WTC ಮುಗಿದು 24 ಗಂಟೆಯಾಗುವಷ್ಟರಲ್ಲಿ Team Indiaಗೆ ಬಿತ್ತು ದಂಡದ ಬಿಸಿ! 11 ಆಟಗಾರರ ವಿರುದ್ಧವೂ ಕ್ರಮ: ಕಾರಣ?

team India fined for slow over rate: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ ಪಂದ್ಯದ ಕೊನೆಯ ದಿನದ ಮುಕ್ತಾಯದ ನಂತರ ಭಾರತ ತಂಡವು ತಮ್ಮ ನಿಧಾನಗತಿಯ ಓವರ್‌ರೇಟ್‌ ಗಾಗಿ ಸಂಪೂರ್ಣ ಪಂದ್ಯದ ಶುಲ್ಕವನ್ನು ಕಳೆದುಕೊಂಡಿದ್ದು, ಆಸ್ಟ್ರೇಲಿಯಾ ಕೂಡ ತಮ್ಮ ಪಂದ್ಯ ಶುಲ್ಕದ ಶೇಕಡಾ 80 ರಷ್ಟು ಕಳೆದುಕೊಂಡಿದೆ.

Written by - Bhavishya Shetty | Last Updated : Jun 12, 2023, 01:18 PM IST
    • ಭಾರತ ತಂಡವು ತಮ್ಮ ನಿಧಾನಗತಿಯ ಓವರ್‌ರೇಟ್‌ ಗಾಗಿ ಸಂಪೂರ್ಣ ಪಂದ್ಯದ ಶುಲ್ಕವನ್ನು ಕಳೆದುಕೊಂಡಿದೆ
    • ಆಸ್ಟ್ರೇಲಿಯಾ ಕೂಡ ತಮ್ಮ ಪಂದ್ಯ ಶುಲ್ಕದ ಶೇಕಡಾ 80 ರಷ್ಟು ಕಳೆದುಕೊಂಡಿದೆ.
    • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 469 ರನ್ ಗಳಿಸಿದ್ದರೆ, ಭಾರತ ತಂಡ 296 ರನ್ ಗಳಿಸಲಷ್ಟೇ ಶಕ್ತವಾಗಿತ್ತು
WTC ಮುಗಿದು 24 ಗಂಟೆಯಾಗುವಷ್ಟರಲ್ಲಿ Team Indiaಗೆ ಬಿತ್ತು ದಂಡದ ಬಿಸಿ! 11 ಆಟಗಾರರ ವಿರುದ್ಧವೂ ಕ್ರಮ: ಕಾರಣ? title=
Team India

team India fined for slow over rate: ಐದು ದಿನಗಳ ಕಾಲ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 209 ರನ್ ಗಳಿಂದ ಸೋಲನುಭವಿಸಬೇಕಾಯಿತು. ಭಾರತ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಈ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆದರೆ ಈ ಪಂದ್ಯದಲ್ಲಿ ನಡೆದ ತಪ್ಪಿನ ಕಾರಣದಿಂದ ಐಸಿಸಿ ಈ ಎರಡೂ ತಂಡಗಳ ಮೇಲೆ ದೊಡ್ಡ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್’ನಲ್ಲಿ 3 ದ್ವಿಶತಕ ಬಾರಿಸಿದ ಈ ಆಟಗಾರನ ವೃತ್ತಿಬದುಕು WTC Final ಜೊತೆ ಅಂತ್ಯ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ ಪಂದ್ಯದ ಕೊನೆಯ ದಿನದ ಮುಕ್ತಾಯದ ನಂತರ ಭಾರತ ತಂಡವು ತಮ್ಮ ನಿಧಾನಗತಿಯ ಓವರ್‌ರೇಟ್‌ ಗಾಗಿ ಸಂಪೂರ್ಣ ಪಂದ್ಯದ ಶುಲ್ಕವನ್ನು ಕಳೆದುಕೊಂಡಿದ್ದು, ಆಸ್ಟ್ರೇಲಿಯಾ ಕೂಡ ತಮ್ಮ ಪಂದ್ಯ ಶುಲ್ಕದ ಶೇಕಡಾ 80 ರಷ್ಟು ಕಳೆದುಕೊಂಡಿದೆ.

ಭಾರತಕ್ಕೆ ಗುರಿಗಿಂತ ಐದು ಓವರ್‌ ಗಳ ಕೊರತೆಯಿದೆ ಎಂದು ಹೇಳಲಾಗಿದ್ದು, ಆಸ್ಟ್ರೇಲಿಯಾಕ್ಕೆ ನಾಲ್ಕು ಓವರ್‌ ಗಳ ಕೊರತೆ ಕಂಡುಬಂದಿದೆ. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ICC ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಆಟಗಾರರು ನಿಗದಿತ ಸಮಯದಲ್ಲಿ ಬೌಲ್ ಮಾಡಲು ವಿಫಲವಾದ ಪ್ರತಿ ಓವರ್‌ ಗೆ ಅವರ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡವನ್ನು ವಿಧಿಸಲಾಗುತ್ತದೆ.

ಇದನ್ನೂ ಓದಿ: ಧೋನಿಯಂತೇ ವಿಕೆಟ್ ಕೀಪಿಂಗ್… DRS ತೆಗೆದುಕೊಳ್ಳವಲ್ಲೂ ಮಾಹಿಗೆ ಸರಿಸಮಾನ! ಇನ್ಮುಂದೆ ಈ ಆಟಗಾರ ODIಗೆ ಫಿಕ್ಸ್!

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 469 ರನ್ ಗಳಿಸಿದ್ದರೆ, ಭಾರತ ತಂಡ 296 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಎಂಟು ವಿಕೆಟ್‌ಗಳಿಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು ಮತ್ತು ಭಾರತದ ಮುಂದೆ 444 ರನ್‌ ಗಳ ಕಠಿಣ ಗುರಿಯನ್ನು ನೀಡಿತು. ಭಾರತದ ಎರಡನೇ ಇನ್ನಿಂಗ್ಸ್ ಅನ್ನು 234 ರನ್‌ ಗಳಿಗೆ ಇಳಿಸಲಾಯಿತು ಮತ್ತು ಆಸ್ಟ್ರೇಲಿಯಾ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿತು. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಫೈನಲ್‌ ನಲ್ಲಿ ಟೀಮ್ ಇಂಡಿಯಾದ ಸತತ ಎರಡನೇ ಸೋಲು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News