ವೃತ್ತಿಜೀವನದಲ್ಲಿ ಕೇವಲ 2 ಪಂದ್ಯವನ್ನಾಡಿದ ಕ್ರಿಕೆಟಿಗನಿಗೆ ಏಷ್ಯಾಕಪ್’ನಲ್ಲಿ ಅವಕಾಶ ಕೊಟ್ಟ ಆಯ್ಕೆ ಸಮಿತಿ!

Sri Lanka Team for Asia Cup 2023: ಆಗಸ್ಟ್ 29ರಂದು ಶ್ರೀಲಂಕಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಇನ್ನು ಈ ತಂಡದಲ್ಲಿ, ವೃತ್ತಿ ಜೀವನದಲ್ಲಿ ಇದುವರೆಗೆ ಕೇವಲ 2 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಓರ್ವ ಆಟಗಾರನಿಗೆ ಅವಕಾಶ ಸಿಕ್ಕಿದೆ.

Written by - Bhavishya Shetty | Last Updated : Aug 30, 2023, 07:37 AM IST
    • ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಇಂದಿನಿಂದ ಆರಂಭ
    • 2 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಓರ್ವ ಆಟಗಾರನಿಗೆ ಅವಕಾಶ
    • ಏಷ್ಯಾಕಪ್‌ಗೆ ಶ್ರೀಲಂಕಾ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ
ವೃತ್ತಿಜೀವನದಲ್ಲಿ ಕೇವಲ 2 ಪಂದ್ಯವನ್ನಾಡಿದ ಕ್ರಿಕೆಟಿಗನಿಗೆ ಏಷ್ಯಾಕಪ್’ನಲ್ಲಿ ಅವಕಾಶ ಕೊಟ್ಟ ಆಯ್ಕೆ ಸಮಿತಿ!  title=
Sri Lanka squad for Asia Cup 2023

Team Announced for Asia Cup 2023: ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಇಂದು ಅಂದರೆ ಆಗಸ್ಟ್ 30 ರಿಂದ ಆರಂಭವಾಗಲಿದೆ. ಈ ಕಾಂಟಿನೆಂಟಲ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯವು ಪಾಕಿಸ್ತಾನ ಮತ್ತು ನೇಪಾಳ (PAK vs NEP) ನಡುವೆ ನಡೆಯಲಿದೆ. ಕಳೆದ ದಿನ ಅಂದರೆ ಆಗಸ್ಟ್ 29ರಂದು ಶ್ರೀಲಂಕಾ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಇನ್ನು ಈ ತಂಡದಲ್ಲಿ, ವೃತ್ತಿ ಜೀವನದಲ್ಲಿ ಇದುವರೆಗೆ ಕೇವಲ 2 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಓರ್ವ ಆಟಗಾರನಿಗೆ ಅವಕಾಶ ಸಿಕ್ಕಿದೆ.

ಏಷ್ಯಾಕಪ್‌ಗೆ ಶ್ರೀಲಂಕಾ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ತಂಡದ ನಾಯಕತ್ವವನ್ನು ದಸುನ್ ಶನಕ ನಿರ್ವಹಿಸಲಿದ್ದಾರೆ. ಈ ತಂಡದಲ್ಲಿ ಕುಸಾಲ್ ಪೆರೆರಾ ಕೂಡ ಇದ್ದಾರೆ. ಇವರು ಇತ್ತೀಚೆಗೆ ಕೋವಿಡ್ -19ಗೆ ತುತ್ತಾಗಿದ್ದರು.  ಇದೀಗ ಸಂಪೂರ್ಣ ಚೇತರಿಸಿಕೊಂಡ ಬಳಿಕ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದನ್ನೂ ಓದಿ: ಇಂದು ಶ್ರಾವಣ ಹುಣ್ಣಿಮೆ-ಈ ರಾಶಿಯ ಮೇಲಿರಲಿದೆ ಗಣಪತಿ ಅನುಗ್ರಹ: ಚಿನ್ನ-ಹಣ ಹುಡುಕಿ ಬರುತ್ತೆ

