿಗೆ ಈ ತಂತ್ರಜ್ಞಾನ ಅನ್ವಯವಾಗಲಿದ್ದು. ಇಂಗ್ಲೆಂಡ್ನ ಆಟಗಾರರಾದ ಮೈಕಲ್ ವಾನ್ ಮತ್ತು ಮಾರ್ಕ್ ವಾ ಅವರಿಗೆ ಸ್ಟಂಪ್ಗಳ ಬಳಕೆಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಎಲೈಟ್ ಮಹಿಳಾ ಬಾಕ್ಸಿಂಗ್ 16 ರ ಸುತ್ತಿಗೆ ಪ್ರವೇಶ ಪಡೆದ ಹಾಲಿ ಚಾಂಪಿಯನ್ ! "ಸವೀಟಿ ಬೂರಾ"
ಈ ವರ್ಣರಂಜಿತ ಎಲೆಕ್ಟ್ರಾ ಸ್ಟಂಪ್ಗಳು ವಿವಿಧ ಕಾರ್ಯಗಳನ್ನ ನಿರ್ವಹಿಸುತ್ತವೆ ಆಟಗಾರ ಔಟ್ ಅದರೆ ಒಂದು ಬಣ್ಣ,ಬೌಂಡರಿ ಭಾರಿಸಿದರೆ ಮತ್ತೊಂದು ಬಣ್ಣ, ಸಿಕ್ಸರ್ ಸಿಡಿಸಿದರೆ ಒಂದು ಬಣ್ಣ ಮತ್ತು ನೋ ಬಾಲ್ ಗೆ ಒಂದು ಬಣ್ಣ ಎಂಬಂತೆ ಬಗೆ ಬಗೆಯ ಕಾರ್ಯ ನಿರ್ವಹಿಸುತ್ತವೆ.
ಈ ತಂತ್ರಜ್ಞಾನವು ಹೊಸದಾಗಿ ಇದ್ದರು ವಾಡಿಕೆಯಲ್ಲಿದ್ದಂತೆ ಎಲ್ಲಾ ಪಂದ್ಯಗಳಿಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.