MS Dhoni India's Head Coach: ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ (The next coach of the Indian cricket team) ಯಾರಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಕೂಲ್ ಕ್ಯಾಪ್ಟನ್ ಹೆಸರು ಕೇಳಿಬರುತ್ತಿದೆ. ರಾಹುಲ್ ದ್ರಾವಿಡ್ ಬದಲಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ (Head Coach of Team India) ಆಯ್ಕೆಯಲ್ಲಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯ ಬಗ್ಗೆ ಬಿಸಿಸಿಐ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ವಾಸ್ತವವಾಗಿ, ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ (CSK coach Stephen Fleming) ಅವರನ್ನು ಪರಿಗಣಿಸಲಾಗುತ್ತಿದೆ. ಆದರೆ, ಸ್ಟೀಫನ್ ಫ್ಲೆಮಿಂಗ್ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ದು 2027 ರವರೆಗೆ ಅವರು ಯಾವುದೇ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಸ್ಟೀಫನ್ ಫ್ಲೆಮಿಂಗ್ ಈ ಕುರಿತಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಬದಲಿಗೆ ಒಪ್ಪಂದದ ಅವಧಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಟೀಫನ್ ಫ್ಲೆಮಿಂಗ್ (Stephen Fleming) ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ (Chennai Super Kings) ಮುಖ್ಯ ತರಬೇತುದಾರರಾಗಿರುವುದರ ಜೊತೆಗೆ, ಮೇಜರ್ ಲೀಗ್ ಕ್ರಿಕೆಟ್ನಲ್ಲಿ (ಯುಎಸ್ಎ) ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಎಸ್ಎ 20 (ದಕ್ಷಿಣ ಆಫ್ರಿಕಾ) ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ನ ಉಸ್ತುವಾರಿ ವಹಿಸಿದ್ದಾರೆ. ಅಷ್ಟೇ ಅಲ್ಲ, ಅವರು ಸದರ್ನ್ ಬ್ರೇವ್ ದಿ ಹಂಡ್ರೆಡ್ನ ಮುಖ್ಯ ಕೋಚ್ ಕೂಡ ಆಗಿದ್ದಾರೆ.
ಇದನ್ನೂ ಓದಿ- ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು
ಗಮನಾರ್ಹ ವಿಷಯವೆಂದರೆ, ಮೂರು ವಿಭಿನ್ನ ಲೀಗ್ಗಳಲ್ಲಿ ಮೂರು ವಿಭಿನ್ನ ಫ್ರಾಂಚೈಸಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಫ್ಲೆಮಿಂಗ್ ನ್ಯೂಜಿಲೆಂಡ್ನಲ್ಲಿ ತನ್ನ ಕುಟುಂಬದೊಂದಿಗೆ ಇರಲು ಸಾಕಷ್ಟು ಸಮಯವನ್ನು ಪಡೆಯುತ್ತಾರೆ. ಆದರೆ, ಭಾರತೀಯ ಮುಖ್ಯ ಕೋಚ್ ಸ್ಥಾನವನ್ನು ಒಪ್ಪಿಕೊಂಡರೆ ವರ್ಷಪೂರ್ತಿ ಬ್ಯುಸಿ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿರುತ್ತದೆ. ಮೂಲಗಳ ಪ್ರಕಾರ, ಫ್ಲೆಮಿಂಗ್ ಐಪಿಎಲ್ನ ಆರಂಭಿಕ ಹಂತದಲ್ಲಿ ಬಿಸಿಸಿಐ ಜೊತೆಗಿನ ಆರಂಭಿಕ ಚರ್ಚೆಗಳಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಮೊದಲೇ ತಿಳಿಸಿದಂತೆ ಸ್ಟೀಫನ್ ಫ್ಲೆಮಿಂಗ್ (Stephen Fleming) ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲು ಸಾಧಯ್ವೆ ಇಲ್ಲ ಎಂದೇನು ಹೇಳಿಲ್ಲ. ಆದರೆ, ಒಪ್ಪಂದದ ಅವಧಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವುದು ಅಸಾಮಾನ್ಯವೇನಲ್ಲ. ಮೊದಲಿಗೆ ರಾಹುಲ್ ದ್ರಾವಿಡ್ ಸಹ ಟೀಂ ಇಂಡಿಯಾ ಮುಖ್ಯ ಕೋಚ್ ಆಗಲು ಉತ್ಸುಕರಾಗಿರಲಿಲ್ಲ. ಬಳಿಕ ಅವರನ್ನು ಮನವೊಲಿಸಲಾಯಿತು. ಫ್ಲೆಮಿಂಗ್ನ ವಿಷಯದಲ್ಲೂ ಅಂತಹುದೇ ಏನಾದರೂ ಸಂಭವಿಸಬಹುದು. ಈ ಕೆಲಸವನ್ನು ಮಾಡಲು ಎಂ.ಎಸ್. ಧೋನಿಗಿಂತ (M.S. Dhoni) ಉತ್ತಮರು ಯಾರೂ ಇಲ್ಲ ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ- Chris Gayle: ಕ್ರಿಸ್ ಗೇಲ್ಗೆ ಐಪಿಎಲ್ಗೆ ಮರಳಿ ಬರಲು ಕೇಳಿದ ಕೊಹ್ಲಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?
ಸಿಎಸ್ಕೆಯಲ್ಲಿ ಅನುಭವಿ ಆಟಗಾರರೊಂದಿಗೆ ಉದಯೋನ್ಮುಖ ಯುವಕರನ್ನು ನಿಭಾಯಿಸುವಲ್ಲಿ ಸ್ಟೀಫನ್ ಫ್ಲೆಮಿಂಗ್ ಅವರ ಪಾತ್ರ ಗಮನಾರ್ಹವಾಗಿದೆ. ಸ್ಟೀಫನ್ ಫ್ಲೆಮಿಂಗ್ ಅವರ ಅನುಭವ, ಯುದ್ಧತಂತ್ರದ ಕುಶಾಗ್ರಮತಿ ಮತ್ತು ಮಾನವ-ನಿರ್ವಹಣಾ ಕೌಶಲ್ಯಗಳು ಅವರನ್ನು ಈ ಅವಧಿಯಲ್ಲಿ ನ್ಯಾವಿಗೇಟ್ ಮಾಡಲು ಸೂಕ್ತ ಅಭ್ಯರ್ಥಿಯನ್ನಾಗಿ ಮಾಡುತ್ತವೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಪಾತ್ರವನ್ನು ಒಪ್ಪಿಕೊಳ್ಳಲು ಫ್ಲೆಮಿಂಗ್ ಅವರನ್ನು ಮನವೊಲಿಸುವಲ್ಲಿ ಎಂ. ಎಸ್. ಧೋನಿಯ ಪ್ರಭಾವವು ನಿರ್ಣಾಯಕವಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.