ಶ್ರೀಲಂಕಾ ಕೊನೆಯ ಕ್ಷಣದಲ್ಲಿ ಹಿನ್ನಡೆ ಅನುಭವಿಸಿದ್ದು, ಒಂದಲ್ಲ 4 ಆಟಗಾರರು ಬೇರೆ ಬೇರೆ ಕಾರಣಗಳಿಂದ ಹೊರಗುಳಿದಿದ್ದರು. ವನಿಂದು ಹಸರಂಗ, ದುಸ್ಮಂತ ಚಮೀರ, ಲಹಿರು ಕುಮಾರ ಮತ್ತು ದಿಲ್ಶನ್ ಮಧುಶಂಕ ಅವರನ್ನು ಏಷ್ಯಾಕಪ್‌ ಶ್ರೀಲಂಕಾ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಅಷ್ಟೇ ಅಲ್ಲ ತಂಡದ ಪ್ರಮುಖ ಬೌಲರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ವೇಗಿಗಳಾದ ಪ್ರಮೋದ್ ಮದುಶನ್ ಮತ್ತು ಬಿನೂರ ಫೆರ್ನಾಂಡೋ ತಂಡದ ಭಾಗವಾಗಿದ್ದು, ಮುಂಚೂಣಿ ವೇಗಿಗಳಾದ ಚಮೀರ ಮತ್ತು ಕುಮಾರ ಅವರ ಅನುಪಸ್ಥಿತಿಯನ್ನು ತುಂಬಿದ್ದಾರೆ.

2 ಪಂದ್ಯಗಳನ್ನು ಆಡುವ ಅವಕಾಶ

ಈ ಮಧ್ಯೆ ಶ್ರೀಲಂಕಾ ತಂಡದಲ್ಲಿ ಓರ್ವ ಆಟಗಾರನಿಗೆ ಅವಕಾಶ ನೀಡಲಾಗಿದೆ. ಈತ ಇದುವರೆಗೆ ಕೇವಲ 2 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾನೆ. ಹಸರಂಗ ಗಾಯಗೊಂಡಿರುವ ಕಾರಣ ಲೆಗ್ ಸ್ಪಿನ್ ಆಲ್ರೌಂಡರ್ ದುಶನ್ ಹೇಮಂತ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ದುಶನ್ ಇದುವರೆಗೆ 2 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಸಂದರ್ಭದಲ್ಲಿ 22 ರನ್ ನೀಡಿ ಕೇವಲ 2 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ ಅವರು 44 ಪಂದ್ಯಗಳಲ್ಲಿ 1993 ರನ್ ಗಳಿಸಿದರೆ, 98 ವಿಕೆಟ್‌’ಗಳನ್ನು ಪಡೆದಿದ್ದಾರೆ. ಕಸುನ್ ರಜಿತಾ ಮತ್ತು ಮತಿಶ ಪತಿರಾನ ತಂಡದ ಇತರ ವೇಗದ ಬೌಲರ್‌’ಗಳು. ಮಹೇಶ್ ಥಿಕ್ಷಣ ಮತ್ತು ದುನಿತ್ ವೆಲಾಜ್ ತಂಡದಲ್ಲಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾ ಏಷ್ಯಾಕಪ್‌’ನ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಗುರುವಾರ, ಆಗಸ್ಟ್ 31 ರಂದು ಪಲ್ಲೆಕೆಲೆಯಲ್ಲಿ ಆಡಬೇಕಾಗಿದೆ. ಇದರ ನಂತರ, ಸೆಪ್ಟೆಂಬರ್ 5 ರಂದು ಲಾಹೋರ್‌’ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯವನ್ನು ಆಡಬೇಕಾಗಿದೆ. ಶ್ರೀಲಂಕಾ ಆಟಗಾರರಿಗೂ 3 ದಿನಗಳ ವಿರಾಮ ಸಿಗಲಿದೆ. ಈ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಇದನ್ನೂ ಓದಿ: ಶ್ರಾವಣ ಹುಣ್ಣಿಮೆಯಂದು ಈ ಮಂತ್ರ ಪಠಿಸಿದರೆ ಸಮೃದ್ಧಿ ಜೊತೆ ಅಖಂಡ ವರವನ್ನೇ ಕರುಣಿಸುವರು ತಾಯಿ ಮಹಾಲಕ್ಷ್ಮೀ

ಏಷ್ಯಾಕಪ್‌’ಗೆ ಶ್ರೀಲಂಕಾ ತಂಡ:

ದಸುನ್ ಶನಕ (ನಾಯಕ), ಪತುಂ ನಿಸ್ಸಾಂಕ, ದಿಮುತ್ ಕರುಣರತ್ನೆ, ಕುಸಾಲ್ ಪೆರೆರಾ, ಕುಸಾಲ್ ಮೆಂಡಿಸ್, ಚರಿತ್ ಅಸ್ಲಂಕಾ, ಧನಂಜಯ್ ಡಿ ಸಿಲ್ವಾ, ಸದೀರ ಸಮರವಿಕ್ರಮ, ಮಹಿಷ್ ತಿಕ್ಷಣ, ದುನಿತ್ ವೆಲಗೆ, ಮತಿಶ ಪತಿರಣ, ಕಸುನ್ ರಜಿತ, ದುಶಾನ್ ರಜಿತ, ಬಿನೂರ ಫೆರ್ನಾಂಡೋ ಮತ್ತು ಪ್ರಮೋದ್ ಮದುಶನ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News