India vs Zimbabwe: ಟೀಂ ಇಂಡಿಯಾದಿಂದ ಹೊರಗುಳಿದ ಆರು ಆಟಗಾರರು..?ಇವರಿಗೆ ಅವಕಾಶ ಯಾಕೆ ಕೊಡುತ್ತಿಲ್ಲ ಎಂದು ಫ್ಯಾನ್ಸ್‌ ಪ್ರಶ್ನೆ..!

India vs Zimbabwe: ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದ ಪ್ಲಲೇಯಿಂಗ್‌ XI ಪಟ್ಟಿಯನ್ನು ಬಿಸಿಸಿಐ ಈಗಾಗಲೇ ರಿಲೀಸ್‌ ಮಾಡಿದೆ. ಆದರೆ, ಟೀಂ ಇಂಡಿಯಾದಲ್ಲಿ ಈ ಆರು ಆಟಗಾರರನ್ನು ಮರೆತೇ ಬಿಟ್ಟಿದ್ದಾರೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಹಾಗಾದರೆ ಆ ಆರು ಆಟಗಾರು ಯಾರು? ತಿಳಿಯಲು ಮುಂದೆ ಓದಿ...   

Written by - Zee Kannada News Desk | Last Updated : Jul 3, 2024, 09:55 AM IST
  • ಜಿಂಬಾಬ್ವೆ ಪ್ರವಾಸಕ್ಕೆ ತೆರಳಿರುವ ತಂಡದಲ್ಲಿ ಇರಬಹುದೆಂದು ನಿರೀಕ್ಷಿಸಲಾಗಿದ್ದ ಆರು ಆಟಗಾರರು ಪತ್ತೆಗಿಲ್ಲ.
  • ಟಿ20 ವಿಶ್ವಕಪ್ ವೇಳೆ ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಗಾರರು ತಂಡವನ್ನು ಆಯ್ಕೆ ಮಾಡಿದ್ದಾರೆ .
  • ಈ ಮೂವರ ಸ್ಥಾನಕ್ಕೆ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ.
India vs Zimbabwe: ಟೀಂ ಇಂಡಿಯಾದಿಂದ ಹೊರಗುಳಿದ ಆರು ಆಟಗಾರರು..?ಇವರಿಗೆ ಅವಕಾಶ ಯಾಕೆ ಕೊಡುತ್ತಿಲ್ಲ ಎಂದು ಫ್ಯಾನ್ಸ್‌ ಪ್ರಶ್ನೆ..! title=

India vs Zimbabwe: ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದ ಪ್ಲಲೇಯಿಂಗ್‌ XI ಪಟ್ಟಿಯನ್ನು ಬಿಸಿಸಿಐ ಈಗಾಗಲೇ ರಿಲೀಸ್‌ ಮಾಡಿದೆ. ಆದರೆ, ಟೀಂ ಇಂಡಿಯಾದಲ್ಲಿ ಈ ಆರು ಆಟಗಾರರನ್ನು ಮರೆತೇ ಬಿಟ್ಟಿದ್ದಾರೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಹಾಗಾದರೆ ಆ ಆರು ಆಟಗಾರು ಯಾರು? ತಿಳಿಯಲು ಮುಂದೆ ಓದಿ... 

ಜಿಂಬಾಬ್ವೆ ಪ್ರವಾಸಕ್ಕೆ ತೆರಳಿರುವ ತಂಡದಲ್ಲಿ ಇರಬಹುದೆಂದು ನಿರೀಕ್ಷಿಸಲಾಗಿದ್ದ ಆರು ಆಟಗಾರರು ಪತ್ತೆಗಿಲ್ಲ. ಇದಕ್ಕೆ ಕಾರಣವೇನು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅವರಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಮುಂತಾದವರು ಹೆಸರು ಕೇಳಿಬಂದಿದೆ.

ಟಿ20 ವಿಶ್ವಕಪ್ ವೇಳೆ ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಗಾರರು ತಂಡವನ್ನು ಆಯ್ಕೆ ಮಾಡಿದ್ದಾರೆ . ಶುಭಮನ್ ಗಿಲ್ ನಾಯಕತ್ವದಲ್ಲಿ ಯುವ ಆಟಗಾರಾರ ಪಡೆ ಕಣಕ್ಕಿಳಿಯಲಿದೆ.  ವಿಶ್ವಕಪ್ ತಂಡದಲ್ಲಿದ್ದ ಮೂವರು ಆಟಗಾರರಾದ ಶಿವಂ ದುಬೆ, ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಅವರು ಇನ್ನೂ ಬರ್ಬೋಡಾಸ್‌ನಿಂದ ಇಂತಿರುಗದ ಕಾರಣ ಅಲ್ಲಿಯವರೆಗೂ ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಪರತಿಭೆಗಳಿಗೆ ತಂಡದಲ್ಲಿ ಅವಕಾಶ ಕೊಡಲಾಗಿದೆ. 

