IND Vs ENG: “ಬ್ಯಾಟ್ ಮಾತನಾಡಲು ಬಿಡಿ”- ಶುಭ್ಮನ್ ಗಿಲ್ ಶತಕದಿಂದ ಹರ್ಷಗೊಂಡ ಯುವರಾಜ್ ಸಿಂಗ್ ಹೇಳಿಕೆ

India vs England 2nd Test: ಕಳೆದ ಹಲವು ಟೆಸ್ಟ್ ಇನ್ನಿಂಗ್ಸ್‌’ಗಳಲ್ಲಿ ಗಿಲ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಇದೇ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಜೊತೆಗೆ ಗಿಲ್ ಅವರನ್ನು ತಂಡದಿಂದ ಕೈಬಿಡುವಂತೆ ಅನೇಕರು ಒತ್ತಾಯಿಸಿದ್ದರು.

Written by - Bhavishya Shetty | Last Updated : Feb 4, 2024, 09:53 PM IST
    • ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ
    • ಎರಡನೇ ಇನ್ನಿಂಗ್ಸ್‌’ನಲ್ಲಿ ಶುಭ್ಮನ್ ಗಿಲ್ ಅದ್ಭುತ ಶತಕ ಗಳಿಸಿದರು.
    • ಹಲವು ಟೆಸ್ಟ್ ಇನ್ನಿಂಗ್ಸ್‌’ಗಳಲ್ಲಿ ಗಿಲ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು
IND Vs ENG: “ಬ್ಯಾಟ್ ಮಾತನಾಡಲು ಬಿಡಿ”- ಶುಭ್ಮನ್ ಗಿಲ್ ಶತಕದಿಂದ ಹರ್ಷಗೊಂಡ ಯುವರಾಜ್ ಸಿಂಗ್ ಹೇಳಿಕೆ title=
yuvraj singh statement about shubman gill

India vs England 2nd Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌’ನಲ್ಲಿ ಶುಭ್ಮನ್ ಗಿಲ್ ಅದ್ಭುತ ಶತಕ ಗಳಿಸಿದರು. ಅಂದಹಾಗೆ ಈ ಶತಕದ ಮೂಲಕ ಗಿಲ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ: ನಿತ್ಯ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯಿರಿ: ಈ ರೋಗಗಳು ದೂರವಾಗುವ ಜೊತೆ ಸಿಗುತ್ತೆ ಪ್ರಯೋಜನಗಳು

ಕಳೆದ ಹಲವು ಟೆಸ್ಟ್ ಇನ್ನಿಂಗ್ಸ್‌’ಗಳಲ್ಲಿ ಗಿಲ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಇದೇ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಜೊತೆಗೆ ಗಿಲ್ ಅವರನ್ನು ತಂಡದಿಂದ ಕೈಬಿಡುವಂತೆ ಅನೇಕರು ಒತ್ತಾಯಿಸಿದ್ದರು. ಆದರೆ ಇದೀಗ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌’ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ಇನ್ನು ಟೀಂ ಇಂಡಿಯಾದ ಮಾಜಿ ಆಲ್‌ ರೌಂಡರ್ ಯುವರಾಜ್ ಸಿಂಗ್ ಕೂಡ ಗಿಲ್ ಅವರ ಈ ಅದ್ಭುತ ಇನ್ನಿಂಗ್ಸ್‌’ನಿಂದ ಸಂತಸವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಿರುವ ಯುವಿ, “ಮತ್ತೊಮ್ಮೆ ಅವರು ಫಾರ್ಮ್’ಗೆ ಬಂದಿದ್ದಾರೆ. ಉತ್ತಮ ಸಮತೋಲನದ ಇನ್ನಿಂಗ್ಸ್ ಆಡಿದರು. ಮೂರು ಅಂಕಿಗಳ ಗುರುತು ನೋಡಲು ಸಂತೋಷವಾಗಿದೆ. ಗಿಲ್ ಚೆನ್ನಾಗಿ ಆಡಿದ್ದಾನೆ. ಆತನ ಬ್ಯಾಟ್ ಮಾತನಾಡಲು ಬಿಡಿ” ಎಂದು ಬರೆದುಕೊಂಡಿದ್ದಾರೆ

ಇದನ್ನೂ ಓದಿ:  Irfan Pathan: ಮದುವೆಯಾಗಿ 8 ವರ್ಷಗಳ ಬಳಿಕ ಪತ್ನಿ ಮುಖ ಕಾಣುವ ಫೋಟೋ ಹಂಚಿಕೊಂಡ ಇರ್ಫಾನ್ ಪಠಾಣ್!

ವಿಶಾಖಪಟ್ಟಣಂ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಬ್ಯಾಟ್ ಮಾಡಿ 255 ರನ್ ಗಳಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ 104 ರನ್‌’ಗಳ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ಭಾರತ ಇಂಗ್ಲೆಂಡ್ ವಿರುದ್ಧ 398 ರನ್‌’ಗಳ ಮುನ್ನಡೆ ಸಾಧಿಸಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News