Yashasvi jaiswal: 7 ಟೆಸ್ಟ್‌ಗಳ ಅಪೂರ್ವ ದಾಖಲೆಗಳಿಂದ ಕ್ರಿಕೆಟ್ ದಂತಕಥೆಗಳ ಪಟ್ಟಿಯಲ್ಲಿ‌ ಸ್ಥಾನ ಪಡೆದ ಸ್ಟಾರ್ ಬ್ಯಾಟ್ಸ್‌ಮನ್ ಈತ!

Yashasvi jaiswal Records: ಟೀಂ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಇದುವರೆಗೆ ಆಡಿದ್ದು ಕೇವಲ 7 ಟೆಸ್ಟ್ ಪಂದ್ಯಗಳನ್ನು ಮಾತ್ರ.. ಅದರಲ್ಲೇ ಅಪೂರ್ವ ದಾಖಲೆಗಳಿಂದ ಕ್ರಿಕೆಟ್ ದಂತಕಥೆಗಳ ಪಟ್ಟಿಯಲ್ಲಿ‌ ಸ್ಥಾನ ಪಡೆದಿದ್ದಾರೆ..

Written by - Savita M B | Last Updated : Feb 26, 2024, 10:28 AM IST
  • ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್
  • ಯಶಸ್ವಿ ಜೈಸ್ವಾಲ್ ತಾವು ಆಡಿದ 7 ಟೆಸ್ಟ್ ಪಂದ್ಯಗಳಲ್ಲಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ
  • ಟೆಸ್ಟ್ ವೃತ್ತಿಜೀವನದ ಆರಂಭದಲ್ಲಿಯೇ ಇಂತದ್ದೊಂದು ದೊಡ್ಡ ಸಾಧನೆ ಮಾಡಿದ ಯಶಸ್ವಿ
Yashasvi jaiswal: 7 ಟೆಸ್ಟ್‌ಗಳ ಅಪೂರ್ವ ದಾಖಲೆಗಳಿಂದ ಕ್ರಿಕೆಟ್ ದಂತಕಥೆಗಳ ಪಟ್ಟಿಯಲ್ಲಿ‌ ಸ್ಥಾನ ಪಡೆದ ಸ್ಟಾರ್ ಬ್ಯಾಟ್ಸ್‌ಮನ್ ಈತ!   title=

Yashasvi jaiswal: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ತಾವು ಆಡಿದ  7 ಟೆಸ್ಟ್ ಪಂದ್ಯಗಳಲ್ಲಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದು ಮಾತ್ರವಲ್ಲದೆ ಎರಡು ದ್ವಿಶತಕ ಬಾರಿಸಿದ್ದಾರೆ.. ಇವರ ಬ್ಯಾಟಿಂಗ್‌ ನೋಡಿ ಆಂಗ್ಲರು ಸಹ ಬೆಚ್ಚಿ ಬಿದ್ದಿದ್ದರು.. 

ಟೆಸ್ಟ್ ವೃತ್ತಿಜೀವನದ ಆರಂಭದಲ್ಲಿಯೇ ಇಂತದ್ದೊಂದು ದೊಡ್ಡ ಸಾಧನೆ ಮಾಡಿದ ಯಶಸ್ವಿ ಜೈಸ್ವಾಲ್ ಅವರ ಹಸೆರು ಕ್ರಿಕೆಟ್ ದಂತಕಥೆಗಳ ಪಟ್ಟಿಯಲ್ಲಿ ದಿಗ್ಗಜರೊಂದಿಗೆ ಸೇರಿಕೊಂಡಿದೆ.. ಹಾಗಾದರೆ ಈ ದಾಖಲೆಯ ಪಟ್ಟಿಯಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಇದೀಗ ತಿಳಿಯೋಣ..

ಇದನ್ನೂ ಓದಿ: Urvashi Rautela: ಬರ್ತಡೇಯಂದು 24 ಕ್ಯಾರೆಟ್‌ ಗೋಲ್ಡ್‌ ಕೇಕ್‌ ಕಟ್‌ ಮಾಡಿದ ಐರಾವತ ಚೆಲುವೆ!

ಟಾಪ್‌ 5 ಪಟ್ಟಿಯಲ್ಲಿ.. ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ (1196 - 1000+ ರನ್), ಟೀಂ ಇಂಡಿಯಾದ ಸುನಿಲ್ ಗವಾಸ್ಕರ್ (918), ವೆಸ್ಟ್ ಇಂಡೀಸ್‌ನ ಎವರ್ಟನ್ ವೀಕ್ಸ್ (978), ಪಾಕಿಸ್ತಾನದ ಸೌದ್ ಶಕೀಲ್ (875), ಟೀಂ ಇಂಡಿಯಾದ ಯಶಸ್ವಿ ಜೈಸ್ವಾಲ್ (861) ಇದ್ದಾರೆ.. 

ಕನಿಷ್ಠ 800 ರನ್ ಗಳಿಸಿದವರ ದಾಖಲೆಗಳನ್ನು ನೋಡುವುದಾದರೇ ಟಾಪ್‌ 5ನಲ್ಲಿ  ವೆಸ್ಟ್ ಇಂಡೀಸ್‌ನ ಫ್ರಾಂಕ್ ವೊರೆಲ್ (104.13), ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ (99.67), ವೆಸ್ಟ್ ಇಂಡೀಸ್‌ನ ಎವರ್ಟನ್ ವೀಕ್ಸ್ (87.80), ಸೌದ್ ಶಕೀಲ್ (87.50), ಸುನಿಲ್ ಗವಾಸ್ಕರ್ (83.45).. ಈ ಟಾಪ್ ಸ್ಕೋರರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ 71.45 ಸರಾಸರಿ ದಾಖಲಿಸಿ ಈ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ

ಇದನ್ನೂ ಓದಿ: ಇದು ಒಂದೇ ಒಂದು ಕಂಬಗಳಿಲ್ಲದ ಸೇತುವೆ: ಈ ಬ್ರಿಡ್ಜ್ ರಚನೆಯಾಗುತ್ತಿರೋದು ದೇಶದಲ್ಲೇ ಮೊದಲು!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News