ಇದನ್ನೂ ಓದಿ: ಪಿಚ್‌ನ ಮಣ್ಣು ತಿಂದ ಕಾರಣ ಬಿಚ್ಚಿಟ್ಟ ರೋಹಿತ್‌: ಗೆಲ್ಲಲ್ಲು ಆಸರೆಯಾದ ಮಣ್ಣಿಗೆ ಕೃತಜ್ಞತೆ..!

ಈ ಮೂವರ ಸ್ಥಾನಕ್ಕೆ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಉಮ್ರಾನ್ ಮಲಿಕ್, ವರುಣ್ ಚಕ್ರವರ್ತಿ, ಮಯಾಂಕ್ ಯಾದವ್, ಯಶ್ ದಯಾಳ್ ಅವರಂತಹ ಆಟಗಾರರನ್ನು ಆಯ್ಕೆಗಾರರು ಕಡೆಗಣಿಸಿದ್ದಾರೆ.

ರಿಷಬ್ ಪಂತ್ ಆಗಮನದೊಂದಿಗೆ, ಇಶಾನ್ ಕಿಶನ್ ಅವರನ್ನು ವಿಶ್ವಕಪ್‌ನಿಂದ ಬದಿಗಿಟ್ಟರು. ಆದರೆ ನಂತರ ಕನಿಷ್ಠ ಅವರನ್ನು ಜಿಂಬಾಬ್ವೆ ಪ್ರವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು ಆದರೆ ಇದೀಗ ಹುಸಯಾಗಿರುವ ಕಾರಣ ಅವರ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ. ಜಿಂಬಾಬ್ವೆ ಪ್ರವಾಸಕ್ಕೆ ಅವರ ಬದಲಿಗೆ ಧ್ರುವ ಜುರೆಲ್, ಸಂಜು ಸ್ಯಾಮ್ಸನ್ ಮತ್ತು ಇತ್ತೀಚೆಗೆ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಿಕೊಲ್ಳಲಾಗಿದೆ. 

ಇದೀಗ ಇಶಾನ್ ಕಿಶನ್ ಅವರನ್ನು ಉದ್ದೇಶಪೂರ್ವಕವಾಗಿಯೇ  ಪಕ್ಕಕ್ಕೆ ಇಟ್ಟಿದ್ದಾರೆ ಎನ್ನುವ ಶಂಕೆ ಕೇಳಿ ಬರುತ್ತಿದೆ. ಐಪಿಎಲ್ ವಿಜೇತ ನಾಯಕ ಶ್ರೇಯಸ್ ಅಯ್ಯರ್ ಅವರನ್ನೂ ಆಯ್ಕೆಗಾರರು ಕಡೆಗಣಿಸಿದ್ದಾರೆ.

ಇದನ್ನೂ ಓದಿ: ಜಿಂಬಾವೆ ಪ್ರವಾಸಕ್ಕೆ ರೆಡಿಯಾಯ್ತು ಟೀಂ ಇಂಡಿಯಾ ಪ್ಲೇಯಿಂಗ್‌ XI: ತಂಡ ಸೇರಲಿದ್ದಾರೆ ಸನ್‌ರೈಸರ್ಸ್‌ ಯುವ ಆಟಗಾರ..!

ವಾಸ್ತವವಾಗಿ, ಈ ಇಬ್ಬರು ಆಟಗಾರರು ತಮ್ಮ ಬಿಸಿಸಿಐ ಕೇಂದ್ರ ಒಪ್ಪಂದಗಳನ್ನು ಸಹ ಕಳೆದುಕೊಂಡಿದ್ದಾರೆ. ಶ್ರೇಯಸ್ ಐಪಿಎಲ್ ನಲ್ಲಿ ಮಿಂಚುವ ಮೂಲಕ ಆಯ್ಕೆಗಾರರೊಂದಿಗೆ ಪರೋಕ್ಷವಾಗಿ ಗುದ್ದಾಡಿದರು. ಇದರಿಂದಾಗಿ ಇವರಿಬ್ಬರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ವಾದ ಕೇಳಿ ಬರುತ್ತಿದೆ.

ಆರ್‌ಸಿಬಿ ಪರ ಆಡಿದ ಯಶ್ ದಯಾಳ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಸಂದೀಪ್ ಶರ್ಮಾ ಅವರನ್ನು ಆಯ್ಕೆಗಾರರು ನಿರ್ಲಕ್ಷಿಸಿದ್ದು, ಯುವ ತಂಡವನ್ನು ಆಯ್ಕೆ ಮಾಡಬೇಕಾದರೆ ಇಶಾನ್ ಮತ್ತು ಶ್ರೇಯಸ್ ಅವರನ್ನು ಬದಿಗಿಟ್ಟರೂ ಮಯಾಂಕ್, ವರುಣ್, ಉಮ್ರಾನ್ ಅವರಂಥವರನ್ನು ಆಯ್ಕೆ ಮಾಡಬೇಕಿತ್ತು ಎನ್ನುವ ಚರ್ಚೆಗಳು ಇದೀಗ ಶುರುವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News